Box Office Report: ಅತಿ ಹೆಚ್ಚು ಗಳಿಸಿದ ಆರ್ ಮಾಧವನ್ 'ರಾಕೆಟ್ರಿ'
ಆರ್ ಮಾಧವನ್ (R Madhavan) ಅವರ 'ರಾಕೆಟ್ರಿ' : ದಿ ನಂಬಿ ಎಫೆಕ್ಟ್ (Rocketry: The Nambi Effect) ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಈ ಸಿನಿಮಾಕ್ಕೆ ಪ್ರೇಕ್ಷಕರು ಮತ್ತು ಚಿತ್ರರಂಗದ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ರಾಕೆಟ್ರಿ ಬಾಕ್ಸ್ ಆಫೀಸ್‌ನಲ್ಲಿ ಸಹ ಉತ್ತಮ ಗಳಿಕೆ ಮಾಡುತ್ತಿದೆ. ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’,ರಾಷ್ಟ್ರ ಕವಚ ಓಂ (Rastra Kavach Om), ಜಗ್ ಜಗ್ ಜೀಯೋ (Jug Jugg Jeeyo) ಮತ್ತು ವಿಕ್ರಮ್ ( Vikram) ಚಿತ್ರಗಳ ಪೈಕಿ ಆರ್ ಮಾಧವ್ ಅವರ ಚಿತ್ರ ಬುಧವಾರ ಗರಿಷ್ಠ ಕಲೆಕ್ಷನ್ ಮಾಡಿದೆ. ಈ ಚಿತ್ರಗಳು ಬುಧವಾರದಂದು ಹೇಗೆ ಪ್ರದರ್ಶನ ನೀಡಿತು ಮತ್ತು ಅವುಗಳ ಒಟ್ಟು ಸಂಗ್ರಹದ ವಿವರಗಳು ಇಲ್ಲಿದೆ.

ಈ ವಾರ ಗಲ್ಲಾಪೆಟ್ಟಿಗೆಯಲ್ಲಿ ಕನಿಷ್ಠ ನಾಲ್ಕು ಚಿತ್ರಗಳು ಪರಸ್ಪರ ಸ್ಪರ್ಧಿಸುತ್ತಿವೆ, ಅವುಗಳೆಂದರೆ, 'ರಾಕೆಟ್ರಿ: ದಿ ನಂಬಿ ಎಫೆಕ್ಟ್', 'ರಾಷ್ಟ್ರ ಕವಚ ಓಂ', 'ಜಗ್ ಜಗ್ ಜೀಯೋ' ಮತ್ತು 'ವಿಕ್ರಮ್'. ಕಮಲ್ ಹಾಸನ್ ಅವರ ವಿಕ್ರಮ್ ವಾರಗಟ್ಟಲೆ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿ ಓಡುತ್ತಿದ್ದರೆ, ಆರ್ ಮಾಧವನ್ ಅವರ 'ರಾಕೆಟ್ರಿ' ವರುಣ್ ಧವನ್ ಮತ್ತು ಕೈರಾ ಅಡ್ವಾಣಿ ಅಭಿನಯದ 'ಜಗ್ ಜಗ್ ಜೀಯೋ' ಮತ್ತು ಆದಿತ್ಯ ರಾಯ್ ಕಪೂರ್ ಅವರ 'ರಾಷ್ಟ್ರ ಕವಚ ಓಂ' ಗೆ ಕಠಿಣ ಸ್ವರ್ಧೆ ನೀಡುತ್ತಿದೆ.
ರಾಕೆಟ್ರಿ: ದಿ ನಂಬಿ ಎಫೆಕ್ಟ್: ಆರ್ ಮಾಧವನ್ ನಿರ್ದೇಶನದ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಮತ್ತು ಚಿತ್ರರಂಗದ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಚಿತ್ರವು ಉತ್ತಮ ಪ್ರದರ್ಶನ ನೀಡುತ್ತಲೇ ಇದೆ. ಚಿತ್ರ ಬಿಡುಗಡೆಯಾಗಿ ಆರು ದಿನಗಳನ್ನು ಪೂರೈಸಿದೆ. ಮೊದಲ ಬುಧವಾರದಂದು ಚಿತ್ರ 1.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಚಿತ್ರ ಇದುವರೆಗೆ ಒಟ್ಟು 12.39 ಕೋಟಿ ರೂ.
ರಾಷ್ಟ್ರ ಕವಚ ಓಂ:ಆರ್ ಮಾಧವನ್ ಅಭಿನಯದ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಜೊತೆಗೆ ಬಿಡುಗಡೆಯಾದ ಕಪಿಲ್ ವರ್ಮಾ ಅವರ 'ರಾಷ್ಟ್ರ ಕವಚ ಓಂ' ಚಿತ್ರದ ವೇಗ ಥಿಯೇಟರ್‌ಗಳಲ್ಲಿ ನಿಧಾನವಾಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಪ್ರದರ್ಶನವನ್ನು ನೋಡಿದರೆ ಆದಿತ್ಯ ರಾಯ್ ಕಪೂರ್ ಅವರ ಚಿತ್ರ ರಾಕೆಟ್‌ಗಿಂತ ಹಿಂದೆ ಬಿದ್ದಿದೆ ಎಂದು ಹೇಳಬಹುದು. ಆರು ದಿನದಲ್ಲಿ ಚಿತ್ರ ಕೇವಲ 7.28 ಕೋಟಿ ಬ್ಯುಸಿನೆಸ್ ಮಾಡಿದೆ.
ಜಗ್ ಜಗ್ ಜೀಯೋ: 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಬಿಡುಗಡೆಯಾದ ನಂತರ ಜಗ್ ಜಗ್ ಜೀಯೋ ಗಳಿಕೆಯ ವೇಗ ಕಡಿಮೆಯಾಗಿದೆ. ವರುಣ್ ಧವನ್, ಕಿಯಾರಾ ಅಡ್ವಾಣಿ ನೀತು ಕಪೂರ್ ಮತ್ತು ಅನಿಲ್ ಕಪೂರ್ ಅಭಿನಯದ ಈ ಚಿತ್ರವು ಬಿಡುಗಡೆಯಾದ 13 ನೇ ದಿನವಾದ ಎರಡನೇ ಬುಧವಾರದಂದು ಸುಮಾರು 1.60 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ಗಳಿಕೆ 72.69 ಕೋಟಿ ರೂ.ಗೆ ಏರಿಕೆಯಾಗಿದೆ.
ವಿಕ್ರಮ್: ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರವೂ ಹಲವು ವಾರಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದೆ. ಹಿಂದಿ ಬೆಲ್ಟ್‌ನಲ್ಲಿ ಚಿತ್ರವು ವಿಶೇಷವಾದದ್ದನ್ನು ಮಾಡಲು ಸಾಧ್ಯವಾಗದಿರಬಹುದು, ಆದರೆ ಇದು ನಿರಂತರವಾಗಿ ದೇಶೀಯ ಮಾರುಕಟ್ಟೆಯಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸುತ್ತಿದೆ. ಈ ನಡುವೆ ಚಿತ್ರ 34ನೇ ದಿನದ ವಹಿವಾಟಿನ ಅಂಕಿ-ಅಂಶ ಕೂಡ ಬಯಲಿಗೆ ಬಂದಿದೆ. ಬಿಡುಗಡೆಯಾದ 34ನೇ ದಿನಕ್ಕೆ ಚಿತ್ರ ಒಟ್ಟು 5 ಲಕ್ಷ ಗಳಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ಗಳಿಕೆ 442.45 ಕೋಟಿ ರೂ.ಗೆ ಏರಿಕೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.