ಐಶ್ವರ್ಯಾ ರೈ ಬಗ್ಗೆ ಈ ಸತ್ಯ ರಿವೀಲ್ ಮಾಡಿದ ನಿರ್ದೇಶಕ ಸುಭಾಷ್ ಘಾಯ್!
ಬಾಲಿವುಡ್‌ನ ಅತಿ ಸುಂದರ ಹಾಗೂ ಟ್ಯಾಲೆಂಟ್ಡ್ ನಟಿ ಐಶ್ವರ್ಯಾ ರೈ ಎಂಬುಂದರಲ್ಲಿ ಎರಡು ಮಾತಿಲ್ಲ. ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಈ ನಟಿ ಹಲವು ಖಾತ್ಯ ನೀರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅದರಲ್ಲಿ ಒಬ್ಬರು ಸುಭಾಷ್ ಘಾಯ್. ಇವರು ನಟಿಯ ಬಗ್ಗೆ ಹೇಳಿರುವ ಸತ್ಯವೊಂದು ಸಖತ್ ವೈರಲ್ ಆಗಿದೆ. ಏನದು?
ಬಾಲಿವುಡ್‌ನ ದಿವಾ ಐಶ್ವರ್ಯಾ ರೈ ಕೆಲಸ ಮಾಡಿರುವ ಹಲವು ಖ್ಯಾತ ನೀರ್ದೇಶಕರಲ್ಲಿ ಸುಭಾಷ್ ಘಾಯ್ ಒಬ್ಬರು.
ಐಶ್ವರ್ಯಾರ ತಾಲ್ ನಿರ್ದೇಶಕ ಸುಭಾಷ್ ಘಾಯ್ ನಟಿಯ ಬಗ್ಗೆ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಐಶ್ವರ್ಯಾ ರೈ ತನ್ನ ಬಾಲಿವುಡ್ ವೃತ್ತಿಜೀವನವನ್ನು ಪ್ರಾರಂಭಿಸಿದ ಸಮಯದ ಪ್ರಮುಖ ಥ್ರೋಬ್ಯಾಕ್ ಕಥೆ ಇದು.
ಶಾರುಖ್ ಖಾನ್ ಜೊತೆ ನಟಿಸಿದ ಜೋಶ್ ಚಿತ್ರದ ಯಶಸ್ಸಿನೊಂದಿಗೆ ಅವರು ಫೆಮಸ್ ಆದ ಸಮಯ ಅದು.
ಇದಕ್ಕೂ ಮೊದಲು, ಐಶ್ ಸುಭಾಷ್ ಅವರ ತಾಲ್ ಸಿನಮಾದಲ್ಲಿ ಕೆಲಸ ಮಾಡಿದರು ಹಾಗೂ ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು.
'ಅವರು ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ಟಾಪ್ 10 ನಾಯಕಿಯರಲ್ಲಿ ಒಬ್ಬರು. ಅಪರೂಪದ ವಿಷಯವೆಂದರೆ ಪುರುಷರು ಮತ್ತು ಮಹಿಳೆಯರು ಅವಳನ್ನು ಪ್ರೀತಿಸುತ್ತಾರೆ' ಎಂದು ಒಮ್ಮೆ ಸಂದರ್ಶನವೊಂದರಲ್ಲಿ, ಘಾಯ್ ಐಶ್ ಬಗ್ಗೆ ಮಾತನಾಡಿದ್ದರು.
'ಸ್ಟಾರ್ಸ್ ಬ್ಯುಸಿನೆಸ್ ಪ್ರಾಡೆಕ್ಟ್‌ಗಳಾಗಿದ್ದಾರೆ ಮತ್ತು ಅವರು ತಮ್ಮನ್ನು ತೀವ್ರವಾಗಿ ರಕ್ಷಿಸಿಕೊಳ್ಳುತ್ತಾರೆ' ಎಂದು ಹೇಳಿದ್ದರು.
'ಐಶ್ವರ್ಯಾರ ಪ್ರಫೋಶನಲ್ ಅಗ್ರೇಷನ್ ಮತ್ತು ಮಹತ್ವಾಕಾಂಕ್ಷೆಯನ್ನು ಇಂದಿನ ನಟರ ಸ್ವಾಭಾವಿಕ ಸ್ವಭಾವ ಹಾಗೂ ಅವಳು ತನ್ನ ಚಿತ್ರದಲ್ಲಿನ ಇತರ ಹುಡುಗಿಯರನ್ನು ಸೈಡ್‌ಲೈನ್ ಮಾಡಲು ತಿಳಿದಿದ್ದಾಳೆ' ಎಂದು ಸುಭಾಷ್ ಹೇಳಿದ್ದರು
ಜೋಶ್ ಸಿನಿಮಾದಲ್ಲಿ, ಐಶ್ವರ್ಯಾ ಅವರು ಪ್ರಿಯಾ ಗಿಲ್ ನೃತ್ಯ ಮಾಡಬೇಕಾದ ಹಾಡುಗಳನ್ನು ತೆಗೆದುಕೊಂಡು ತಮಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಸ್ಕ್ರಿಪ್ಟ್‌ಗೆ ಬದಲಾಯಿಸುವಂತೆ ಮಾಡಿದರು. ಜೋಶ್‌ನಲ್ಲಿ ಪ್ರಿಯಾ ಗಿಲ್ ಪಾತ್ರಕ್ಕೆ ಕತ್ತರಿಸಲು ಐಶ್ವರ್ಯ ಕಾರಣ ಎಂದು ಹೇಳಲಾಗಿದೆ
ನೀವು ಜೋಶ್ ಸಿನಿಮಾ ನೋಡಿದ್ದರೆ, ಪ್ರಿಯಾಗೆ ಯಾವುದೇ ಮುಖ್ಯವಾದ ಸೀನ್‌ಗಳನ್ನು ಹೊಂದಿಲ್ಲ ಎಂದು ಅರ್ಥವಾಗುತ್ತದೆ. ಜೋಶ್ ಕೇವಲ ಅಣ್ಣ- ತಂಗಿಯ ಬಾಂಡ್ ಸುತ್ತಸುತ್ತುತ್ತದೆ ಮತ್ತು ನಟ ಚಂದ್ರಚೂರ್ ಜೊತೆ ಐಶ್ವರ್ಯಾಳ ಪ್ರೇಮಕಥೆಯ ಮೇಲೆ ಕೇಂದ್ರೀಕರಿಸಲಾಗಿದೆ.