ಕಿಚ್ಚ ಸುದೀಪ್ ಗೆ ಪತ್ನಿ ಕಂಡ್ರೆ ಭಯಾನಾ? ದಾಂಪತ್ಯದ ಗುಟ್ಟು ಬಿಚ್ಚಿಟ್ಟ ಪ್ರಿಯಾ
ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಯಾವಾಗ್ಲೂ ಕಾತರರಾಗಿರ್ತಾರೆ. ಪ್ರೆಸ್ ಮೀಟ್ ನಲ್ಲಿ ಪಾಲ್ಗೊಂಡಿದ್ದ ಪ್ರಿಯಾ ಸುದೀಪ್, ಸುದೀಪ್ ಹಾಗೂ ಅವರ ನಡುವೆ ಭಯ ಇದ್ಯಾ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಸುದೀಪ್ ಕಂಡ್ರೆ ಭಯಾನಾ?
ಕಿಚ್ಚ ಸುದೀಪ್ ಕಂಡ್ರೆ ನಿಮಗೆ ಭಯವಾ ಅಂತ ಪತ್ರಕರ್ತರು ಕೇಳಿದ್ದಾರೆ. ಅದಕ್ಕೆ ನಗ್ತಾ ಉತ್ತರ ನೀಡಿದ್ದಾರೆ ಪ್ರಿಯಾ ಸುದೀಪ್. ನನಗೆ ಮೊದಲಿಂದ್ಲೂ ಭಯ ಇಲ್ವಲ್ಲ ಎಂದ ಪ್ರಿಯಾ ಸುದೀಪ್, ನನ್ನನ್ನು ಕಂಡ್ರೆ ಸುದೀಪ್ ಅವರಿಗೆ ಭಯ ಇರಬಹುದು ಅಂತ ನಕ್ಕಿದ್ದಾರೆ.
ಕಮ್ಯೂನಿಕೇಷನ್ ಮುಖ್ಯ
ಮಾತು ಮುಂದುವರೆಸಿದ ಪ್ರಿಯಾ ಸುದೀಪ್, ಸುದೀಪ್ ಅವರಿಗೂ ನನ್ನನ್ನು ಕಂಡ್ರೆ ಭಯ ಇಲ್ಲ ಎಂದಿದ್ದಾರೆ. ನಾವಿಬ್ಬರೂ ಒಳ್ಳೆ ಫ್ರೆಂಡ್ಸ್. ತುಂಬಾ ವರ್ಷಗಳ ಫ್ರೆಂಡ್ಶಿಪ್ ಆದ್ಮೇಲೆ ನಾವು ಮದುವೆ ಆಗಿದ್ದೇವೆ. ಅದನ್ನೇ ಕಂಟಿನ್ಯೂ ಮಾಡಿಕೊಂಡು ಬಂದಿದ್ದೇವೆ. ಇಬ್ಬರ ಮಧ್ಯೆ ಜಗಳ ಇದೆ. ಸಣ್ಣಪುಟ್ಟ ಜಗಳ ನಡಿತಿರುತ್ತೆ. ಭಯ ಅನ್ನೋದು ನಮ್ಮ ಮಧ್ಯೆ ಇಲ್ಲ. ಚೆನ್ನಾಗಿ ಕಮ್ಯೂನಿಕೇಷನ್ ಇರಬೇಕು. ಭಯಕ್ಕೆ ಅಲ್ಲಿ ಜಾಗ ಇರೋದಿಲ್ಲ ಅಂತ ಪ್ರಿಯಾ ಸುದೀಪ್ ಹೇಳಿದ್ದಾರೆ.
ಸಂಚಿತ್ ಗೆ ಭಯ ಇರ್ಬಹುದು
ಸಂಚಿತ್ ನಮ್ಮ ಮಗ ಅಂತಾ ಪ್ರಿಯಾ ಯಾವಾಗ್ಲೂ ಹೇಳ್ತಾನೆ ಬಂದಿದ್ದಾರೆ. ಮ್ಯಾಂಗೋ ಪಚ್ಚ ಪ್ರೆಸ್ ಮೀಟ್ ನಲ್ಲಿ ಕೂಡ ಅವರು ಈ ವಿಷ್ಯ ಹೇಳಿದ್ದಾರೆ. ಸಂಚಿತ್ ನಮ್ಮ ಮಗ. ಅವನಿಗೆ ನನ್ನ ಮೇಲೆ ಭಯ ಇರ್ಬಹುದು ಅಂತ ಪ್ರಿಯಾ ಹೇಳಿದ್ದಾರೆ.
ಮ್ಯಾಂಗೋ ಪಚ್ಚ
ಸದ್ಯ ಸ್ಯಾಂಡಲ್ ವುಡ್ ನಲ್ಲಿ ಮ್ಯಾಂಗೋ ಪಚ್ಚ ಸಿನಿಮಾ ಸುದ್ದಿ ಮಾಡ್ತಿದೆ. ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಚಿತ್ರದ ನಾಯಕರಾಗಿರೋದು ವಿಶೇಷ. ಈ ಸಿನಿಮಾವನ್ನು ಕೆಆರ್ಜಿ ಸ್ಟುಡಿಯೋಸ್ ಮತ್ತು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ನಿರ್ಮಿಸಿದೆ. ಸಿನಿಮಾ ಜೂನ್ 5 ರಂದು ತೆರೆಗೆ ಬರಲಿದೆ. ಚಿತ್ರದ ಪೋಸ್ಟರ್ ಹೆಚ್ಚು ಗಮನ ಸೆಳೆದಿದೆ. ಇದ್ರಲ್ಲಿ ಸಂಚಿತ್ , ಸುದೀಪ್ ರಂತೆ ಕಾಣ್ತಿದ್ದಾರೆ. ಸಂಚಿತ್ ಸ್ಟೈಲ್ ಸುದೀಪ್ ಅವರನ್ನು ಹೋಲ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

