- Home
- Entertainment
- Cine World
- 'ರಾಬಿನ್‌ಹುಡ್' ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಡೇವಿಡ್ ವಾರ್ನರ್! ಸಿನಿಮಾ ಬಿಡುಗಡೆ, ದಿನಾಂಕ ಇಲ್ಲಿದೆ ವಿವರ
'ರಾಬಿನ್‌ಹುಡ್' ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಡೇವಿಡ್ ವಾರ್ನರ್! ಸಿನಿಮಾ ಬಿಡುಗಡೆ, ದಿನಾಂಕ ಇಲ್ಲಿದೆ ವಿವರ
David Warner Telugu Movie: ಆಸ್ಟ್ರೇಲಿಯನ್ ಸ್ಟಾರ್ ಕ್ರಿಕೆಟರ್ ಡೇವಿಡ್ ವಾರ್ನರ್ 'ರಾಬಿನ್‌ಹುಡ್' ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ಸಿನಿಮಾದ ಸಂಪೂರ್ಣ ವಿವರಗಳು ನಿಮಗಾಗಿ ಇಲ್ಲಿ ಕೊಡಲಾಗಿದೆ.

David Warner Telugu Movie: ಡೇವಿಡ್ ವಾರ್ನರ್ ಕ್ರಿಕೆಟ್‌ನಲ್ಲಿ ತಮ್ಮ ಬೃಹತ್ ಇನ್ನಿಂಗ್ಸ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಈ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಭಾರತದಲ್ಲಿ ಚಿರಪರಿಚಿತ. ಇಲ್ಲಿನ ಕ್ರಿಕೆಟ್ ಆಟಗಾರರಂತೆ ವಾರ್ನರ್‌ಗೂ ಭಾರತದಲ್ಲಿ ಅನೇಕ ಅಭಿಮಾನಿಗಳು ಇದ್ದಾರೆ. ಅವರನ್ನು ಪ್ರೀತಿಯಿಂದ 'ವಾರ್ನರ್ ಭಾಯ್' ಎಂದು ಕರೆಯಲಾಗುತ್ತದೆ. ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ ಅದ್ಭುತವಾಗಿ ಆಡಿದ್ದರು. ಕ್ರಿಕೆಟ್‌ನಲ್ಲಿ ಮಿಂಚಿದ್ದ ಈ ಸ್ಟಾರ್ ಆಟಗಾರ ಈಗ ಬೆಳ್ಳಿತೆರೆಯಲ್ಲಿ ಸದ್ದು ಮಾಡಲು ಹೊರಟಿದ್ದಾರೆ. ಡೇವಿಡ್ ವಾರ್ನರ್ ಮುಂಬರುವ ತೆಲುಗು ಚಿತ್ರ 'ರಾಬಿನ್ ಹುಡ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಿತಿನ್ ಮತ್ತು ಶ್ರೀಲೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ವಾರ್ನರ್ ತಮ್ಮ X ಖಾತೆಯಲ್ಲಿ ಇದೇ ವಿಷಯವನ್ನು ಉಲ್ಲೇಖಿಸಿ ಪೋಸ್ಟ್ ಮಾಡಿದ್ದಾರೆ. ಭಾರತೀಯ ಚಿತ್ರದಲ್ಲಿ ನಟಿಸಲು ತುಂಬಾ ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಅವರು ಚಿತ್ರದ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ. ಅದು ರಾಬಿನ್ ಹುಡ್ ಸಿನಿಮಾ. ಇದೀಗ ಅಭಿಮಾನಿಗಳಿಗೆ ಸಿನಿಮಾದ ಕುರಿತು ಸಾಕಷ್ಟು ಕುತೂಹಲ ಹುಟ್ಟಿಸಿದೆ.
ರಾಬಿನ್ ಹುಡ್ ಚಿತ್ರವನ್ನು ವೆಂಕಿ ಕುಡುಮುಲ ನಿರ್ದೇಶಿಸುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ನಿತಿನ್ ಅಭಿನಯದ ಮುಂಬರುವ ಚಿತ್ರ ರಾಬಿನ್ ಹುಡ್, ಇದೇ ಮಾರ್ಚ್ 28, 2025 ರಂದು ಬಿಡುಗಡೆಯಾಗಲಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2016 ರ ವಿಜೇತ ಡೇವಿಡ್ ವಾರ್ನರ್ ಭಾರತದಲ್ಲಿ ಅಪಾರ ಜನಪ್ರಿಯತೆಯನ್ನು ಹೊಂದಿದ್ದಾರೆ. ಅವರು ಆಗಾಗ್ಗೆ ತೆಲುಗು ಸಿನಿಮಾದ ಮೇಲಿನ ಪ್ರೀತಿಯನ್ನು ತೋರಿಸುತ್ತಾರೆ. ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ, ಪುಷ್ಪ ಚಿತ್ರದ ಶ್ರೀವಲ್ಲಿ ಮತ್ತು ಸರಿಲೇರು ನೀಕೆವ್ವರು ಚಿತ್ರದ ಮೈಂಡ್ ಬ್ಲಾಕ್‌ನಂತಹ ಜನಪ್ರಿಯ ತೆಲುಗು ಹಾಡುಗಳಿಗೆ ಅವರು ಹೆಜ್ಜೆ ಹಾಕುತ್ತಿರುವ ಅವರ ನೃತ್ಯ ವೀಡಿಯೊಗಳು ಕ್ರಿಕೆಟ್‌ನ ಆಚೆಗೆ ಅವರ ಅಭಿಮಾನಿಗಳನ್ನು ಹೆಚ್ಚಿಸಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.