ರೈತ ಪ್ರತಿಭಟನಾಕಾರರ ಮೇಲೆ ಆಶ್ರುವಾಯು ಪ್ರಯೋಗಿಸಿದ ಹರ್ಯಾಣ ಪೊಲೀಸ್!
ವಿವಿದ ಬೇಡಿಕೆಗಳ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಜಲಫಿರಂಗಿ, ಆಶ್ರುವಾಯು ಸಿಡಿಸಿದ್ದಾರೆ.
ಹರ್ಯಾಣ(ಡಿ.14) ವಿವಿದ ಬೇಡಿಕೆಗಳ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಸುದೀರ್ಘ ದಿನಗಳನ್ನುಪೂರೈಸಿದೆ. ಕನಿಷ್ಠ ಬೆಂಬಲ ಬೆಲೆ ಸೇರದಂತೆ ಹಲವು ಬೇಡಿಕೆಗಳನ್ನು ರೈತರು ಮುಂದಿಟ್ಟಿದ್ದಾರೆ. ದೆಹಲಿಯತ್ತ ನುಗ್ಗುತ್ತಿದ್ದ ಪ್ರತಿಭಟನಾಕಾರರನ್ನು ಹರ್ಯಾಣ ಪೊಲೀಸರು ತಡೆದಿದ್ದಾರೆ. ಪ್ರತಿಭಟನಕಾರರ ಮೇಲೆ ಆಶ್ರುವಾಯು, ಜಲಫಿರಂಗಿ ಸಿಡಿಸಿದ್ದಾರೆ.