ಈ ಪೋಟೋದಲ್ಲಿ ಇಬ್ಬರು ಪ್ರಖ್ಯಾತ ನಾಯಕಿಯರಿದ್ದಾರೆ! ಗುರುತಿಸಿ
ಮುಂಬೈ(ಸೆ. 10) ಈ ಪೋಟೋದಲ್ಲಿ ಇರುವವರನ್ನು ನೀವು ಪಕ್ಕಾ ಅಭಿಮಾನಿಗಳಾಗಿದ್ದರೆ ಗುರುತಿಸಿಯೇ ಗುರುತಿಸುತ್ತೀರಿ. ನಟ ಮತ್ತು ಮಾಡೆಲ್ ಆಗಿದ್ದ ಮಾರ್ಕ್ ರಾಬಿನ್ಸನ್ ಹಂಚಿಕೊಂಡಿರುವ ಪೋಟೋದಲ್ಲಿ ಈಗಿನ ಇಬ್ಬರು ಪ್ರಖ್ಯಾತ ನಟಿಯರಿದ್ದಾರೆ.
ಮಾರ್ಕ್ ರಾಬಿನ್ಸನ್ ಹಳೆಯ ಪೋಟೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಈ ಪೋಟೋದಲ್ಲಿ ಇದ್ದಾರೆ.
ದೀಪಿಕಾ ಮತ್ತು ಕತ್ರೀನಾ ಜತೆಗೆ ಸೋಫಿಯಾ ಚೌಧರಿ ಮತ್ತು ತರುಣ್ ಅರೋರಾನ್ನು ಇಲ್ಲಿ ಕಾಣಬಹುದು. ಮಾಡೆಲಿಂಗ್ ಜಮಾನಾದ ಪೋಟೋ ಒಂದನ್ನು ಹಂಚಿಕೊಂಡು ಹಳೆ ನೆನಪು ಮೆಲಕು ಹಾಕಿದ್ದಾರೆ.
ಈ ಚಿತ್ರದಲ್ಲಿ ದೀಪಿಕಾ ಎಲ್ಲರಿಗಿಂತ ಹಿಂದೆ ಇದ್ದಾರೆ. ಹಳೆಯ ಜೀನ್ಸ್ ಅವತಾರದಲ್ಲಿ ಕಾಣಿಸಿಕಿಕೊಂಡಿದ್ದರು. ದೀಪಿಕಾಗಿಂತ ಕೊಂಚ ಮುಂದೆ ಕತ್ರೀನಾ ನಿಂತುಕೊಂಡಿದ್ದಾರೆ.
ನಂತರ ಬದಲಾದ ದಿನದಲ್ಲಿ ದೀಪಿಕಾ ಮತ್ತು ಕತ್ರೀನಾ ಬಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಿದರು. ದೀಪಿಕಾ ಕನ್ನಡದ ಐಶ್ವರ್ಯ ಸಿನಿಮಾದ ಮೂಲಕ ಪದಾರ್ಪಣೆ ಮಾಡಿದರೂ ಬಾಲಿವುಡ್ ನಲ್ಲಿ ದೊಡ್ಡ ಹೆಸರು ಸಂಪಾದನೆ ಮಾಡಿಕೊಂಡು ರಣವೀರ್ ಸಿಂಗ್ ಅವರನ್ನು ಮದುವೆಯಾದರು.