ಮೊದಲ ಬಾರಿಗೆ ಅರ್ಜುನ್ ಮನೆಗೆ ಹೇಗೆ ಹೋಗಿದ್ದರು ನೋಡಿ ಮಲೈಕಾ
ಬಾಲಿವುಡ್‌ನ ಹಾಟ್ ದಿವಾ 46 ವರ್ಷದ ಮಲೈಕಾ ಆರೋರಾ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಮನೆಗೆ ಮೊದಲ ಬಾರಿಗೆ ಹೋದ ವಿಷಯ ಚರ್ಚೆಯಲ್ಲಿದೆ. ಈ ಸುದ್ದಿ ಹೆಚ್ಚು ವೈರಲ್ ಆಗುತ್ತಿದೆ. ಹೇಗೆ ಹೋಗಿದ್ದರು ನೋಡೋಣ?
ಮೊದಲ ಬಾರಿಗೆ ಅರ್ಜುನ್ ಕಪೂರ್ ಇಡೀ ಕುಟುಂಬವನ್ನು ಭೇಟಿಯಾಗಲು ಹೋಗುವಾಗ ಮಲೈಕಾ ಮದುಮಗಳಂತೆ ಕಾಣುತ್ತಿದ್ದರಂತೆ. ವಾಸ್ತವವಾಗಿ, ಆದು ಸೋನಮ್ ಕಪೂರ್‌ರ ಬರ್ಥ್‌ಡೇ ಪಾರ್ಟಿಯಾಗಿತ್ತು. ಆದರೆ ಮಲೈಕಾ ಅ ಸಂದರ್ಭಕ್ಕೆ ಸಂಪೂರ್ಣವಾಗಿ ವಿಭಿನ್ನ ಸ್ಟೈಲ್‌ನಲ್ಲಿ ಕಾಣಿಸಿಕೊಂಡರು.
ಮಲೈಕಾ, ಡಿಸೈನರ್ ರೋಹಿತ್ ಬಾಲ್ ಅವರ ಬಿಳಿ ಮತ್ತು ಗೋಲ್ಟನ್ ಸೀರೆಯಲ್ಲಿ ಕಾಣಿಸಿಕೊಂಡರು, ಕೆಂಪು ಮತ್ತು ಚಿನ್ನದ ಹೂವುಗಳ ಎಳೆಗಳಿಂದ ಕಸೂತಿ ಮಾಡಿದ್ದ ಸೀರೆ ಆಗಿತ್ತು. ಈ ಸೀರೆಯ ಅಂದವನ್ನು ಸ್ಲೀವ್ಸ್ ಬ್ಯಾಕ್‌ಲೆಸ್ ಬ್ಲೌಸ್ ಹೆಚ್ಚಿಸಿತ್ತು.
ತೆಳು ಮೇಕಪ್, ಹೆವಿ ಹೈಲೈಟರ್ ಮತ್ತು ಸ್ಟೇಟ್ಮೆಂಟ್ ಆಭರಣಗಳು ಮಲೈಕಾರ ಲುಕ್‌ಗೆ ಪೂರಕವಾಗಿದ್ದವು . ಅನ್‌ಕಟ್ ಡೈಮಂಡ್ ರೀಗಲ್ ಚೋಕರ್ ಮತ್ತು ದೊಡ್ಡ ಬೈತಲೆ ಬೊಟ್ಟು ಒಳಗೊಂಡಿತ್ತು.
बता दें कि मलाइका पहली बार अर्जुन कपूर के पूरे परिवार से मिलने एकदम दुल्हन की तरह सजकर तैयार होकर पहुंची थीं। दरअसल, यह मौका सोनम कपूर के बर्थडे पार्टी का था, जहां वे पार्टी थीम से हटकर एकदम अलग स्टाइल में नजर आईं।
ಅರ್ಬಾಜ್ ಖಾನ್ ಜೊತೆ 5 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಮಲೈಕಾ ವಿವಾಹವಾಗಿದ್ದರು. ಮದುವೆಗಾಗಿ ತಾನೇ ಮೊದಲು ಅರ್ಬಾಜ್‌ಗೆ ಪ್ರಪೋಸ್ ಮಾಡಿದ್ದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಇದರೊಂದಿಗೆ, ಇಬ್ಬರೂ ಮೊದಲ ನೋಟದಲ್ಲೇ ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಇಬ್ಬರೂ ಒಬ್ಬರಿಗಾಗಿ ಒಬ್ಬರು ಇರುವುದು ಎಂದು ಅರಿತುಕೊಂಡೆವು ಎಂದು ಅವರು ಹೇಳಿದ್ದರು.
ಮದುವೆಯಾದ 19 ವರ್ಷಗಳ ನಂತರ, ಮಲೈಕಾ ಅರ್ಬಾಜ್‌ಗೆ ವಿಚ್ಛೇದನ ನೀಡಲು ನಿರ್ಧರಿಸಿದರು ಮತ್ತು ಇಬ್ಬರೂ 2017 ರಲ್ಲಿ ಬೇರೆಯಾದರು.
ವಾಸ್ತವವಾಗಿ, ಅರ್ಬಾಜ್‌ಗೆ ಬೆಟ್ಟಿಂಗ್ ಅಭ್ಯಾಸವಿತ್ತು ಮತ್ತು ಆ ಹೊತ್ತಿಗೆ 3 ಕೋಟಿ ಕಳೆದುಕೊಂಡಿದ್ದರು. ಒಮ್ಮೆ, ಐಪಿಎಲ್‌ಲ್ಲಿ ಬೆಟ್ಟಿಂಗ್ ಪಟ್ಟಿಯಲ್ಲಿ ಅರ್ಬಾಜ್ ಹೆಸರು ಕೂಡ ಕಾಣಿಸಿಕೊಂಡಿತು.
ಗಂಡನ ಈ ಅಭ್ಯಾಸದಿಂದ ಬೇಸರಗೊಂಡ ನಟಿ ವಿಚ್ಚೇದನ ಪಡೆಯಲು ನಿರ್ಧರಿಸಿದರು ಎಂದು ಮಾಧ್ಯಮ ವರದಿಗಳು ಹೇಳುತ್ತವೆ.
ಮಲೈಕಾ ಮುರಿದ ಸಂಬಂಧಗಳು ಮತ್ತು ಹೊಸ ಸಂಬಂಧಗಳ ಬಗ್ಗೆಯೂ ಮಾತನಾಡಿದರು. 'ಹೌದು, ಏಕೆ ಬೇಡ. ಸಂಬಂಧ ಮುರಿದು ಬಿದ್ದ ನಂತರ ಮುಂದೆ ಸಾಗುವುದು ಅವಶ್ಯಕ. ಸಂಬಂಧ ಮುರಿದುಬಿದ್ದ ನಂತರ ಮತ್ತೆ ಯಾರನ್ನಾದರೂ ಡೇಟ್ ಮಾಡುವುದು ಕಷ್ಟ, ಆದರೆ ಅದು ಅಸಾಧ್ಯವಲ್ಲ' ಎಂದು ಹೇಳಿದ್ದರು.
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಈಗ ಇಬ್ಬರೂ ತಮ್ಮ ಸಂಬಂಧ ಬಹಿರಂಗವಾಗಿದೆ. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೆ ಹಾಲಿಡೇಗೂ ಹೋಗುತ್ತಾರೆ.
'ನನಗೆ ಸಮುದ್ರ ತೀರದಲ್ಲಿರುವ ವೈಟ್ ವೆಡ್ಡಿಂಗ್ ಬೇಕು. ಮದುವೆಯಲ್ಲಿ ಎಲ್ಲಾ ವಸ್ತುವು ಬಿಳಿಯ ಬಣ್ಣದಾಗಿರಬೇಕೆಂದು ನಾನು ಬಯಸುತ್ತೇನೆ. ಎಲ್ಲೀ ಸಾಬ್ ಗೌನ್ ಧರಿಸುತ್ತೇನೆ. ಬ್ರೈಡ್ಸ್‌ಮೆಡ್ ನನ್ನ ಗೆಳೆತಿಯರ ಗ್ಯಾಂಗ್ ಆಗಿರುತ್ತದೆ' ಎಂದು ಚಾಟ್ ಶೋನಲ್ಲಿ ತಮ್ಮ ಮದುವೆಯ ಬಗ್ಗೆ ನಟಿ ಮಾತನಾಡಿದರು.