ದೀವಾನಾ ತೆರೆ ಕಂಡು 28 ವರ್ಷ: ಚೊಚ್ಚಲ ಚಿತ್ರವಿನ್ನೂ ನೋಡಿಲ್ವಂತೆ ಶಾರುಖ್!

First Published Jun 26, 2020, 7:10 PM IST

ಬಾಲಿವುಡ್‌ನ 'ಕಿಂಗ್ ಆಫ್ ರೋಮ್ಯಾನ್ಸ್'  ಶಾರುಖ್ ಖಾನ್ 'ದಿವಾನಾ' ಸಿನಿಮಾದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವು ಜೂನ್ 25,1992 ರಂದು ಬಿಡುಗಡೆಯಾಗಿತ್ತು. ಜೊತೆಗೆ ಇಂಡಸ್ಟ್ರಿಯಲ್ಲಿ ಶಾರುಖ್ ವೃತ್ತಿ ಜೀವನವು 28 ವರ್ಷಗಳನ್ನು ಪೂರೈಸಿದೆ. ಸೂಪರ್‌ ಹಿಟ್‌ ಸಿನಿಮಾ ದಿವಾನಾದಿಂದ ಜರ್ನಿ ಶುರು ಮಾಡಿದ ನಟ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದರು. ಅನೇಕ ಹಿಟ್ ಚಿತ್ರಗಳನ್ನೂ ನೀಡಿದರು. ಮೊದಲ ಚಿತ್ರ ಬಿಡುಗಡೆಯಾಗಿ  28 ವರ್ಷಗಳನ್ನು ಪೂರೈಸಿದರೂ, ಸೂಪರ್‌ ಸ್ಟಾರ್‌ ಇನ್ನೂ ತಮ್ಮ ಚೊಚ್ಚಲ ಸಿನಿಮಾವನ್ನೇ ನೋಡಿಲ್ಲವಂತೆ.