ಹಾಲಿವುಡ್ ಆಯ್ತು, ಇದೀಗ ಬಾಲಿವುಡ್ ಲೆಜೆಂಡ್ ಶ್ರೀದೇವಿಗೆ ತನ್ನನ್ನು ಹೋಲಿಸಿಕೊಂಡ ಕಂಗನಾ!
ಬಾಲಿವುಡ್ ವಿವಾದಗಳ ನಟಿ ಕಂಗನಾ ರಣಾವತ್ ಒಂದಲ್ಲ ಒಂದು ರಗಳೆಯನ್ನು ತಮ್ಮ ಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ತಮ್ಮನ್ನು ಹಾಲಿವುಡ್ ನಟಿಯರಿಗೆ ಹೋಲಿಸಿಕೊಂಡು ಭಾರಿ ಟೀಕೆಗೆ ಗುರಿಯಾಗಿದ್ದರು. ಇದೀಗ ಮತ್ತೆ ಕಂಗನಾರ ಮೇಲೆ ನೆಟ್ಟಿಗ್ಗರು ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಕಂಗನಾ ತಮ್ಮನ್ನು ಬಾಲಿವುಡ್‌ನ ಲೆಜೆಂಡ್ ಶ್ರೀದೇವಿಗೆ ತಮ್ಮನ್ನು ಹೋಲಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಯೂಸರ್ಸ್ ಕಂಗನಾರ ಸ್ವಯಂ ಪ್ರಶಂಸೆಗೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ.
ಇತ್ತೀಚೆಗೆ ಕಂಗನಾ ರಣಾವತ್ ತಮ್ಮ ತನು ವೆಡ್ಸ್ ಮನು ಸಿನಿಮಾ ಬಿಡುಗಡೆಯಾದ 10ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ.
ತಮ್ಮೊಂದಿಗೆ ಈ ಚಿತ್ರದಲ್ಲಿ ಅಭಿನಯಿಸಿದ ಸ್ವರಾ ಭಾಸ್ಕರ್ ಅವರನ್ನೂ ಟ್ವೀಟಿನಲ್ಲಿ ಟ್ಯಾಗ್ ಮಾಡಿದ್ದಾರೆ. ಆದರೆ, ತಾವು ಬಿಟ್ಟರೆ ಬೇರೆ ಇಲ್ಲ ಎನ್ನುವ ಅರ್ಥ ಬರುವಂತೆ ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ಲೇಡಿ ಸೂಪರ್ ಸ್ಟಾರ್ ಶ್ರೀದೇವಿಯೊಂದಿಗೆ ಹೋಲಿಸಿಕೊಂಡಿದ್ದಾರೆ ಬಾಲಿವುಡ್ ಕ್ವೀನ್.
ದಿವಂಗತ ಲೆಜೆಂಡ್ ಸ್ಟಾರ್ ಶ್ರೀದೇವಿ ಅವರ ನಂತರ ಚಿತ್ರರಂಗದಲ್ಲಿ ಹಾಸ್ಯ ಪಾತ್ರ ಮಾಡಿದ ಏಕೈಕ ಮಹಿಳಾ ನಟಿ ನಾನು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಕಂಗನಾರ ಸ್ವಯಂ ಪ್ರಶಂಸೆಗೆ ನೆಟಿಜನ್‌ಗಳು ನಟಿಯನ್ನು ಟ್ರೋಲ್ ಮಾಡಿದ್ದಾರೆ.
ಶ್ರೀದೇವಿ ನಂತರ, ಜುಹೀ ಚಾವ್ಲಾ ಮತ್ತು ಕಾಜೋಲ್ ಅವರಂತಹ ಇತರೆ ಅದ್ಭುತ ನಟಿಯರು ಬಾಲಿವುಡ್‌ನಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಅವರೆಲ್ಲಾ ಪರ್ಫೆಕ್ಟ್ ಕಾಮಿಕ್ ಟೈಮ್ ಹೊಂದಿದ್ದರು ಎಂದು ನೆಟಿಜನ್ಸ್ ಕಂಗನಾ ಕಾಲೆಳೆದಿದ್ದಾರೆ.
'ಹೌದು, ನೀವು ಚಿತ್ರದಲ್ಲಿ ಅದ್ಭುತವಾಗಿ ನಟಿಸುತ್ತೀರಿ. ಆದರೆ ಶ್ರೀದೇವಿ ನಂತರ ಹಾಸ್ಯ ಮಾಡಿದ ಮೊದಲ ವ್ಯಕ್ತಿ ನೀವು ಎಂದು ಹೇಳುವ ಮೊದಲು ದಯವಿಟ್ಟು ಕಬಿ ಕುಶಿ ಕಭಿ ಘಮ್‌ನಲ್ಲಿ ಕಾಜೋಲ್ ಅವರನ್ನು ನೋಡಿ. ಆ ಸಿನಿಮಾದಲ್ಲಿ ಅವರು ಟೆರಿಫಿಕ್ ಮತ್ತು ಅವರ ಕಾಮಿಕ್ ಟೈಮಿಂಗ್ ಸಹ ಅದ್ಭುತವಾಗಿದೆ ಮತ್ತು ಶ್ರೀದೇವಿಗೆ ಸಮಾನವಾಗಿ ಅಭನಯಿಸಿದ್ದಾರೆ,' ಎಂದು ಮತ್ತೊಬ್ಬ ನೆಟಿಜನ್ಸ್ ರಿಪ್ಲೇ ಮಾಡಿದ್ದಾರೆ.
ಬಾಲಿವುಡ್‌ನಲ್ಲಿ ಯಾವುದೇ ಹಿನ್ನೆಲೆ ಇಲ್ಲದೆಯೂ ತಮ್ಮ ಪ್ರತಿಭೆ ಹಾಗೂ ಸೌಂದರ್ಯದಿಂದ ಕಂಗನಾ ನೆಲೆ ಕಂಡು ಕೊಂಡಿದ್ದು ಸುಳ್ಳಲ್ಲ. ಆದರೆ, ತಮ್ಮನ್ನು ಬಿಟ್ಟರೆ ಬೇರೆ ಯಾವ ನಟಿಯೂ ಇಲ್ಲ ಎಂದು ಪದೇ ಪದೆ ಕೊಚ್ಚಿಕೊಳ್ಳುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಶ್ರೀದೇವಿ ನಂತರ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಜೂಹಿ ಚಾವ್ಲಾ ಹಾಗೂ ಕಾಜೋಲ್ ಅವರಂಥ ನಟಿಯರೂ ಎಂಥದ್ದೇ ಪಾತ್ರವಾದರೂ ಸೈ ಎನ್ನುವಂತೆ ನಟಿಸುತ್ತಿದ್ದರು.
ಹಾಲಿವುಡ್ ತಾರೆಗಳಾದ ಮೆರಿಲ್ ಸ್ಟ್ರೀಪ್ ಮತ್ತು ಗಾಲ್ ಗಡೊಟ್ ಅವರೊಂದಿಗೆ ತಮ್ಮನ್ನು ಹೋಲಿಸಿಕೊಂಡಿದ್ದ ಕಂಗನಾ ಇತ್ತೀಚೆಗೆ ನಗೆಪಾಟಿಲಿಗೆ ಈಡಾಗಿದ್ದಾರೆ. ಅದರಿಂದ ಪಾಠ ಕಲಿಯದೇ ಇದೀಗ ಶ್ರೀದೇವಿಯಂಥ ನಟಿಯೊಂದಿಗೆ ತಮ್ಮನ್ನು ಹೋಲಿಸಿಕೊಂಡಿದ್ದಾರೆ.
ಕಂಗನಾಗೆ ವಿಶೇಷ ಪ್ರತಿಭೆ ಇರುವುದು ಹೌದು. ವಿಭಿನ್ನ ಪಾತ್ರಗಳಿಗೆ ಜೀವ ತುಂಬಿರುವುದು ಸುಳ್ಳಲ್ಲ. ಆದರೆ, ವಿಶ್ವದ ಮಹಾನ್ ನಟಿಯರೊಂದಿಗೆ ತಮ್ಮನ್ನು ತಾವೇ ಹೋಲಿಸಿಕೊಳ್ಳುವುದು ಅದೆಷ್ಟು ಸರಿ ಎಂಬುವುದು ನೆಟ್ಟಿಗರ ಪ್ರಶ್ನೆ.