ರಾಜ್‌ಕುಮಾರ್ ರಾವ್ ಸಿನಿಮಾಕ್ಕೆ ಸೇರಿದ್ದು ಶಾರುಖ್ ಕಾರಣದಿಂದನಾ?
ರಾಜ್‌ಕುಮಾರ್ ರಾವ್ ಬಾಲಿವುಡ್‌ನ ಪ್ರಾಮಿಸಿಂಗ್ ಯುವ ನಟರಲ್ಲಿ ಒಬ್ಬರು. ತಮ್ಮ ನಟನೆಯಿಂದ ಸಾಕಷ್ಟು ಫ್ಯಾನ್ ಫಾಲೋವರ್ಸ್ ಗಳಿಸಿದ್ದಾರೆ ರಾಜ್‌ಕುಮಾರ್. ಆದರೆ ಇವರು ಸಿನಿಮಾಕ್ಕೆ ಬರಲು ಕಾರಣವೇನು ಗೊತ್ತಾ? ಸ್ವತಃ ನಟ ಇದರ ಬಗ್ಗೆ ಹೇಳಿಕೊಂಡಿದ್ದಾರೆ.
ಶಾರುಖ್ ಖಾನ್‌ರ ಟ್ರೂ ಫ್ಯಾನ್ ಆಗಿರುವ ರಾಜ್ ಕುಮಾರ್ ರಾವ್, ಅವರು ನಟನೆಯನ್ನು ಆಯ್ಕೆ ಮಾಡಲು ಖಾನ್ ಕಾರಣ ಎಂದು ಹೇಳುತ್ತಾರೆ.
ನಟನೆಯಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿರುವ ಕಿಂಗ್ ಖಾನ್ ಶಾರುಖ್ ಯಾರಿಗೆ ಇಷ್ಟವಿಲ್ಲ?
ತಮ್ಮ ಆಸಾಧಾರಣ ಪ್ರತಿಭೆಯಿಂದ ಅನೇಕ ಜನರಿಗೆ ಮತ್ತು ಉದಯೋನ್ಮುಖ ನಟರಿಗೆ ಸ್ಫೂರ್ತಿಯಾಗಿದ್ದಾರೆ ಶಾರುಖ್ ಮತ್ತು ರಾಜ್‌ಕುಮಾರ್ ರಾವ್ ಅವರಲ್ಲಿ ಒಬ್ಬರು.
ಶಾರುಖ್ ಖಾನ್ ಕಾರಣದಿಂದ ಅವರು ಸಿನಿಮಾ ಇಂಡಸ್ಟ್ರಿಯಾ ಭಾಗವಾಗಲು ಆರಿಸಿಕೊಂಡರು ಎಂದು ಒಮ್ಮೆ TOI ಗೆ ಹೇಳಿದ್ದರು ರಾವ್.
'ಎಸ್‌ಆರ್‌ಕೆ ಸರ್ ಕಾರಣದಿಂದ ನಾನು ನಟನಾಗಿದ್ದೇನೆ. ಅವರು ನನ್ನನ್ನು ಒಬ್ಬ ನಟನನಾಗಲು ಮತ್ತು ಕನಸುಗಳಿಗಾಗಿ ಕೆಲಸ ಮಾಡುವುದರಿಂದ ಅದು ಒಂದು ದಿನ ನನಸಾಗುತ್ತದೆ ಎಂದು ಪ್ರೇರೇಪಿಸಿದ್ದಾರೆ' ಎಂದು ರಾಜ್‌ಕುಮಾರ್ ಹೇಳಿದ್ದರು.
'ಆನ್ ಸ್ಕ್ರೀನ್ ಅಥವಾ ಆಫ್-ಸ್ಕ್ರೀನ್ ಆಗಿರಲಿ ಅವರಿಂದ ಕಲಿಯಲು ತುಂಬಾ ಇದೆ' ಎಂದು ಶಾರುಖ್ ಖಾನ್ ಬಗ್ಗೆ ಹೇಳಿದ ಸ್ತ್ರೀ ನಟ.
ಈ ನಟ ಕೊನೆಯ ಬಾರಿಗೆ ಚ್ಚಾಲಾಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಮುಂದೆ ಪ್ರಿಯಾಂಕಾ ಚೋಪ್ರಾ ಜೊತೆಗೆ ವೈಟ್ ಟೈಗರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮುಂಬರುವ ವರ್ಷದಲ್ಲಿ ನಟನಿಗಾಗಿ ಇನ್ನೂ ಅನೇಕ ಪ್ರಾಜೆಕ್ಟ್‌ಗಳು ಸಾಲಾಗಿವೆ. ಭೂಮಿ ಪೆಡ್ನೇಕರ್ ಜೊತೆ ಬಾದೈ ದೋ ಸಿನಿಮಾದಲ್ಲೂ ಕೆಲಸಮಾಡಲಿದ್ದಾರೆ.