ಮೆಗಾಸ್ಟಾರ್ ಚಿರಂಜೀವಿ ರಾಜಕೀಯ ಪಟ್ಟು ಬಿಚ್ಚಿಟ್ಟ ಲೆಜೆಂಡ್ ನಟನ ಮಗಳು ಶಾರದಾ!
ತೆಲುಗು ಖ್ಯಾತ ನಟ ಗುಮ್ಮಡಿ ವೆಂಕಟೇಶ್ವರ ರಾವ್ ಅವರ ಪುತ್ರಿ ಶಾರದಾ, ಚಿರಂಜೀವಿ ಅವರ ಬಗ್ಗೆ ಹೇಳಿದ ಮಾತುಗಳು ವೈರಲ್ ಆಗಿವೆ. ತಮ್ಮ ಊರಿಗೆ ಚಿರಂಜೀವಿ ಮಾಡಿದ ಸಹಾಯ ಶತಮಾನಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ ಎಂದಿದ್ದಾರೆ. ಏನದು ಸಹಾಯ ಅಂತ ತಿಳ್ಕೊಳ್ಳೋಣ.

ನಟ ಚಿರಂಜೀವಿ ಸಿನಿಮಾ ಜೊತೆಗೆ ಸಮಾಜ ಸೇವೆಯಲ್ಲೂ ಮುಂದಿದ್ದಾರೆ. ಬ್ಲಡ್ ಬ್ಯಾಂಕ್, ನೇತ್ರದಾನ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮಗಿಂತ ಹಿರಿನ ನಟರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಗುಮ್ಮಡಿ ವೆಂಕಟೇಶ್ವರ ರಾವ್ ಅವರೂ ಒಬ್ಬ ಲೆಜೆಂಡ್ ನಟರಾಗಿದ್ದರು.
ಎನ್.ಟಿ.ಆರ್, ಎ.ಎನ್.ಆರ್ ಕಾಲದಿಂದ ಹಿಡಿದು ಚಿರಂಜೀವಿ, ಬಾಲಯ್ಯ, ನಾಗಾರ್ಜುನರವರೆಗೆ ಎಲ್ಲರ ಜೊತೆಗೂ ಗುಮ್ಮಡಿ ವೆಂಕಟರಾವ್ ಅವರು ನಟಿಸಿದ್ದಾರೆ. ಪೌರಾಣಿಕ ಪಾತ್ರಗಳಲ್ಲೂ ಮಿಂಚಿದ್ದಾರೆ. ಗುಮ್ಮಡಿ ಅವರಿಗೆ 5 ಜನ ಪುತ್ರಿಯರು, ಇಬ್ಬರು ಪುತ್ರರಿದ್ದಾರೆ.
ಗುಮ್ಮಡಿ ವೆಂಕಟೇಶ್ವರ ರಾವ್ ಅವರ ಮಗಳು, ಗುಮ್ಮಡಿ ಶಾರದಾ ಒಂದು ಸಂದರ್ಶನದಲ್ಲಿ ಚಿರಂಜೀವಿ ಜೊತೆಗಿನ ಒಡನಾಟ, ಊರಿಗೆ ಮಾಡಿದ ಸಹಾಯದ ಬಗ್ಗೆ ಹೇಳಿದ್ದಾರೆ. ನಮ್ಮೂರ ಗುಡಿ ಶಿಥಿಲವಾಗಿತ್ತು. ಅಜ್ಜಿ, ಮುತ್ತಜ್ಜ ಕಟ್ಟಿಸಿದ ಗುಡಿ ಅದು. ರಸ್ತೆಗಿಂತ ಪೂರ್ಣವಾಗಿ ತಗ್ಗು ಗುಂಡಿಯಲ್ಲಿ ಸಿಲುಕಿಕೊಂಡಿತ್ತು. ಈ ದೇವಸ್ಥಾನದೊಳಗೆ ಮಳೆ ನೀರು ನುಗ್ಗುತ್ತಿತ್ತು. ಅದನ್ನ ರಿಪೇರಿ ಮಾಡೋಕೆ ಅಮ್ಮ, ಅಪ್ಪ ಪ್ರಯತ್ನಿಸಿದ್ದರು.
ಇನ್ನು ನಮ್ಮ ಹಿರಿಯರು ಕಟ್ಟಿಸಿದ ದೇವಸ್ಥಾನ ರಿಪೇರಿ ಮಾಡಬೇಕು ಎನ್ನುವುದು ನಮ್ಮಮ್ಮನ ಕೊನೆ ಆಸೆಯಾಗಿತ್ತು. ಆದರೆ ಅದು ಈಡೇರಲಿಲ್ಲ. ಅಪ್ಪನಿಂದಲೂ ಅದನ್ನು ದುರಸ್ತಿ ಮಾಡಲು ಆಗಲಿಲ್ಲ. ನಾನು ಚಿರಂಜೀವಿ ಸರ್ ಅವರನ್ನ ಭೇಟಿ ಮಾಡಿ ಗುಡಿಯ ಬಗ್ಗೆ ಹೇಳಿದೆ. ಅವರು ಆಗ ರಾಜಕೀಯದಿಂದ ದೂರ ಆಗಿದ್ದರು. ಆದರೂ ಅರ್ಧ ಗಂಟೆಯಲ್ಲಿ ಗುಡಿಯ ಫೈಲ್ ಮೂವ್ ಮಾಡಿ ಫಂಡ್ಸ್ ಬರುವಂತೆ ಮಾಡಿದ್ದರು.
ನಟ ಚಿರಂಜೀವಿ ಅವರು ಸ್ವತಃ ಫೋನ್ ಮಾಡಿ, ದೇವಸ್ಥಾನ ಜೀರ್ಣೋದ್ಧಾರ ಫೈಲ್ ಅನುಮೋದನೆ ಕೊಡಿಸಿದ ಬಳಿಕ ಅನುದಾನವೂ ಬಂದಿತು. ಇದೀಗ ನಮ್ಮೂರಿಗೆ ನೂರು ವರ್ಷವಾದರೂ ನೆನಪು ಮಾಸಿ ಹೋಗದ ಹಾಗೆ ದೊಡ್ಡದಾಗಿ ಗುಡಿ ಕಟ್ಟಿದರು. ಒಂದು ಗುಡಿಗೆ 100 ವರ್ಷ ಆಯಸ್ಸು ಅಂತಾರೆ. ಹಾಗಾಗಿ ಚಿರಂಜೀವಿ ಸರ್ ಮಾಡಿದ ಸಹಾಯ ಮರೆಯೋಕೆ ಆಗಲ್ಲ ಅಂತ ಗುಮ್ಮಡಿ ಶಾರದಾ ಹೇಳಿದ್ದಾರೆ.