ಸಾರಾಗೂ ಹಿರಿಯ ನಟ ದಿಲೀಪ್ ಕುಮಾರ್ ಜೊತೆ ಏನ್ ಸಂಬಂಧ?
ಬಾಲಿವುಡ್‌ನ ಸಾರಾ ಆಲಿ ಖಾನ್‌ರ ರಾಯಲ್ ಫ್ಯಾಮಿಲಿ ಹಿನ್ನಲೆ ಬಗ್ಗೆ ಎಲ್ಲರಿಗೂ ತಿಳಿದೆ ಇದೆ. ಸಾರಾ ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಹಾಗೂ ಕ್ರಿಕೆಟರ್ ಪಟೌಡಿ ಮನ್ಸೂರ್ ಆಲಿ ಖಾನ್ ಮೊಮ್ಮಗಳು. ಸೈಫ್ ಆಲಿ ಖಾನ್ ಮತ್ತು ಅಮೃತಾ ಸಿಂಗ್ ಪುತ್ರಿ. ಯಾವಾಗಲೂ ಸಾರಾರ ತಂದೆ ಕಡೆಯ ಫ್ಯಾಮಿಲಿ ಬಗ್ಗೆ ಮಾತ್ರ ಉಲ್ಲೇಖಿಸಲಾಗುತ್ತದೆ. ಆದರೆ ಸಾರಾ ತಾಯಿ ಅಮೃತಾ ಸಿಂಗ್ ಕಟುಂಬದ ಬಗ್ಗೆ ವಿವರಗಳು ತುಂಬಾ ಕಡಿಮೆ ಜನರಿಗೆ ಪರಿಚಯ. ಇಲ್ಲಿದೆ ವಿವರ.
ಸಾರಾ ಆಲಿ ಖಾನ್ ಹಿರಿಯ ನಟ ದಿಲೀಪ್ ಕುಮಾರ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ನಿಮಗೆ ಗೊತ್ತಾ?
ಸಾರಾ ರಾಯಲ್ ಫ್ಯಾಮಿಲಿಯ ಕುಡಿ. ಆದರೆ ಈ ಬಾರಿ ತಂದೆ ಸೈಫ್ ಅಲಿ ಖಾನ್ ಕುಟುಂಬದ ಬಗ್ಗೆ ಹೇಳುತ್ತಿಲ್ಲ. ತಾಯಿ ಅಮೃತಾಸಿಂಗ್ ಅವರ ಮನೆಯ ಕಡೆಯ ವಿವರ ಇಲ್ಲಿದೆ.
1950ರ ದಶಕದ ಲಿಂಕ್ ಹೊಂದಿದ್ದಾರೆ ಸಾರಾ ಎಂದರೆ ಆಶ್ಚರ್ಯ ಆಗುವುದು ಸಹಜ.
ಅಮೃತಾ ಸಿಂಗ್ 1940 ಮತ್ತು 1950ರ ದಶಕದ ಹಿರಿಯ ನಟಿ ಬೇಗಂ ಪ್ಯಾರಾ ಅವರ ಮೊಮ್ಮಗಳು.
ಅಮೃತಾ ಸಿಂಗ್ ತಾಯಿ ರುಖ್ಸಾನಾ ಸುಲ್ತಾನಾ ಮತ್ತು ತಂದೆ ಶಿವಿಂದರ್ ಸಿಂಗ್ ವಿರ್ಕ್ ಪಂಜಾಬಿ ಜಾಟ್ ಸಿಖ್.
ರುಖ್ಸಾನಾ ಬೇಗಂ ಪ್ಯಾರಾ ಅವರ ಸೋದರ ಸೊಸೆ. ಈ ಮೂಲಕ ಅಮೃತಾ ಸಿಂಗ್ ಬೇಗಂ ಪ್ಯಾರಾ ಅವರ ಗ್ರ್ಯಾಂಡ್ ನೀಸ್ ಮತ್ತು ಸಾರಾ ಗ್ರೇಟ್ ಗ್ರ್ಯಾಂಡ್ ನೀಸ್.
ಬೇಗಂ ಪ್ಯಾರಾ ಆ ಕಾಲ ಟಾಪ್ ಸ್ಟಾರ್ ಆಗಿದ್ದರು ಸೊಹ್ನಿ ಮಹಿವಾಲ್ (1946), ಜಂಜೀರ್ (1947), ರಾಜ್ ಕಪೂರ್ ಅವರೊಂದಿಗೆ ನೀಲ್ ಕಮಲ್ (1947) (1947), ನರ್ಗಿಸ್ ಅವರೊಂದಿಗೆ ಮೆಹೆಂದಿ (1947) ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಆದರೆ ಸಾರಾಗೂ ದಿಲೀಪ್ ಕುಮಾರ್‌ಗೂ ಹೇಗೆ ಸಂಪರ್ಕ? ಬೇಗಂ ಪ್ಯಾರಾ ದಿಲೀಪ್ ಕುಮಾರ್ ಅವರ ಸಹೋದರ ನಾಸಿರ್ ಖಾನ್ ಅವರನ್ನು ಮದುವೆಯಾದರು. ಹೀಗೆ ಸಾರಾ ಮತ್ತು ದಿಲೀಪ್ ಕುಮಾರ್ ದೂರದ ಸಂಬಂಧಿಗಳು.
ಪ್ರಸ್ತುತ ಸಾರಾ ಅಲಿ ಖಾನ್ ಅಕ್ಷಯ್ ಕುಮಾರ್ ಮತ್ತು ಧನುಷ್ ಜೊತೆ ನಟಿಸಿರುವ 'ಅತ್ರಂಗಿ ರೇ' ಸಿನಿಮಾದ ಚಿತ್ರೀಕರಣ ಮುಗಿಸಿದರು. ಈ ಚಿತ್ರದ ತಂಡಕ್ಕೆ ನಟ ಸೋಷಿಯಲ್ ಮೀಡಿಯಾ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.