ಟಾಲಿವುಡ್‌ನ ಟಾಪ್ 5 ನಟರ ದುಬಾರಿ ಮನೆಗಳಿವು; ಯಾರದ್ದು ಹೆಚ್ಚು ಕಾಸ್ಟ್ಲಿ ಗೊತ್ತಾ?
ಹೈದರಾಬಾದ್‌ನಲ್ಲಿ ಟಾಲಿವುಡ್‌ನ ಸ್ಟಾರ್ ನಟರು ದುಬಾರಿ ಮನೆಗಳನ್ನು ಹೊಂದಿದ್ದಾರೆ. ಅಲ್ಲು ಅರ್ಜುನ್, ಪ್ರಭಾಸ್, ನಾಗಾರ್ಜುನ, ಚಿರಂಜೀವಿ ಮತ್ತು ಮಹೇಶ್ ಬಾಬು ಅವರ ಮನೆಗಳ ಮೌಲ್ಯವೆಷ್ಟು? ಈ ಪಟ್ಟಿಯಲ್ಲಿ ಯಾರು ಟಾಪ್‌ನಲ್ಲಿದ್ದಾರೆ? ಇಲ್ಲಿದೆ ವಿವರ.
16

Image Credit : Asianet News
ಅತ್ಯಂತ ದುಬಾರಿ ಮನೆಗಳನ್ನು ಹೊಂದಿರುವ ಟಾಪ್ 5 ನಟರು
ಟಾಲಿವುಡ್‌ನ ಟಾಪ್ 5 ನಟರ ದುಬಾರಿ ಮನೆಗಳಿವು. ಚಿರಂಜೀವಿ, ಪ್ರಭಾಸ್, ನಾಗಾರ್ಜುನ, ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಅವರ ಮನೆಗಳ ಒಳನೋಟ ಇಲ್ಲಿದೆ.
26
Image Credit : facebook.com/AlluArjun
ಅಲ್ಲು ಅರ್ಜುನ್ ಮನೆ ಮೌಲ್ಯ ₹100 ಕೋಟಿ
ಟಾಲಿವುಡ್‌ನಲ್ಲಿ ಅತ್ಯಂತ ದುಬಾರಿ ಮನೆ ಹೊಂದಿರುವ ನಟ ಅಲ್ಲು ಅರ್ಜುನ್. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಇವರ ಐಷಾರಾಮಿ ಬಂಗಲೆಗೆ 'ಬ್ಲೆಸ್ಸಿಂಗ್' ಎಂದು ಹೆಸರಿಡಲಾಗಿದೆ. ಅತ್ಯಾಧುನಿಕ ಸೌಲಭ್ಯಗಳಿರುವ ಈ ಮನೆಯನ್ನು ಅಲ್ಲು ಅರ್ಜುನ್ ಇತ್ತೀಚೆಗೆ ತಾವೇ ನಿಂತು ಕಟ್ಟಿಸಿದ್ದಾರೆ. ಇದರ ಮೌಲ್ಯ ಸುಮಾರು 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
36
Image Credit : youtube/bahubali movie
ಪ್ರಭಾಸ್ ಮನೆ ಮೌಲ್ಯ ₹70 ಕೋಟಿ
ಅಲ್ಲು ಅರ್ಜುನ್ ನಂತರದ ಸ್ಥಾನದಲ್ಲಿ ಪ್ರಭಾಸ್ ಇದ್ದಾರೆ. ಭಾರತದ ಅತಿದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರಾದ ಪ್ರಭಾಸ್‌ಗೆ ಜುಬಿಲಿ ಹಿಲ್ಸ್‌ನಲ್ಲಿ ಅಲ್ಟ್ರಾ-ಪ್ರೀಮಿಯಂ ಬಂಗಲೆ ಇದೆ. ಹೆಚ್ಚಿನ ಪ್ರೈವಸಿ ಮತ್ತು ಭದ್ರತೆ ಹೊಂದಿರುವ ಈ ಮನೆಯ ಮೌಲ್ಯ ಸುಮಾರು 60-70 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ.
46
Image Credit : youtube print shot/zee telugu
ನಾಗಾರ್ಜುನ ಮನೆ ಮೌಲ್ಯ ₹45 ಕೋಟಿ
ಟಾಲಿವುಡ್ ಕಿಂಗ್ ನಾಗಾರ್ಜುನ ಕೂಡ ಈ ಪಟ್ಟಿಯಲ್ಲಿದ್ದಾರೆ. ಅವರು ಪ್ಯಾನ್-ಇಂಡಿಯಾ ರೇಸ್‌ನಲ್ಲಿ ಇಲ್ಲದಿದ್ದರೂ, ಆಸ್ತಿಯ ವಿಚಾರದಲ್ಲಿ ತೆಲುಗಿನ ಶ್ರೀಮಂತ ನಟರಲ್ಲಿ ಒಬ್ಬರು. ಜುಬಿಲಿ ಹಿಲ್ಸ್‌ನಲ್ಲಿರುವ ಇವರ ಮನೆಯು ಅತ್ಯಾಧುನಿಕ ಇಂಟೀರಿಯರ್ ಡಿಸೈನ್‌ನಿಂದ ಕೂಡಿದೆ. ಈ ಮನೆಯ ಮೌಲ್ಯ ಸುಮಾರು 45 ಕೋಟಿ ರೂಪಾಯಿ ಎನ್ನಲಾಗಿದೆ.
56
Image Credit : Youtube/@GoldBoxEnt
ಚಿರಂಜೀವಿ ಮನೆ ಮೌಲ್ಯ ₹35 ಕೋಟಿ
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಕೂಡ ಈ ದುಬಾರಿ ಮನೆಗಳ ಪಟ್ಟಿಯಲ್ಲಿದ್ದಾರೆ. ಜುಬಿಲಿ ಹಿಲ್ಸ್‌ನಲ್ಲಿರುವ ಇವರ ಮನೆಯ ಇಂಟೀರಿಯರ್ ರಾಜಮನೆತನದ ಲುಕ್ ನೀಡುತ್ತದೆ. ಈ ಮನೆಯ ಮೌಲ್ಯ ಸುಮಾರು 35 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ.
66
Image Credit : our own
ಮಹೇಶ್ ಬಾಬು ಮನೆ ಮೌಲ್ಯ ₹30 ಕೋಟಿ
ಸೂಪರ್‌ಸ್ಟಾರ್ ಮಹೇಶ್ ಬಾಬು ಕೂಡ ಜುಬಿಲಿ ಹಿಲ್ಸ್‌ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಎಲ್ಲಾ ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಈ ಮನೆಯ ಮೌಲ್ಯ ಸುಮಾರು 30 ಕೋಟಿ ರೂಪಾಯಿ ಎನ್ನಲಾಗಿದೆ.
ಉಳಿದ ನಟರ ಮನೆಗಳ ಮೌಲ್ಯ 10-15 ಕೋಟಿ ಒಳಗಿರಬಹುದು ಎನ್ನಲಾಗಿದ್ದು, ಈ ಎಲ್ಲಾ ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವರದಿಗಳನ್ನು ಆಧರಿಸಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos

