- Home
- Entertainment
- Cine World
- ಜೂನಿಯರ್ ಎನ್‌ಟಿಆರ್ ಚಿತ್ರದ ಫೋಟೋ ಔಟ್; ಪ್ರಶಾಂತ್ ನೀಲ್ ಪತ್ನಿಗೆ ಥ್ಯಾಂಕ್ಸ್ ಅಂದ್ರು ಫ್ಯಾನ್ಸ್
ಜೂನಿಯರ್ ಎನ್‌ಟಿಆರ್ ಚಿತ್ರದ ಫೋಟೋ ಔಟ್; ಪ್ರಶಾಂತ್ ನೀಲ್ ಪತ್ನಿಗೆ ಥ್ಯಾಂಕ್ಸ್ ಅಂದ್ರು ಫ್ಯಾನ್ಸ್
Director Prashanth Neel: ಕೆಜಿಎಫ್ ನಂತರ ಪ್ರಶಾಂತ್ ನೀಲ್ ಇಂಡಿಯಾದ ಟಾಪ್ ಡೈರೆಕ್ಟರ್ಸ್ ಗಳಲ್ಲಿ ಒಬ್ಬರಾಗಿ ಬದಲಾಗಿದ್ದಾರೆ. ಪ್ರಶಾಂತ್ ನೀಲ್ ಜೊತೆ ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಿಸಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ಕೆಜಿಎಫ್ 2 ನಂತರ ಪ್ರಶಾಂತ್ ನೀಲ್ ಪ್ರಭಾಸ್ ಜೊತೆ ತೆರೆಗೆ ತಂದ ಸಲಾರ್ ಚಿತ್ರ ಕೂಡ ಹಿಟ್ ಆಗಿದೆ.

ಪ್ರಶಾಂತ್ ನೀಲ್ ಹೆಂಡತಿ
ಕೆಜಿಎಫ್ ನಂತರ ಪ್ರಶಾಂತ್ ನೀಲ್ ಇಂಡಿಯಾದ ಟಾಪ್ ಡೈರೆಕ್ಟರ್ಸ್ ಗಳಲ್ಲಿ ಒಬ್ಬರಾಗಿ ಬದಲಾಗಿದ್ದಾರೆ. ಪ್ರಶಾಂತ್ ನೀಲ್ ಜೊತೆ ಪ್ಯಾನ್ ಇಂಡಿಯಾ ಚಿತ್ರಗಳನ್ನು ನಿರ್ಮಿಸಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ಕೆಜಿಎಫ್ 2 ನಂತರ ಪ್ರಶಾಂತ್ ನೀಲ್ ಪ್ರಭಾಸ್ ಜೊತೆ ತೆರೆಗೆ ತಂದ ಸಲಾರ್ ಚಿತ್ರ ಕೂಡ ಹಿಟ್ ಆಗಿದೆ. ಈಗ ಪ್ರಶಾಂತ್ ನೀಲ್ ಮತ್ತೊಬ್ಬ ತೆಲುಗು ಸ್ಟಾರ್ ಜೊತೆ ಸಿನಿಮಾ ಶುರು ಮಾಡಿದ್ದಾರೆ. ಆ ಸ್ಟಾರ್ ಯಾರೋ ಅಂತಾ ಬೇರೆ ಹೇಳಬೇಕಾಗಿಲ್ಲ. ಯಂಗ್ ಟೈಗರ್ ಎನ್ಟಿಆರ್, ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಸಿನಿಮಾ ರೀಸೆಂಟ್ ಆಗಿ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಶುರುವಾಗಿದೆ.
ಸುಮಾರು 2 ಸಾವಿರ ಜೂನಿಯರ್ ಆರ್ಟಿಸ್ಟ್ ಗಳ ಜೊತೆ ಪ್ರಶಾಂತ್ ನೀಲ್ ಅದ್ಧೂರಿಯಾಗಿ ಚಿತ್ರೀಕರಣ ಆರಂಭಿಸಿದ್ದಾರೆ.ಎನ್‌ಟಿಆರ್ ಶೂಟಿಂಗ್ ನಲ್ಲಿ ಜಾಯಿನ್ ಆಗೋಕೆ ಇನ್ನೂ ಟೈಮ್ ಬೇಕಾಗುತ್ತೆ. ಈ ಚಿತ್ರದ ಕಥೆಯ ಬಗ್ಗೆ ಅನೇಕ ಊಹಾಪೋಹಗಳು ಕೇಳಿ ಬರುತ್ತಿವೆ. ಬೆಂಗಾಲ್, ಈಶಾನ್ಯ ರಾಜ್ಯಗಳ ಹಿನ್ನೆಲೆಯಲ್ಲಿ ಎನ್‌ಟಿಆರ್, ನೀಲ್ ಚಿತ್ರ ಇರಬಹುದು ಅಂತಾ ಹೇಳ್ತಿದ್ದಾರೆ. ಕಳ್ಳಬಟ್ಟಿ, ಅಂಶಗಳೊಂದಿಗೆ ಪೀರಿಯಾಡಿಕ್ ಹಿನ್ನೆಲೆಯಲ್ಲಿ ನೀಲ್ ಭಾರಿ ಆಕ್ಷನ್ ಕಥೆಯನ್ನು ಸಿದ್ಧಪಡಿಸಿದಂತೆ ಕಾಣುತ್ತಿದೆ.
ಪ್ರಶಾಂತ್ ನೀಲ್
ಇತ್ತೀಚೆಗೆ ಪ್ರಶಾಂತ್ ನೀಲ್ ಹೆಂಡತಿ ಲಿಖಿತಾ ರೆಡ್ಡಿ ಈ ಚಿತ್ರ ಶುರುವಾದ ಹಿನ್ನೆಲೆಯಲ್ಲಿ ಊರ ಮಾಸ್ ಎಲಿವೇಶನ್ ಕೊಡ್ತಾ ಪೋಸ್ಟ್ ಮಾಡಿದ್ದಾರೆ. ಪ್ರಶಾಂತ್ ನೀಲ್ ಮೈಕ್ ಹಿಡಿದು ಶಾಟ್ ಹೇಳ್ತಿರೋ ದೃಶ್ಯಗಳನ್ನು ಲಿಖಿತಾ ರೆಡ್ಡಿ ಪೋಸ್ಟ್ ಮಾಡಿದ್ದಾರೆ. ಅವರು ಮೈಕ್ ಹಿಡಿದರೆ ಆಮೇಲೆ ನಡೆಯೋದು ಒಂದು ಇತಿಹಾಸ ಅಂತಾ ಎಲಿವೇಶನ್ ಕೊಟ್ಟಿದ್ದಾರೆ. ಡೆಡ್ಲಿಯೆಸ್ಟ್ ಶೋ ಡೌನ್ ಶುರುವಾಗಿದೆ. ವಿನಾಶಕ್ಕೆ ಅಡ್ಡೆಯಾದ ಪ್ರದೇಶಕ್ಕೆ ಸ್ವಾಗತ. ಜೂನಿಯರ್ ಎನ್ಟಿಆರ್ ಗಾಗಿ ಕಾಯೋಕೆ ಆಗುತ್ತಿಲ್ಲ ಅಂತಾ ಲಿಖಿತಾ ಒಂದು ರೇಂಜ್ ಹೈಪ್ ಕೊಟ್ಟಿದ್ದಾರೆ.
ಪ್ರಶಾಂತ್ ನೀಲ್
ನೋಡ್ತಿದ್ರೆ ಲಿಖಿತಾ ರೆಡ್ಡಿಗೆ ಜೂನಿಯರ್ ಎನ್‌ಟಿಆರರ್ ಅಂದ್ರೆ ತುಂಬಾ ಅಭಿಮಾನ ಇರೋ ಹಾಗೆ ಇದೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಅವರು ತಾರಕ್ ಜೊತೆಗಿನ ಪೋಸ್ಟ್ ಗಳನ್ನು ಕೂಡ ಹಾಕ್ತಾ ಇರ್ತಾರೆ. ಲಿಖಿತಾ ರೆಡ್ಡಿ, ಪ್ರಶಾಂತ್ ನೀಲ್ ಪ್ರೇಮ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಪ್ರಶಾಂತ್ ನೀಲ್
ಪ್ರಶಾಂತ್ ನೀಲ್ ಪೂರ್ತಿ ಹೆಸರು ಪ್ರಶಾಂತ್ ನೀಲಕಂಠಾಪುರಂ. ಸಿನಿಮಾಗೆ ಬಂದ ಮೇಲೆ ಅದನ್ನ ಶಾರ್ಟ್ ಆಗಿ ಪ್ರಶಾಂತ್ ನೀಲ್ ಅಂತಾ ಬದಲಾಯಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ತಂದೆ ತಾಯಿಯ ಊರು ಅನಂತಪುರ ಜಿಲ್ಲೆ. ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ. ಎಪಿ ಮಾಜಿ ಮಂತ್ರಿ ರಘುವೀರಾರೆಡ್ಡಿಗೆ ಪ್ರಶಾಂತ್ ನೀಲ್ ಸಹೋದರನ ಮಗ ಆಗ್ತಾರೆ.