ನರ್ಗಿಸ್ ಫಕ್ರಿ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡಿದ್ದಾರಾ?
ನರ್ಗಿಸ್ ಫಕ್ರಿ ಮತ್ತು ರಣಬೀರ್ ಕಪೂರ್ ರಾಕ್ ಸ್ಟಾರ್ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಬಹಳ ಹಿಂದೆಯೇ, ನರ್ಗಿಸ್ ಫಕ್ರಿ ಜೊತೆ ರಣಬೀರ್ ಕಪೂರ್ ಸಂಬಂಧವನ್ನು ಹಂಚಿಕೊಂಡಿದ್ದಾರೆ, ಎಂದು ವರದಿಯಾಗಿದೆ. ನರ್ಗಿಸ್ ಫಕ್ರಿ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡಿದ್ದಾರಾ? ನಟಿ ಇದರ ಬಗ್ಗೆ ಏನು ಹೇಳಿದ್ದಾರೆ ನೋಡಿ.
ಇತ್ತೀಚಿನ ಸಂದರ್ಶನವೊಂದರಲ್ಲಿ ನರ್ಗಿಸ್ ಫಕ್ರಿ ನಟ ಉದಯ್ ಚೋಪ್ರಾ ಅವರೊಂದಿಗಿನ ಸಂಬಂಧದ ಬಗ್ಗೆ ಬಹಿರಂಗಪಡಿಸಿದ್ದಾರೆ. ಇದರ ನಂತರ ನರ್ಗಿಸ್ ಫಕ್ರಿ ಸಕತ್ ಸುದ್ದಿಯಲ್ಲಿದ್ದಾರೆ. ಈ ಇಂಟರ್‌ವ್ಯೂವ್‌ನಲ್ಲಿ ಅವರು ಬಾಲಿವುಡ್, ಆಕೆಯ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ್ದರು ಮತ್ತು ಶೀಘ್ರದಲ್ಲೇ ಮರಳಿ ಸಿನಿಮಾಕ್ಕೆ ಬರಲು ಬಯಸುವುದಾಗಿಯೂ ಹೇಳಿದ್ದಾರೆ.
ಹಲವು ಬಾರಿ, ನರ್ಗಿಸ್ ಫಕ್ರಿ ಬಾಲಿವುಡ್ ನಟ ಉದಯ್ ಚೋಪ್ರಾ ಮತ್ತು ರಣಬೀರ್ ಕಪೂರ್ ಜೊತೆಗೆ ಲಿಂಕ್ ಮಾಡಲಾಗಿದೆ. ರಾಕ್‌ಸ್ಟಾರ್ ಚಿತ್ರೀಕರಣದ ಸಮಯದಲ್ಲಿ, ರಣಬೀರ್ ಮತ್ತು ನರ್ಗಿಸ್ ಅವರ ಪ್ರೆಂಡ್‌ಶಿಪ್ ಬೆಳೆಯುತ್ತಿರುವ ಬಗ್ಗೆ ಅನೇಕ ಕಥೆಗಳು ಮಾಧ್ಯಮಗಳಲ್ಲಿ ಹರಿದಾಡಿದವು.
ಅನೇಕ ಫೋಟೋಗಳಲ್ಲಿ ನರ್ಗೀಸ್ ಮತ್ತು ರಣಬೀರ್ ತಾಯಿ ನೀತು ಕಪೂರ್ ಒಟ್ಟಾಗಿ ಕಾಣಿಸಿಕೊಂಡಿದ್ದು ಸುದ್ದಿ ಹರಡಲು ಇನ್ನಷ್ಟು ಕಾರಣವಾಗಿತ್ತು. ರಣಬೀರ್ ಕಪೂರ್ ತಾಯಿ ನೀತು ಮತ್ತು ನರ್ಗಿಸ್ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
ಅದಾಗ್ಯೂ, ಸಂದರ್ಶನವೊಂದರಲ್ಲಿ, ನರ್ಗಿಸ್ ಹೇಳುವಂತೆ ಎಲ್ಲರೂ ಬಾಂಧವ್ಯ ಬೆಳೆಸುತ್ತಾರೆ ಮತ್ತು ಚಲನಚಿತ್ರ ಮುಗಿದ ನಂತರ ಅವರು ಕಣ್ಮರೆಯಾಗುತ್ತಾರೆ. ಅದು ಕಠಿಣ ವಾಸ್ತವ.ಆದರೆ, ತಾವು ಉದಯ್ ಚೋಪ್ರಾ ಜೊತೆ ಸಂಬಂಧ ಹೊಂದಿದ್ದೆ ಎಂದು ನರ್ಗಿಸ್ ಒಪ್ಪಿಕೊಂಡಿದ್ದಾರೆ.
ETimes ನೊಂದಿಗೆ ಮಾತನಾಡುತ್ತಾ, ನರ್ಗಿಸ್ ಅವರು ಉದಯ್ ಜೊತೆ ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ ಮತ್ತು ಅವರು ಭಾರತದಲ್ಲಿ ಭೇಟಿಯಾದ ಅತ್ಯಂತ ಅದ್ಭುತ ಮನುಷ್ಯನೆಂಬುವುದು ಸ್ಪಷ್ಟವಾಯಿತಂತೆ.
'ನನ್ನ ಸಂಬಂಧವನ್ನು ಬಹಿರಂಗಪಡಿಸಬೇಡಿ ಎಂದು ಜನರು ನನಗೆ ಹೇಳಿದ್ದರಿಂದ ನಾನು ಇದನ್ನು ಎಂದಿಗೂ ಪತ್ರಿಕೆಗೆ ಹೇಳಿಲ್ಲ, ಆದರೆ ನಾನು ತುಂಬಾ ಬ್ಯೂಟಿಫುಲ್ ಸೋಲ್ ಇದ್ದೇನೆ ಎಂದು ನಾನು ಪರ್ವತದ ತುದಿಯಿಂದ ಕೂಗಬೇಕಾಗಿತ್ತು. ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮ ಬಹಳ ನಕಲಿ ಮತ್ತು ಅಲ್ಲಿರುವ ಜನರಿಗೆ ಸತ್ಯ ಏನೆಂದು ತಿಳಿದಿರುವುದಿಲ್ಲ. ಹೆಚ್ಚಾಗಿ ನಾವು ಮುಚ್ಚಿದ ಬಾಗಿಲ ಹಿಂದೆ ಇರುವ ಕೆಟ್ಟವರನ್ನು ಆರಾಧಿಸುತ್ತೇವೆ' ಎಂದು ಹೇಳಿದ್ದಾರೆ ರಾಕ್ ಸ್ಟಾರ್ ನಟಿ.
ಪ್ರಸ್ತುತಕ್ಕೆ ಬಂದರೆ, ನರ್ಗಿಸ್ ಇತ್ತೀಚೆಗೆ ಅಮೇರಿಕನ್ ಶೇಫ್ ಜಸ್ಟಿನ್ ಸ್ಯಾಂಟೋಸ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಜಸ್ಟಿನ್ ಜೊತೆಗಿನ ತನ್ನ ಸಂಬಂಧದ ಬಗ್ಗೆ ಮಾತನಾಡುತ್ತಾ, 'ನಾವು ಬೇರೆಯಾಗಿದ್ದೇವೆ ಆದರೆ ನಾವು ಸ್ನೇಹಿತರಾಗಿದ್ದೇವೆ' ಎಂದಿದ್ದಾರೆ ನರ್ಗೀಸ್.
ಜಸ್ಟಿನ್ ಜೊತೆ ಡೇಟಿಂಗ್ ಮಾಡುವ ಮೊದಲು, ನರ್ಗಿಸ್ ಚಲನಚಿತ್ರ ನಿರ್ಮಾಪಕ ಮ್ಯಾಟ್ ಅಲೊಂಜೊ ಜೊತೆ ಸಂಬಂಧ ಹೊಂದಿದ್ದರು. ನಟಿಯನ್ನು ಕೊನೆಯದಾಗಿ ಸಂಜಯ್ ದತ್ ಅವರ ತೋರ್ಬಾಜ್ ನಲ್ಲಿ ನೋಡಲಾಯಿತು, ಇದನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.