- Home
- Entertainment
- Cine World
- ರಾಮ್ ಚರಣ್‌ಗಾಗಿ ನಿರ್ದೇಶಕರನ್ನು ಕ್ಯೂನಲ್ಲಿ ನಿಲ್ಲಿಸ್ತಿರೋ ಬಾಲಿವುಡ್ ನಿರ್ಮಾಪಕ ಯಾರು?
ರಾಮ್ ಚರಣ್‌ಗಾಗಿ ನಿರ್ದೇಶಕರನ್ನು ಕ್ಯೂನಲ್ಲಿ ನಿಲ್ಲಿಸ್ತಿರೋ ಬಾಲಿವುಡ್ ನಿರ್ಮಾಪಕ ಯಾರು?
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸದ್ಯಕ್ಕೆ ಬುಚ್ಚಿಬಾಬು ನಿರ್ದೇಶನದಲ್ಲಿ ನಟಿಸ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಮೈತ್ರಿ ಮೂವೀಸ್ ಸಂಸ್ಥೆ ದೊಡ್ಡ ಬಜೆಟ್‌ನಲ್ಲಿ ಈ ಚಿತ್ರವನ್ನು ರೂರಲ್ ಸ್ಪೋರ್ಟ್ಸ್ ಬ್ಯಾಕ್ ಡ್ರಾಪ್‌ನಲ್ಲಿ ತೆರೆಗೆ ತರ್ತಿದೆ.

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಸದ್ಯಕ್ಕೆ ಬುಚ್ಚಿಬಾಬು ನಿರ್ದೇಶನದಲ್ಲಿ ನಟಿಸ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಮೈತ್ರಿ ಮೂವೀಸ್ ಸಂಸ್ಥೆ ದೊಡ್ಡ ಬಜೆಟ್‌ನಲ್ಲಿ ಈ ಚಿತ್ರವನ್ನು ರೂರಲ್ ಸ್ಪೋರ್ಟ್ಸ್ ಬ್ಯಾಕ್ ಡ್ರಾಪ್‌ನಲ್ಲಿ ತೆರೆಗೆ ತರ್ತಿದೆ. ಜಾನ್ವಿ ಕಪೂರ್ ಹೀರೋಯಿನ್ ಆಗಿ ನಟಿಸ್ತಿದ್ದು, ಜಗಪತಿ ಬಾಬು, ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಮುಖ್ಯ ಪಾತ್ರಗಳಲ್ಲಿ ನಟಿಸ್ತಿದ್ದಾರೆ.
ಈ ಮೂವಿ ಆದ್ಮೇಲೆ ರಾಮ್ ಚರಣ್ ತನಗೆ ರಂಗಸ್ಥಳಂ ತರಹದ ಕೆರಿಯರ್ ಬೆಸ್ಟ್ ಮೂವಿ ಕೊಟ್ಟ ಸುಕುಮಾರ್ ನಿರ್ದೇಶನದಲ್ಲಿ ನಟಿಸಬೇಕಿದೆ. ಆಲ್ರೆಡಿ ಈ ಪ್ರಾಜೆಕ್ಟ್ ಫೈನಲ್ ಆಗಿದೆ. ಆದ್ರೆ ಆಫೀಶಿಯಲ್ ಅನೌನ್ಸ್ಮೆಂಟ್ ಬರಬೇಕಿದೆ. ಸದ್ಯಕ್ಕೆ ಚರಣ್ ಕೈಯಲ್ಲಿ ಈ ಎರಡು ಚಿತ್ರಗಳಿವೆ. ಇನ್ನೊಂದು ಚಿತ್ರವನ್ನು ಲೈನ್‌ಗೆ ತರೋಕೆ ರಾಮ್ ಚರಣ್ ಅಂದ್ಕೊಂಡಿದ್ದಾರೆ. ಸೌತ್ ಡೈರೆಕ್ಟರ್ಸ್ ಜೊತೆ ಸಿನಿಮಾ ಮಾಡೋ ಬದಲು ಬಾಲಿವುಡ್ ಡೈರೆಕ್ಟರ್ಸ್ ಜೊತೆ ಸಿನಿಮಾ ಮಾಡೋಕೆ ರಾಮ್ ಚರಣ್ ಇಂಟರೆಸ್ಟ್ ತೋರಿಸ್ತಿದ್ದಾರೆ.
ಇತ್ತೀಚೆಗೆ ಕಿಲ್ ಡೈರೆಕ್ಟರ್ ನಿಖಿಲ್ ನಾಗೇಶ್.. ರಾಮ್ ಚರಣ್ ಜೊತೆ ಮೂವಿ ಮಾಡ್ತಾರೆ ಅಂತ ಸುದ್ದಿ ಬಂದಿತ್ತು. ಪುರಾಣಕ್ಕೆ ಸಂಬಂಧಪಟ್ಟ ಅದ್ಭುತವಾದ ಕಥೆ ಅವರ ಹತ್ರ ಇದೆ ಅನ್ನೋದು ಟಾಕ್. ಆದ್ರೆ ಈ ಸುದ್ದಿನ ನಿಖಿಲ್ ನಾಗೇಶ್ ತಳ್ಳಿ ಹಾಕಿದ್ದಾರೆ. ಈಗ ಇನ್ನೊಂದು ಕ್ರೇಜಿ ರೂಮರ್ ವೈರಲ್ ಆಗಿದೆ. ರಾಮ್ ಚರಣ್ ಜೊತೆ ಕ್ಲೋಸ್ ಆಗಿರೋ ಬಾಲಿವುಡ್ ಪ್ರೊಡ್ಯೂಸರ್ ಒಬ್ಬರು ಇದ್ದಾರೆ. ಅವರ ಹೆಸರು ಮಧು ಮಂತೇನಾ. ಗಜಿನಿ, ರಕ್ತ ಚರಿತ್ರೆ, ಕ್ವೀನ್ ತರಹದ ಚಿತ್ರಗಳನ್ನು ಬಾಲಿವುಡ್‌ನಲ್ಲಿ ನಿರ್ಮಿಸಿದ್ದಾರೆ.
ರಾಮ್ ಚರಣ್ ಮುಂಬೈಗೆ ಹೋದಾಗೆಲ್ಲಾ ಮಧು ಮಂತೇನಾ ಆತಿಥ್ಯ ಕೊಡ್ತಾರಂತೆ. ರಾಮ್ ಚರಣ್ ಜೊತೆ ಮೂವಿ ಮಾಡೋಕೆ ಮಧು ಮಂತೇನಾ ತುಂಬಾ ಬಾಲಿವುಡ್ ಡೈರೆಕ್ಟರ್ಸ್ ಜೊತೆ ಮಾತಾಡ್ತಿದ್ದಾರಂತೆ. ಇದುವರೆಗೂ ಏನೂ ಫೈನಲ್ ಆಗಿಲ್ಲ. ಒಳ್ಳೆ ಸ್ಕ್ರಿಪ್ಟ್ ಸಿಕ್ಕಿದ್ರೆ ತಕ್ಷಣ ಲಾಕ್ ಮಾಡೋ ಪ್ರಯತ್ನ ನಡೀತಿದೆಯಂತೆ.