ದರ್ಶನ್ ಗ್ಯಾಂಗ್‌ಗೆ ಬೇಲ್ ಸಿಕ್ಕರೂ ನಾಲ್ವರು ಅತಂತ್ರ, ನಡು ನೀರಿನಲ್ಲಿ ಕೈಬಿಟ್ರಾ ನಟ?

ನಟ ದರ್ಶನ್ ಗ್ಯಾಂಗ್ ಪ್ರಮುಖರಿಗೆ ಕೋರ್ಟ್ ಜಾಮೀನು ನೀಡಿದೆ. ಆದರೆ ಈ ಪೈಕಿ ನಾಲ್ವರು ಅತಂತ್ರರಾಗಿದ್ದಾರೆ. ಈ ನಾಲ್ವರನ್ನು ನಡು ನೀರಿನಲ್ಲಿ ಕೈಬಿಟ್ರಾ ನಟ ದರ್ಶನ್?

First Published Dec 15, 2024, 12:12 AM IST | Last Updated Dec 15, 2024, 12:12 AM IST

ಬೆಂಗಳೂರು(ಡಿ.14) ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಹಾಗೂ 12  ಮಂದಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.  17 ಆರೋಪಿಗಳ ಪೈಕಿ 12 ಮಂದಿಗೆ ಜಾಮೀನು ಸಿಕ್ಕಿದೆ.ಇನ್ನುಳಿದ ಐವರಿಗೆ ಜಾಮೀನು ಸಿಕ್ಕಿಲ್ಲ. ಐವರು ಆರೋಪಿಗಳ ಪೈಕಿ ನಾಲ್ಕು ಮಂದಿ ಇನ್ನೂ ಕೋರ್ಟ್‌ಗೆ ಜಾಮೀನು ಹಾಕಿಲ್ಲ. ಈ ನಾಲ್ಕು ಆರೋಪಿಗಳ ಮನೆಯವರಿಗೆ ವಕೀಲರಿಗೆ ದುಡ್ಡು ನೀಡಿ ಬಿಡಿಸಿಕೊಂಡು ಬರುವ ಶಕ್ತಿಯೂ ಇಲ್ಲ. ಈ ಆರೋಪಿಗಳ ಪೋಷಕರು, ನಟ ದರ್ಶನ್ ಸಹಾಯ ಮಾಡುವ ನಂಬಿಕೆ ಇದೆ ಎಂದಿದ್ದಾರೆ.