- Home
- Entertainment
- Cine World
- ತಾನೇ ನಿರ್ದೇಶಿಸಿದ ಚಿತ್ರದ ಆಡಿಯೋ ರಿಲೀಸ್‌ಗೆ ಗೈರಾದ ಧನುಷ್, ಎದ್ದಿದೆ ಹಲವು ಪ್ರಶ್ನೆ
ತಾನೇ ನಿರ್ದೇಶಿಸಿದ ಚಿತ್ರದ ಆಡಿಯೋ ರಿಲೀಸ್‌ಗೆ ಗೈರಾದ ಧನುಷ್, ಎದ್ದಿದೆ ಹಲವು ಪ್ರಶ್ನೆ
ನಿಲವುಕ್ಕು ಎನ್ ಮೇಲ್ ಎನ್ನಡಿ ಕೋಪಮ್ ಸಿನಿಮಾದ ಆಡಿಯೋ ರಿಲೀಸ್‌ನಲ್ಲಿ ಧನುಷ್ ಯಾಕೆ ಇರಲಿಲ್ಲ ಅಂತ ಪ್ರಶ್ನೆ ಎದ್ದಿದೆ. ತಾನೇ ನಿರ್ದೇಶಿಸಿದ ಸಿನೆಮಾದ ಆಡಿಯೋ ಲಾಂಚ್ ಗೆ ಬರದ್ದಕ್ಕೆ ಟೀಕೆ ಕೂಡ ವ್ಯಕ್ತವಾಗಿದೆ.

ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಧನುಷ್ ತಮಿಳು ಸಿನಿಮಾದಲ್ಲಿ ಗುರುತಿಸಿಕೊಂಡಿದ್ದಾರೆ. ಪವರ್ ಪಾಂಡಿ, ರಾಯನ್ ಸಿನಿಮಾಗಳನ್ನ ನಿರ್ದೇಶಿಸಿದ್ದಾರೆ. ಪವರ್ ಪಾಂಡಿ 2017 ರಲ್ಲಿ ಬಿಡುಗಡೆಯಾಗಿತ್ತು. ರಾಯನ್ ಅವರ 50ನೇ ಸಿನಿಮಾ. ಈ ಸಿನಿಮಾ ಸೂಪರ್ ಹಿಟ್ ಆಗಿ 100 ಕೋಟಿಗೂ ಹೆಚ್ಚು ಗಳಿಸಿತು.
ರಾಯನ್ ಚಿತ್ರದ ನಂತರ ಧನುಷ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ತಯಾರಾಗಿದೆ. ‘ನಿಲವುಕ್ಕು ಎನ್ ಮೇಲ್ ಎನ್ನಡಿ ಕೋಪಮ್’ ಅನ್ನೋದು ಈ ಚಿತ್ರದ ಹೆಸರು. ಪವಿಷ್ ನಾಯಕನಾಗಿ ನಟಿಸಿದ್ದಾರೆ. ಇವರು ಧನುಷ್ ಅವರ ಅಕ್ಕನ ಮಗ. ಅನಿಕಾ ಸುರೇಂದ್ರನ್, ಪ್ರಿಯಾ ವಾರಿಯರ್ ಕೂಡ ನಟಿಸಿದ್ದಾರೆ. ಜಿ.ವಿ.ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಫೆಬ್ರವರಿ 21 ರಂದು ರಿಲೀಸ್ ಆಗುತ್ತಿದೆ.
‘ನಿಲವುಕ್ಕು ಎನ್ ಮೇಲ್ ಎನ್ನಡಿ ಕೋಪಮ್’ ಸಿನಿಮಾದ ಆಡಿಯೋ ರಿಲೀಸ್ ಇಂದು ಚೆನ್ನೈನಲ್ಲಿ ನಡೆಯಿತು. ನಿರ್ದೇಶಕ ರಾಜ್‌ಕುಮಾರ್ ಪೆರಿಯಸ್ವಾಮಿ, ನಟ ಅರುಣ್ ವಿಜಯ್ ಮುಖ್ಯ ಅತಿಥಿಗಳಾಗಿದ್ದರು. ಚಿತ್ರತಂಡ ಕೂಡ ಭಾಗವಹಿಸಿತ್ತು. ಆದರೆ ನಿರ್ದೇಶಕ ಧನುಷ್ ಭಾಗವಹಿಸಲಿಲ್ಲ.
ನಯನತಾರಾ ತಮ್ಮ ಸಿನಿಮಾಗಳ ಆಡಿಯೋ ಲಾಂಚ್‌ಗಳಿಗೆ ಬರಲ್ಲ. ಈಗ ಧನುಷ್ ಕೂಡ ಅದನ್ನೇ ಮಾಡ್ತಿದ್ದಾರಾ ಅಂತ ನೆಟ್ಟಿಗರು ಟೀಕಿಸಿದ್ದಾರೆ. ಆದರೆ ಧನುಷ್ ಬರದಿರಲು ಕಾರಣ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದದ್ದು ಅಂತ ತಿಳಿದುಬಂದಿದೆ. ಇನ್ನೊಂದು ಸಿನಿಮಾವನ್ನು ಕೂಡ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.