ಸನ್ನಿ ಲಿಯೋನ್ ನಂಬರ್ ಕೇಳಿ, ಸುದ್ದಿಯಾಗಿದ್ದ ಕಬೀರ್ ಬೇಡಿ!
ಬಾಲಿವುಡ್ ಹಿರಿಯ ನಟ ಕಬೀರ್ ಬೇಡಿ ತನ್ನ ಪರ್ಸನಲ್ ಲೈಫ್‌ನಿಂದ ಸಾಕಷ್ಟು ಫೇಮಸ್. ಕಬೀರ್ ಬೇಡಿ ಒಟ್ಟು 4 ಬಾರಿ ಮದುವೆ ಆದವರು. ಗಂಡನಿಗೆ ವಿಧೇಯರಾಗಿದ್ದ ಮಾಡೆಲ್ ಕಮ್ ನಟಿ ಪ್ರೋತಿಮಾ ಬೇಡಿ ಪತಿಯ ರಾಸಲೀಲೆಯನ್ನು ಮುಕ್ತವಾಗಿ ತಮ್ಮ ಆಟೋ ಬಯೋಗ್ರಫಿಯಲ್ಲಿ ಬರೆದಿದ್ದರು. 70ನೇ ವಯಸ್ಸಿನಲ್ಲಿ ತಮಗಿಂತ 29 ವರ್ಷ ಚಿಕ್ಕವಳನ್ನು ಮದುವೆಯಾಗಿ ಬಾರಿ ಸುದ್ದಿ ಮಾಡಿದವರು. ಇನ್ನೂ ಬಾಲಿವುಡ್ ನಟಿ ಮಾಜಿ ಪ್ರೋನ್ ತಾರೆ ಸನ್ನಿ ಲಿಯೋನ್ ಯಾರಿಗೆ ಗೊತ್ತಿಲ್ಲ ಹೇಳಿ. ಹಿರಿಯ ನಟ ಕಬೀರ್ ಬೇಡಿ ಇತ್ತೀಚೆಗೆ ಪಡ್ಡೆ ಹುಡುಗರ ಕನಸಿನ ರಾಣಿ ಸನ್ನಿಯ ಫೋನ್ ನಂಬರ್ ಕೇಳಿರುವ ವಿಷಯ ವೈರಲ್ ಆಗಿತ್ತು. ಸನ್ನಿ ಅದಕ್ಕೇನು ಮಾಡಿದರು ಗೊತ್ತೇ?
ಪೂಜಾ ಬೇಡಿ ತಂದೆ ಕಬೀರ್ ಬೇಡಿ ಒಮ್ಮೆ ಸನ್ನಿ ಲಿಯೋನ್ ಮೊಬೈಲ್ ನಂಬರ್ ಕೇಳಿದರು ಎಂಬ ಸುದ್ದಿ ವೈರಲ್ ಆಗಿತ್ತು.
2020ರಲ್ಲಿ ನಡೆದ ಡಬ್ಬೂ ರತ್ನಾನಿ ಕ್ಯಾಲೆಂಡರ್ ಲಾಂಚ್‌ನಲ್ಲಿ , ಎ-ಲಿಸ್ಟ್ ಸೆಲೆಬ್ರೆಟಿಗಳು ಅದ್ಭುತ ಭಾವಚಿತ್ರಗಳಿಗಾಗಿ ಫೋಸ್ ನೀಡಿದ್ದರು.
ಆ ಸಂದರ್ಭದಲ್ಲಿ, ಹಿರಿಯ ನಟ ಕಬೀರ್ ಬೇಡಿ ಸನ್ನಿ ಲಿಯೋನ್ ಪರಸ್ಪರ ಮಾತನಾಡುತ್ತಾ, ಕಬೀರ್ ಬೇಡಿ ಸನ್ನಿಯ ಮೊಬೈಲ್ ಸಂಖ್ಯೆ ಕೇಳಿದ್ದರಂತೆ. ಸ್ಪಾಟ್‌ಬಾಯ್ ವರದಿಯ ಪ್ರಕಾರ, ಸನ್ನಿ ತನ್ನ ಸಂಖ್ಯೆಯನ್ನು ಹಂಚಿಕೊಂಡಿಲ್ಲ. ಬದಲಾಗಿ ಅವಳ ಪತಿ ಡೇನಿಯಲ್ ವೆಬರ್ ಕಾಂಟ್ಯಾಕ್ಟ್ ಡಿಟೇಲ್ಸ್‌ಗಳನ್ನು ಕೊಟ್ಟರಂತೆ.
ವರದಿಗಳಿಂದ ಕೋಪಗೊಂಡ ಬೇಡಿ, ಈ ವಿಷಯವನ್ನು ಟ್ವಿಟ್ಟರ್‌ವರೆಗೆ ಎಳೆದಿದ್ದರು. 'ತಾನು ಡೇನಿಯಲ್‌ನ ಸಂಖ್ಯೆ ಕೇಳಿದ್ದೂ ಹೌದು, ಕೊಟ್ಟಿದ್ದೂ ಹೌದು. 'ನಾನು #ಸನ್ನಿಲಿಯೋನ್ ಅವರ ಸಂಖ್ಯೆಯನ್ನು ಕೇಳಿದ ವರದಿಗಳು ನಿಜವಲ್ಲ. ಇದು ಮಾನಹಾನಿ ಮಾಡುವಂಥದ್ದು. ಡಬೂ ರತ್ನಾನಿಯವರ ಪಾರ್ಟಿಯಲ್ಲಿ ನಾನು ಅವರ ಪತಿ @DanielWeber99 ಅವರ ನಂಬರ್ ಕೇಳಿದೆ ಮತ್ತು ಅವರು ಅದನ್ನು ಕೊಟ್ಟಿದ್ದಾರೆ. @Spotboye ಈ ವರದಿಯನ್ನು ನನ್ನ ಕ್ಷಮೆಯಾಚಿಸಿ ತೆಗೆಯಬೇಕು, ಎಂದು ಕಬೀರ್ ಹೇಳಿದ್ದರು.
ಡೇನಿಯಲ್ ಸಹ ಪ್ರತಿಕ್ರಿಯಿಸಿದ್ದಾರೆ. 'ಕಬೀರ್ ಬೇಡಿ ಈಗಾಗಲೇ ಸನ್ನಿ ಲಿಯೋನ್ ಅವರ ಸಂಖ್ಯೆಯನ್ನು ಹೊಂದಿದ್ದಾರೆ, ಏಕೆಂದರೆ ಅವರು ಅನೇಕ ವರ್ಷಗಳಿಂದ ಪರಸ್ಪರ ತಿಳಿದಿದ್ದಾರೆ.'ಅವರು ನನ್ನ ಸಂಖ್ಯೆಯನ್ನು ಏಕೆ ಕೇಳಬಾರದು? ಅವರು ಅನೇಕ ವರ್ಷಗಳಿಂದ ಒಬ್ಬರಿಗೊಬ್ಬರು ತಿಳಿದಿದ್ದಾರೆ ಹಾಗೂ ನಂಬರ್ ಸಹ ಇದೆ. ಕಥೆಗಾಗಿ ಸುಳ್ಳನ್ನು ಮುದ್ರಿಸುವ ಅಗತ್ಯವಿಲ್ಲ.' ಎಂದು ಡೇನಿಯಲ್ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.
ಕಬೀರ್ ಬೇಡಿ ನಾಲ್ಕು ಬಾರಿ ವಿವಾಹವಾಗಿದ್ದಾರೆ ಕೆಲವು ವರ್ಷಗಳ ಹಿಂದೆ, ಅವರು ತಮ್ಮ 70 ನೇ ಹುಟ್ಟುಹಬ್ಬದ ಒಂದು ದಿನದ ಮೊದಲು ತಮ್ಮ ದೀರ್ಘಕಾಲದ ಸಂಗಾತಿ ಪರ್ವೀನ್ ದುಸಾಂಜ್‌ರನ್ನು ವಿವಾಹವಾದರು. ಪರ್ವೀನ್ ಕಬೀರ್ ಮಗಳು ಪೂಜಾ ಬೇಡಿಗಿಂತ ನಾಲ್ಕು ವರ್ಷ ಚಿಕ್ಕವಳು. 29 ವರ್ಷ ವಯಸ್ಸಿನ ಅಂತರವನ್ನು ಹೊಂದಿರುವ ಕಬೀರ್ ಮತ್ತು ಪರ್ವೀನ್ ಈಗ 10 ವರ್ಷಗಳಿಂದ ಒಟ್ಟಿಗೆ ಇದ್ದಾರೆ.
ಬೇಡಿ ಅವರ ಮೊಮ್ಮಗಳು ಅಲಯಾ ಎಫ್ ಇತ್ತೀಚೆಗೆ ಜವಾನಿ ಜಾನೆಮನ್ ಚಿತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಟಬು ಎದುರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.