ಸೆನ್ಸಾರ್ ಬೋರ್ಡ್ ನಿಷೇಧಿಸಿದ್ದ ಇಳಯರಾಜ ಹಾಡು ಸೂಪರ್ ಹಿಟ್ ಆಗಿದ್ದೇಗೆ?
ಸೆನ್ಸಾರ್ ಬೋರ್ಡ್ ನಿಷೇಧ ಹೇರಿದ್ದ ಹಾಡನ್ನ ಇಳಯರಾಜ ಬೇರೆ ಸಿನಿಮಾದಲ್ಲಿ ಯೂಸ್ ಮಾಡಿ ಸೂಪರ್ ಹಿಟ್ ಮಾಡಿದ್ರಂತೆ!
ಇಸೈಜ್ಞಾನಿ ಇಳಯರಾಜ ಅವರ ಹಾಡುಗಳು ಜನರ ಜೀವನದ ಒಂದು ಭಾಗ. 40 ವರ್ಷಗಳಿಂದ ಸಂಗೀತದ ಮೂಲಕ ರಾಜ್ಯಭಾರ ಮಾಡ್ತಿರೋ ಅವರು ಈಗಲೂ ಟ್ರೆಂಡಲ್ಲಿ ಇದ್ದಾರೆ. ಎ.ಆರ್.ರಹಮಾನ್, ಅನಿರುದ್ ಟಾಪ್ ಗೇರ್ನಲ್ಲಿ ಹೋಗ್ತಿದ್ರೂ, 'ವಿದುತಲೈ 2' ಹಾಡುಗಳ ಮೂಲಕ ರೇಸ್ನಲ್ಲಿ ಇದ್ದಾರೆ. 80 ದಾಟಿದ್ರೂ ಇಳಯರಾಜ ಇನ್ನೂ ಯಂಗ್.
ಇಸೈಜ್ಞಾನಿ ಸಂಗೀತದ ಹಾಡಿಗೆ ಸೆನ್ಸಾರ್ ಬೋರ್ಡ್ ನಿಷೇಧ ಹೇರಿತ್ತು. ಆದ್ರೆ ಅದೇ ಟ್ಯೂನ್ನ್ನ ಬೇರೆ ಸಿನಿಮಾದಲ್ಲಿ ಯೂಸ್ ಮಾಡಿ ಸೂಪರ್ ಹಿಟ್ ಕೊಟ್ರು. ಕಮಲ್ ಹಾಸನ್ 'ಸಕಲಕಲಾ ವಲ್ಲವನ್' ಸಿನಿಮಾದ 'ನಿಲಾ ಕಾಯುದು' ಹಾಡು ಅದು. ಮಲೇಷ್ಯಾ ವಾಸುದೇವನ್, ಜಾನಕಿ ಹಾಡಿದ್ರು.
ಊರ ಹಬ್ಬಗಳಲ್ಲಿ ಈ ಹಾಡು ಇದ್ದೇ ಇರುತ್ತೆ. 'ನಿಲಾ ಕಾಯುದು' ಹಾಡನ್ನ ಇಳಯರಾಜ 'ಸಕಲಕಲಾ ವಲ್ಲವನ್'ಗೆ ಕಂಪೋಸ್ ಮಾಡಿರಲಿಲ್ಲ ಅಂದ್ರೆ ನಂಬ್ತೀರಾ? ಆದ್ರೆ ಅದು ಸತ್ಯ. 1981ರಲ್ಲಿ ಕಾರೈಕುಡಿ ನಾರಾಯಣನ್ ನಿರ್ದೇಶನದ 'ನಲ್ಲತು ನಡಂತೇ ತೀರುಮ್' ಸಿನಿಮಾಗೆ ಕಂಪೋಸ್ ಮಾಡಿದ್ದರಂತೆ.
ಹಾಡಿನ ಸೀನ್ ಶೂಟ್ ಮಾಡಿ ಸೆನ್ಸಾರ್ಗೆ ಕಳಿಸಿದಾಗ, ಈ ಹಾಡು ಬೇಡ ಅಂದ್ರೆ ಮಾತ್ರ ರಿಲೀಸ್ಗೆ ಅಲೋ ಮಾಡ್ತೀವಿ ಅಂತ ಸೆನ್ಸಾರ್ ಬೋರ್ಡ್ ಅಧಿಕಾರಿಗಳು ಹೇಳಿದ್ರಂತೆ. ಹಾಗಾಗಿ ಹಾಡನ್ನ ತೆಗೆದು ಸಿನಿಮಾ ರಿಲೀಸ್ ಮಾಡಿದ್ರು.
ಆದ್ರೆ ಇಳಯರಾಜಗೆ ಆ ಟ್ಯೂನ್ ಇಷ್ಟ ಆಗಿತ್ತಂತೆ. ಬೇರೆ ಸಿನಿಮಾದಲ್ಲಿ ಯೂಸ್ ಮಾಡ್ಬೇಕು ಅಂತಿದ್ರಂತೆ. ಆಗ 'ಸಕಲಕಲಾ ವಲ್ಲವನ್' ಕಂಪೋಸಿಂಗ್ ನಡೀತಿತ್ತು. ರಾಜಾ ಆ ಟ್ಯೂನ್ ಹಾಕಿದ್ರು, ಎಲ್ಲರಿಗೂ ಇಷ್ಟ ಆಯ್ತು. 'ನಲ್ಲತು ನಡಂತೇ ತೀರುಮ್' ಚಿತ್ರತಂಡದಿಂದ ಪರ್ಮಿಷನ್ ಪಡೆದು 'ಸಕಲಕಲಾ ವಲ್ಲವನ್'ನಲ್ಲಿ ಯೂಸ್ ಮಾಡಿದ್ರು. ಸೂಪರ್ ಡೂಪರ್ ಹಿಟ್ ಆಯ್ತು, ರಾಜಾ ಡಬಲ್ ಖುಷ್ ಆದ್ರಂತೆ.