ಡಿವೋರ್ಸ್ ವದಂತಿಗೆ ರಣ್ವೀರ್-ದೀಪಿಕಾ ಪಡುಕೋಣೆ ತೆರೆ ಎಳೆದಿದ್ದು ಹೀಗೆ!
ನಿನ್ನೆ ಪಠಾಣ್ ಟೀಸರ್ ಬಿಡುಗಡೆಯ ನಂತರ ದೀಪಿಕಾ ಪಡುಕೋಣೆ (Deepika Padukone) ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ನಟಿಯ ಸಾಹಸ ದೃಶ್ಯಗಳು ಮತ್ತು ಎಸ್‌ಆರ್‌ಕೆ (SRK) ಜೊತೆಗಿನ ಕೆಮಿಸ್ಟ್ರಿ ದೊಡ್ಡ ಹಿಟ್ ಆಗಿದೆ. ಸಖತ್ ಪಾಸಿಟಿವ್ ಪ್ರತಿಕ್ರಿಯೆ ನಂತರ, ಬಾಲಿವುಡ್ ನಟಿ ತನ್ನ ಪತಿ ರಣವೀರ್ ಸಿಂಗ್ (Ranveer Singh) ಜೊತೆ ದೋಣಿ ವಿಹಾರದಲ್ಲಿ ಕಾಣಿಸಿಕೊಂಡರು. ನಗುತ್ತಿರುವ ದೀಪಿಕಾ ವೀಡಿಯೊವನ್ನು ರಣವೀರ್ Instagram ನ ಸ್ಟೋರಿ ವಿಭಾಗದಲ್ಲಿ ಪೋಸ್ಟ್ ಮಾಡಿ ಎಲ್ಲಾ ರೂಮರ್‌ಗಳಿಗೂ ಗಾಳಿಗೆ ತೂರಿದ್ದಾರೆ ಈ ದಂಪತಿ.
ಪಠಾಣ್‌ನ ಟೀಸರ್‌ಗೆ ಸಕಾರಾತ್ಮಕ ಪ್ರತಿಕ್ರಿಯೆಯ ನಂತರ, ದೀಪಿಕಾ ಪಡುಕೋಣೆ ತನ್ನ ಪತಿ ರಣವೀರ್ ಸಿಂಗ್ ಅವರೊಂದಿಗೆ ದೋಣಿ ವಿಹಾರದಲ್ಲಿ ಕಾಣಿಸಿಕೊಂಡರು. ದೀಪಿಕಾ ಮತ್ತು ರಣವೀರ್ ದಂಪತಿ ಪಠಾಣ್ ಟೀಸರ್ ಬಿಡುಗಡೆ ನಂತರ ರೊಮ್ಯಾಂಟಿಕ್ ಬೋಟ್ ರೈಡ್‌ಗೆ ತೆರಳಿದರು
ಈ ಸಮಯದಲ್ಲಿ ದೀಪಿಕಾ ಅವರು ಟೀ ಶರ್ಟ್ ಮತ್ತು ಕಪ್ಪು ಶಾರ್ಟ್ಸ್ ಧರಿಸಿದ್ದರು. ರಣವೀರ್ ವೀಡಿಯೊಗೆ #Cutie ಎಂದು ಶೀರ್ಷಿಕೆ ನೀಡಿದ್ದಾರೆ. ನಗುತ್ತಿರುವ ದೀಪಿಕಾ ಅವರ ವೀಡಿಯೊವನ್ನು ರಣವೀರ್ Instagramನ ಸ್ಟೋರಿಯಾಗಿ ಪೋಸ್ಟ್ ಮಾಡಿದ್ದಾರೆ
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಾಲ್ಕು ವರ್ಷಗಳ ಪ್ರೀತಿಯ ಬಳಿಕ 2018ರಲ್ಲಿ ವಿವಾಹವಾದರು ಮತ್ತು ಬಾಲಿವುಡ್‌ನ ಪವರ್ ಜೋಡಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.
ಆದರೆ, ಇತ್ತೀಚಿಗೆ ಇವರಿಬ್ಬರ ನಡುವೆ ಹೊಂದಾಣಿಕೆ ಆಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ ಮತ್ತು ಇಬ್ಬರೂ ಬೇರೆಯಾಗಲಿದ್ದಾರೆ ಎಂಬ ರೂಮರ್ ಇತ್ತು. ಆದಾಗ್ಯೂ, ದಂಪತಿ ಸಾಮಾಜಿಕ ಮಾಧ್ಯಮದ ಈ ಪೋಸ್ಟ್ ಮೂಲಕ ಎಲ್ಲಾ ವದಂತಿಗಳಿಗೆ ಫುಲ್‌ಸ್ಟಾಪ್ ಹಾಕಿದ್ದಾರೆ
ವಿಶೇಷ ಪಾಡ್‌ಕಾಸ್ಟ್‌ನಲ್ಲಿ ಮಾಜಿ ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮೇಘನ್ ಮಾರ್ಕೆಲ್, ಡಚೆಸ್ ಆಫ್ ಸಸೆಕ್ಸ್ ಅವರೊಂದಿಗೆ ರಣವೀರ್ ಅವರ ಬಗ್ಗೆ ಚರ್ಚಿಸಿದರು. ವ್ಯವಹಾರದ ಬದ್ಧತೆಗಳಿಂದಾಗಿ ನಾನು ಮತ್ತು ರಣವೀರ್ ಬಹಳ ಸಮಯದಿಂದ ಮನೆಯಿಂದ ದೂರವಾಗಿದ್ದೇವೆ ಎಂದು ದೀಪಿಕಾ ಹೇಳಿದ್ದರು.
ರಣವೀರ್ ಮತ್ತು ದೀಪಿಕಾ ಕೂಡ ಆಕರ್ಷಕ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪಠಾಣ್ ಚಿತ್ರದಲ್ಲಿ ಎಸ್ ಆರ್ ಕೆ ಮತ್ತು ಜಾನ್ ಅಬ್ರಹಾಂ ಜೊತೆಯಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಜನವರಿ 25, 2023 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ದೀಪಿಕಾ ಪಡುಕೋಣೆ, ಅವರು ಹೃತಿಕ್ ರೋಷನ್ ಜೊತೆಗೆ ಫೈಟರ್ ಮತ್ತು ಪ್ರಭಾಸ್ ಜೊತೆ ಪ್ರಾಜೆಕ್ಟ್ ಕೆ ನಲ್ಲಿ ಕಾಣಿಸಿಕೊಳ್ಳುವ ಜೊತೆಗೆ ರಣವೀರ್ ಸಿಂಗ್ ಅವರ ಸರ್ಕಸ್ ಮತ್ತು ಶಾರುಖ್ ಖಾನ್ ಅವರ ಜವಾನ್ ಚಿತ್ರಗಳಲ್ಲಿಯೂ ನಟಿಸಲಿದ್ದಾರೆ.