Cannes 2022 - ಕೊನೆಯ ದಿನ ಬಿಳಿ ಸೀರೆಯಲ್ಲಿ ಮಿಂಚಿದ Deepika Padukone
ಕಾನ್ಸ್ ಚಲನಚಿತ್ರೋತ್ಸವದಲ್ಲಿ (Cannes 2022) ತೀರ್ಪುಗಾರರಾಗಿ ಪಾಲ್ಗೊಂಡ ದೀಪಿಕಾ ಪಡುಕೋಣೆ (Deepika Padukone) ಸಮಾರಂಭದ ಕೊನೆಯ ದಿನದಂದು ಅತ್ಯಂತ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು, ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಸಮಾರಂಭಕ್ಕಾಗಿ ದೀಪಿಕಾ ಬಿಳಿ ರಫಲ್ ಸೀರೆಯನ್ನು ಧರಿಸಿದ್ದರು ಮತ್ತು ಅವರು ಅದರಲ್ಲಿನ ಅವರ ಲುಕ್ ಸಂಪೂರ್ಣವಾಗಿ ಬೆರಗುಗೊಳಿಸುತ್ತದೆ. ಈ ಸಂದರ್ಭದಲ್ಲಿ, ಅವರ ಭಾರತೀಯ ಶೈಲಿಯಲ್ಲಿ ಎಲ್ಲರಿಗೂ ನಮಸ್ಕಾರ ಹೇಳಿ ಎಲ್ಲರ ಮನಗೆದ್ದಿದ್ದಾರೆ. ಕಾನ್ಸ್‌ನ ಕೊನೆಯ ದಿನದ ದೀಪಿಕಾ ಅವರ ಫೋಟೋಗಳು ಇಲ್ಲಿವೆ.

ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನ ಅಂತಿಮ ಸಮಾರಂಭಕ್ಕಾಗಿ ದೀಪಿಕಾ ಪಡುಕೋಣೆ ಅವರು ಧರಿಸಿದ್ದ ಬಿಳಿ ಸೀರೆಯನ್ನು ಭಾರತದ ಖ್ಯಾತ ಡಿಸೈನರ್ ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ್ದಾರೆ.
ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ದೀಪಿಕಾ ಅವರು ಕೊರಳಲ್ಲಿ ಕಾಣುವ ಮುತ್ತಿನ ಹಾರವನ್ನು ಕೂಡ ವಿನ್ಯಾಸ ಮಾಡಿದ್ದಾರೆ. ಅವರ ಕಿವಿಯೋಲೆಗಳನ್ನು ಬಿರ್ಧಿಚಂದ್ ಘನಶ್ಯಾಮ್ ದಾಸ್ ಅವರ ಸಂಗ್ರಹದಿಂದ ಆರಿಸಿ ಕೊಳ್ಳಲಾಗಿತ್ತು.
ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಮೂಲಕ ನಟಿ ತಮ್ಮ ಕಾನ್ಸ್ ಲುಕ್‌ನ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಇವು ಕೇವಲ 10 ಗಂಟೆಗಳಲ್ಲಿ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಅಷ್ಟೇ ಅಲ್ಲ ದೀಪಿಕಾ ಅವರ ಫೋಟೋ ನೋಡಿದ ನಂತರ ಅವರ ಫಾಲೋವರ್ಸ್ ಅವರ ಲುಕ್ ಅನ್ನು ಕೊಂಡಾಡುತ್ತಿದ್ದಾರೆ. ನಿಮ್ಮ ಪ್ರತಿ ಕಾನ್ಸ್ ನೋಟವನ್ನು ಪ್ರೀತಿಸಿದೆ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.
ನೀವು ಯಾಕೆ ತುಂಬಾ ಸುಂದರವಾಗಿದ್ದೀರಿ? ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಕಾನ್ಸ್‌ನಲ್ಲಿ ಅತ್ಯುತ್ತಮ ಉಡುಗೆ' ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
ಜ್ಯೂರಿ ಸದಸ್ಯರಾದ ಲಾಡ್ಜ್ ಲೀ, ಜಾಸ್ಮಿನ್ ಟ್ರಿನಿಕಾ, 75ನೇ ಕಾನ್ಸ್ ಚಲನಚಿತ್ರೋತ್ಸವದ ಅಧ್ಯಕ್ಷೆ, ಜ್ಯೂರಿ ಸದಸ್ಯರಾದ ನೂಮಿ ರಾಪಾಸ್, ಜೋಕಿಮ್ ಟ್ರೈಯರ್, ರೆಬೆಕಾ ಹಾಲ್, ಜೆಫ್ ನಿಕೋಲ್ಸ್ ಇತರರೊಂದಿಗೆ ದೀಪಿಕಾ ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.
ಮೇ 17 ರಿಂದ 28 ರವರೆಗೆ ನಡೆದ ಕಾನ್ಸ್ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ಸದಸ್ಯರಾಗಿ ಭಾರತವನ್ನು ಪ್ರತಿನಿಧಿಸಲು ದೀಪಿಕಾ ಪಡುಕೋಣೆ ಮೇ 9 ರಂದು ಮುಂಬೈನಿಂದ ಹೊರಟರು.
ಪ್ರಸ್ತುತ ದೀಪಿಕಾ ತಮ್ಮ ಆಕೌಂಟ್‌ನಲ್ಲಿ ಹಲವಾರು ಯೋಜನೆಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಒಂದು ಶಾರುಖ್ ಖಾನ್ ಅವರ ಪುನರಾಗಮನದ ಚಿತ್ರ 'ಪಠಾಣ್', ಇದರಲ್ಲಿ ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ.