ಇಶಾ ಗುಪ್ತಾ ಹಾಟ್ ಬಿಕಿನಿ ಫೋಟೋ ಮತ್ತೆ ವೈರಲ್, ರಸಗುಲ್ಲಾ ಎಂದ ಫ್ಯಾನ್ಸ್!
ಬಾಲಿವುಡ್ ಬೆಡಗಿ ಇಶಾ ಗುಪ್ತಾ ಇತ್ತೀಚೆಗೆ ಬಾರಿ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ಕಾಸ್ಟಿಂಗ್ ಕೌಚ್ ಕುರಿತು ಸ್ಫೋಟಕ ಹೇಳಿಕೆ ನೀಡಿ ತಲ್ಲಣಗೊಳಿಸಿದ್ದಾರೆ. ಇದೀಗ ಇಶಾ ಗುಪ್ತಾ ಹಾಟ್ ಬಿಕಿನಿ ಫೋಟೋ ಒಂದು ವೈರಲ್ ಆಗಿದೆ.
ಹಾಟ್ ಲುಕ್, ಬೋಲ್ಡ್ ನಟನೆ ಮೂಲಕ ಭಾರಿ ಜನಪ್ರಿಯವಾಗಿರುವ ಬಾಲಿವುಡ್ ನಟಿ ಇಶಾ ಗುಪ್ತಾ ಇತ್ತೀಚೆಗೆ ಬಾಲಿವುಡ್ನಲ್ಲಿ ಮಂಚಕ್ಕೆ ಕರೆದ ಘಟನೆ ಬಹಿರಂಗಪಡಿಸುವ ಮೂಲಕ ಬಾಲಿವುಡ್ ಕರಾಳತೆ ಮುಖ ಬಿಚ್ಚಿಟ್ಟಿದ್ದಾರೆ.
ಇಶಾ ಗುಪ್ತಾ ಸ್ಫೋಟಕ ಹೇಳಿಕೆ ನಡುವೆ ಇದೀಗ ಕಳೆದ ತಿಂಗಳು ಪೋಸ್ಟ್ ಮಾಡಿದ್ದ ಹಾಟ್ ಬಿಕಿನಿ ಫೋಟೋ ಒಂದು ಮತ್ತೆ ವೈರಲ್ ಆಗಿದೆ. ಇದಕ್ಕಿದ್ದಂತೆ ಈ ಫೋಟೋಗಳಿಗೆ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ಹಾಟ್ ಲ್ಯಾವೆಂಡರ್ ಬಿಕಿನಿ ಮೂಲಕ ಇಶಾ ಗುಪ್ತ ಕಾಣಿಸಿಕೊಂಡಿದ್ದಾರೆ. ಇಶಾ ಗುಪ್ತ ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲಲ್ಲ. ಹಲವು ಬಾರಿ ಇಶಾ ಇದೇ ರೀತಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ
ಗ್ರೀನ್, ಬ್ಲಾಕ್ ಸೇರಿದಂತೆ ಹಲವು ಬಣ್ಣದ ಬಿಕಿನಿಯಲ್ಲಿ ಇಶಾ ಗುಪ್ತಾ ಇಂಟರ್ನೆಟ್ ಮೈಬಿಸಿ ಏರಿಸಿದ್ದರೆ. ಇಶಾ ಹಾಟ್ ಫೋಟೋಗೆ ಅಭಿಮಾನಿಗಳು ಭಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಇಶಾ ಗುಪ್ತಾ ಬಾಲಿವುಡ್ನಲ್ಲಿ ತಮಗೆ ಆಗಿರುವ ಅನ್ಯಾಯವನ್ನು ತೋಡಿಕೊಂಡಿದ್ದರು. ನಿರ್ಮಾಪಕ ಹಾಗೂ ಸಹ ನಿರ್ಮಾಪಕ ಮಂಚಕ್ಕೆ ಕರೆದ ಘಟನೆಯನ್ನು ಹೇಳಿದ್ದಾರೆ.
ನಿರ್ಮಾಪಕರರ ಆದೇಶ ದಿಕ್ಕಿರಿಸಿದ ನನ್ನನ್ನು ಸಿನಿಮಾದಿಂದಲೇ ಹೊರಹಾಕಲಾಯಿತು. ಬಳಿಕ ಈತನಿಗೆ ಪರಿಚಯಸ್ಥ ಹಲವು ನಿರ್ಮಾಪಕರು ನನಗೆ ಸಿನಿಮಾ ನೀಡುವುದೇ ನಿರಾಕರಿಸಿದರು ಎಂದು ಇಶಾ ಗುಪ್ತ ಹೇಳಿದ್ದರು.
ಯಾವುದೇ ಹಿನ್ನಲೆ ಇಲ್ಲದೇ ಚಿತ್ರರಂಗಕ್ಕೆ ಬರವು ಬಹುತೇಕ ನಟಿಯರ ಪಾಡು ಇದಕ್ಕಿಂತ ಭಿನ್ನವಲ್ಲ. ನೇರವಾಗಿ ಲೈಂಗಿಕ ಬೇಡಿಕೆ ಇಡುತ್ತಾರೆ. ವಿರೋಧಿಸಿದರೆ ಸಿನಿಮಾದಿಂದ ಹೊರಹಾಕುತ್ತಾರೆ. ಅವಕಾಶ ನೀಡುವುದಿಲ್ಲ ಎಂದಿದ್ದಾರೆ.