ಇನ್‌ಸ್ಟಾಗ್ರಾಮ್: ಮಾಜಿಯರನ್ನು ಫಾಲೋ ಮಾಡ್ತಾರೆ ಸಲ್ಮಾನ್ ; ಐಶ್ವರ್ಯಾ ರೈ ಇದ್ದಾರಾ?
ಸಲ್ಮಾನ್ ಖಾನ್ (Salamna Khan) Instagram ನಲ್ಲಿ 59.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಆದರೆ ಅವರು ತಮ್ಮ ಇಬ್ಬರು ಮಾಜಿ ಗೆಳತಿಯರು ಸೇರಿ 36 ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಐಶ್ವರ್ಯಾ ರೈ (Aishwarya Rai) ಹೆಸರು ಸೇರಿದೆಯೋ ಇಲ್ಲವೋ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಸಲ್ಮಾನ್ ಖಾನ್ ಅವರು Instagram ನಲ್ಲಿ 59.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಆದರೆ ಸಲ್ಮಾನ್ ಕೇವಲ 36 ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಅವರ ಕೆಲವು ಆಪ್ತ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಅವರ ಕೆಲವು ರೂಮರ್ಡ್ ಗರ್ಲ್‌ಫ್ರೆಂಡ್ಸ್ ಸಹ ಸೇರಿದ್ದಾರೆ.
ಸಲ್ಮಾನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ ತಮ್ಮ ಸಿನಿಮಾಗಳ ಬಗ್ಗೆ ಅಪ್‌ಡೇಟ್‌ಗಳ ಜೊತೆಗೆ. ತಮ್ಮ ವೈಯಕ್ತಿಕ ಜೀವನದ ಮಾಹಿತಿಯನ್ನೂ ಹಂಚಿಕೊಳ್ಳುತ್ತಾರೆ.
ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಮತ್ತು ಸಹೋದರಿ ಅರ್ಪಿತಾ ಖಾನ್ ಶರ್ಮಾ ಸೇರಿ ಸಲ್ಮಾನ್ ಖಾನ್ ಅವರ ಕುಟುಂಬ ಸದಸ್ಯರನ್ನು Instagram ನಲ್ಲಿ ಅನುಸರಿಸುತ್ತಾರೆ.
ಸಲ್ಮಾನ್ ಖಾನ್ ಅವರ ಸಹ ಕಲಾವಿದೆ ಜಾಕ್ವೆಲಿನ್ ಫರ್ನಾಂಡಿಸ್ ಜೊತೆಯೂ ಹೆಸರು ಕೇಳಿಬಂದಿತು. ಸಲ್ಮಾನ್ ಅವರು ಜಾಕ್ವೆಲಿನ್ ಅವರ ಜೊತೆಗೆ ಡೈಸಿ ಶಾ ಮತ್ತು ಸೂರಜ್ ಪಾಂಚೋಲಿ ಅವರನ್ನು ಅನುಸರಿಸುತ್ತಾರೆ.
ಇವರ ರೂಮರ್ಡ್ ಗರ್ಲ್‌ಫ್ರೆಂಡ್ ಲುಲಿಯಾ ವಂತೂರ್ ಅವರನ್ನು ಸಹ ಅನುಸರಿಸುತ್ತಾರೆ. ಈ ಪಟ್ಟಿಯಲ್ಲಿ ಅವರ ಮಾಜಿ ಗೆಳತಿಯರಾದ ಕತ್ರಿನಾ ಕೈಫ್ ಮತ್ತು ಸಂಗೀತಾ ಬಿಜಲಾನಿ ಅವರ ಹೆಸರೂ ಸೇರಿದೆ.
ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಲವ್ ಸ್ಟೋರಿ ಹಾಗೂ ಬ್ರೇಕಪ್ ಕಥೆಗಳು ಇಂದಿಗೂ ಟ್ರೆಂಡ್ ಆಗುತ್ತಲೇ ಇರುತ್ತದೆ ಮತ್ತು ಈ ಜೋಡಿಯ ಬಗ್ಗೆ ಅಭಿಮಾನಿಗಳಲ್ಲಿ ಕೂತುಹಲ ಹಾಗೇ ಉಳಿದಿದೆ. ಆದರೆ ಸಲ್ಮಾನ್ ಫಾಲೋ ಮಾಡುತ್ತಿರವರ ಲಿಸ್ಟ್‌ನಲ್ಲಿ ಐಶ್ವರ್ಯಾ ರೈ ಇಲ್ಲ
ಸಲ್ಮಾನ್ ಖಾನ್ ಮದುವೆ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ನಟಿ ಮತ್ತು ಮಾಜಿ ಮಿಸ್ ಇಂಡಿಯಾ ಸಂಗೀತಾ ಬಿಜ್ಲಾನಿ. ಸಲ್ಮಾನ್ ಒಮ್ಮೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಅವರ ಮದುವೆಯ ದಿನಾಂಕವನ್ನು ಮೇ 27, 1994 ರಂದು ನಿಗದಿಪಡಿಸಲಾಯಿತು. ಸಲ್ಮಾನ್ ಮತ್ತು ಸಂಗೀತಾ ಅವರ ಮದುವೆಯ ಆಮಂತ್ರಣಗಳನ್ನು ಸಹ ಮುದ್ರಿಸಲಾಗಿತ್ತು.
ಇದರ ನಡುವೆ ಪಾಕಿಸ್ತಾನಿ-ಅಮೆರಿಕನ್ ನಟಿ ಸೋಮಿ ಅಲಿ ಅವರೊಂದಿಗಿನ ಸಲ್ಮಾನ್ ಸಂಬಂಧವು ಮುನ್ನೆಲೆಗೆ ಬಂದಿತು, ನಂತರ ಮದುವೆಗೆ ಒಂದು ತಿಂಗಳ ಮೊದಲು, ಸಲ್ಮಾನ್ ಮತ್ತು ಸಂಗೀತಾ ಬೇರೆಯಾದರು
ಆದರೆ ಸಂಗೀತಾ ಬಿಜಲಾನಿ ಅವರೊಂದಿಗಿನ ಸಂಬಂಧಗಳು ಇಂದಿಗೂ ಉತ್ತಮವಾಗಿವೆ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಸಲ್ಮಾನ್ ಸಂಗೀತಾ ಅವರನ್ನು ಫಾಲೋ ಮಾಡುತ್ತಿದ್ದಾರೆ.
ವದಂತಿಗಳ ಪ್ರಕಾರ, ಸಲ್ಮಾನ್ ಕತ್ರಿನಾ ಕೈಫ್ ಅವರೊಂದಿಗೆ ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಮೈನೆ ಪ್ಯಾರ್ ಕ್ಯೂನ್ ಕಿಯಾದಿಂದ ಟೈಗರ್ ಜಿಂದಾ ಹೈವರೆಗೆ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.