Asianet Suvarna News Asianet Suvarna News
breaking news image

ಲಕ್ಷ್ಮೀ ನಿವಾಸದ ಜಾನ್ವಿ ರಿಯಲ್‌ ಲೈಫಲ್ಲಿ ಡ್ಯಾನ್ಸ್‌ ಮಾಡಿದ್ರೂ ಜಯಂತ್‌ಗೆ ಹೇಳ್ತೀವಿ ಅನ್ನೋದಾ ಈ ಪ್ಯಾನ್ಸ್‌!

ಲಕ್ಷ್ಮೀ ನಿವಾಸದ ಜಾನ್ವಿ ಪಾತ್ರದ ಮೂಲಕ ಮತ್ತೆ ಫೇಮಸ್ ಆಗಿರೋ ನಾಯಕಿ ಚಂದನಾ. ಈಕೆಯ ಡ್ಯಾನ್ಸ್‌ ವೀಡಿಯೋ ಹಾಕಿದ್ರೆ ಸೈಕೋ ಜಯಂತ್‌ಗೆ ಹೇಳ್ತೀವಿ ಅನ್ನೋದಾ ಫ್ಯಾನ್ಸ್‌..

story about lakshmi nivas serial artist
Author
First Published May 5, 2024, 5:58 PM IST

ಲಕ್ಷ್ಮೀ ನಿವಾಸ ಸೀರಿಯಲ್‌ ಸಖತ್ ಫೇಮಸ್‌. ಟಿಆರ್‌ಪಿಯಲ್ಲಿ ಪ್ರತೀವಾರ ಒಂದು ಅಥವಾ ಎರಡನೇ ಸ್ಥಾನ ಇದಕ್ಕೆ ಗ್ಯಾರಂಟಿ. ಇದ್ರ ಹೀರೋಯಿನ್‌ ಜಾನ್ವಿ. ಬಹಳ ಮುಗ್ಧ ಹುಡುಗಿ. ಪ್ರತಿಭಾವಂತೆ. ಆದರೆ ಸದ್ಯ ಸೈಕೋ ಜಯಂತನನ್ನು ಮದುವೆ ಆಗಿ ಗಿಡುಗನ ಕೈಗೆ ಗುಬ್ಬಿ ಮರಿ ಸಿಕ್ಕಂಗಾಗಿದೆ ಈಕೆಯ ಲೈಫು. ಮೊನ್ನೆ ಒಂದು ಎಪಿಸೋಡ್‌ ಅಂತೂ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಮೊದಲೇ ಜನಪ್ರಿಯವಾಗಿದ್ದ ಸೈಕೋ ಜಯಂತ ಮತ್ತು ಜಾನ್ವಿ ಪಾತ್ರ ಈ ಎಪಿಸೋಡ್‌ ನಂತರ ಎಲ್ಲರ ಬಾಯಲ್ಲೂ ನಲಿದಾಡಿತು ಅನ್ನಬಹುದು. ಅಷ್ಟಕ್ಕೂ ಆಗಿದ್ದೇನು ಅಂದರೆ ಜಾನ್ವಿ ಮತ್ತು ಜಯಂತ್‌ ಇಬ್ಬರೂ ಜಯಂತ್‌ ಆಫೀಸ್‌ ಪಾರ್ಟಿಗೆ ಹೋಗಿದ್ದಾರೆ. ಅಲ್ಲಿ ಒಬ್ಬಾತ ಜಾನ್ವಿಯ ಪ್ರತಿಭೆಯನ್ನು ಹಾಡಿ ಹೊಗಳಿದ್ದಾನೆ. ತನ್ನ ಪತ್ನಿ ಬಗ್ಗೆ ಇನ್ನೊಬ್ಬ ಮಾತಾಡೋದು ನೋಡಿ ಜಯಂತನ ತಲೆ ಕೆಟ್ಟಿದೆ. ಅಲ್ಲಿದ್ದ ಎಲ್ಲರೂ ಜಾನ್ವಿ ಬಳಿ ಹಾಡು ಎಂದು ಒತ್ತಾಯ ಮಾಡಿದರೆ ಜಯಂತ ಹಾಡಬೇಡ ಎಂದಿದ್ದಾನೆ. ಆದರೆ ಜಾನ್ವಿ ಆ ಜೋಶ್‌ನಲ್ಲಿ ಹಾಡಿದ್ದಾಳೆ.

ಹಾಗೆ ಜಾನ್ವಿ ಹಾಡಿದ್ದು ಜಯಂತನಿಗೆ ಎಷ್ಟು ಕೆರಳಿದೆ ಎಂದರೆ ಮನೆಗೆ ಬಂದಮೇಲೆ ಅವಳಿಗೆ ಮರೆಯಲಾಗದ ಶಿಕ್ಷೆಯನ್ನೇ ಕೊಟ್ಟಿದ್ದಾನೆ. ರಾತ್ರಿ ಸುಸ್ತಾಗಿ ಮಲಗಿದವಳನ್ನು ಎಬ್ಬಿಸಿ ಹಾಡು ಹಾಡುವಂತೆ ಹೇಳಿದ್ದಾನೆ. ಆಕೆಯನ್ನು ಬಲವಂತ ಮಾಡಿ ಹಾಡಿಸಿದ್ದಾನೆ. ಶುರು ಶುರುವಲ್ಲಿ ಗಂಡ ಆಸೆಯಿಂದ ಕೇಳ್ತಿದ್ದಾನೆ ಎಂದು ಹಾಡಿದ ಅವಳಿಗೆ ಅವನು ರಾತ್ರಿ ಇಡೀ ಹಾಡಿಸಿದಾಗ ಭಯ, ಆತಂಕ, ನೋವು ಎಲ್ಲ ಆಗಿದೆ. ಮರುದಿನ ಧ್ವನಿಯೂ ಬಿದ್ದು ಹೋಗಿದೆ. ಆ ರಾತ್ರಿ ಅವಳಿಗೆ ದುಃಸ್ವಪ್ನದಂತೆ ಭಾಸವಾಗಿದೆ. ಈ ಸೈಕೋನ ಅವತಾರ ನೋಡಿ ವೀಕ್ಷಕರೂ ಬೆಚ್ಚಿಬಿದ್ದಿದ್ದಾರೆ.

 ಡೈರೆಕ್ಟರ್​ಕ್ಕಿಂತ ಮೊದ್ಲೇ ನಾವು ಇದನ್ನೇ ಹೇಳಿದ್ದು ಬಿಡಿ ಅಂತಿರೋದ್ಯಾಕೆ ಫ್ಯಾನ್ಸ್​?

ಈ ಸೀನ್‌ ವೀಕ್ಷಕರ ಮನಸ್ಸಲ್ಲಿ ಯಾವ ಲೆವೆಲ್‌ಗೆ ಕೂತು ಬಿಟ್ಟಿದೆ ಅಂದರೆ ಜಾನ್ವಿ ಪಾತ್ರ ನಿರ್ವಹಿಸಿರುವ ಚಂದನಾ ಅನಂತ ಕೃಷ್ಣ ಇತ್ತೀಚೆಗೆ ಒಂದು ವೀಡಿಯೋ ಹಾಕಿದ್ರು. ವಿಶ್ವ ನೃತ್ಯ ದಿನಕ್ಕೆ ತಾನು ಭರತನಾಟ್ಯ ಮಾಡಿರುವ ಒಂದು ವೀಡಿಯೋವನ್ನು ಇನ್‌ಸ್ಟಾದಲ್ಲಿ ಅಪ್‌ಲೋಡ್‌ ಮಾಡಿದ್ದರು. ಅದನ್ನು ನೋಡಿದ ವೀಕ್ಷಕರು ಅವರನ್ನು ಗೋಳು ಹೊಯ್ಕೊಂಡಿದ್ದಾರೆ. 'ಹಾಡು ಹಾಡಿದ್ದಕ್ಕೇ ಜಯಂತ ರಾತ್ರಿಯೆಲ್ಲ ಹಾಡ್ಸಿದ್ದಾನೆ, ಇನ್ನು ಹೀಗೆ ಡ್ಯಾನ್ಸ್‌ ಮಾಡಿದ್ರು ನೋಡಿದ್ರೆ ರಾತ್ರಿ ಇಡೀ ಡ್ಯಾನ್ಸ್ ಮಾಡಿಸ್ತಾನೆ, ನೋಡ್ತಿರಿ' ಅಂತ ಕಾಲೆಳೆದಿದ್ದಾರೆ. ಕೆಲವರು, 'ಡ್ಯಾನ್ಸ್‌ ಮಾಡ್ತೀರಾ, ಇರಿ, ಸೈಕೋ (psycho) ಜಯಂತಂಗೆ ಹೇಳ್ತೀವಿ' ಅಂದಿದ್ದಾರೆ.

ಈ ವೀಡಿಯೋದಲ್ಲಿರುವ ಚಂದನಾ ಅವರ ಡ್ಯಾನ್ಸ್‌ ಬಗ್ಗೆ ಮೆಚ್ಚುಗೆ ಸೂಚಿಸುತ್ತಲೆ ಸೀರಿಯಲ್‌ನಲ್ಲಿ ಅವರು ಮಾಡಿರುವ ಪಾತ್ರ ಯಾವ ರೇಂಜ್‌ಗೆ ತಮ್ಮನ್ನು ಆವರಿಸಿದೆ ಅನ್ನೋದನ್ನು ಕಾಮೆಂಟ್ಸ್‌ (comments) ಮೂಲಕ ಹರಿಬಿಟ್ಟಿದ್ದಾರೆ. ಅಂದಹಾಗೆ ಇದರಲ್ಲಿ ಸೈಕೋ ಜಯಂತನಾಗಿ ನಟಿಸಿದ್ದು ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆ ನಟ ದೀಪಕ್‌ ಸುಬ್ರಹ್ಮಣ್ಯ. 'ಲಕ್ಷ್ಮೀ ನಿವಾಸ' ಸೀರಿಯಲ್‌ನಲ್ಲಿ ಜಾನ್ವಿ ಹಾಗೂ ಜಯಂತ ಜೋಡಿಯನ್ನು ಜನ ಬೈಕೊಂಡೇ ಹೇಗೆ ಹಾರ್ಟಿಗೆ ತಗೊಂಡಿದ್ದಾರೆ ಎಂಬುದಕ್ಕೆ ಈ ಇನ್ಸಿಂಡೆಂಟ್‌ಗಿಂತ ಸಾಕ್ಷಿ ಬೇಕಾ?

ಬೇರೆ ಬೇರೆ ಸೀರಿಯಲ್ಲಲ್ಲಿದ್ದರೂ ದರ್ಶಕ್ -ಶಿಲ್ಪಾ ಮೀಟ್ ಆಗಿದ್ದು ಪ್ರಶಸ್ತಿ ಸಮಾರಂಭದಲ್ಲಿ! ಈಗ ಪೋಷಕರಾಗೋ ಸಂಭ್ರಮದಲ್ಲಿ

ಚಂದನಾ ಅನಂತಕೃಷ್ಣ ಬಹಳ ಒಳ್ಳೆಯ ಡ್ಯಾನ್ಸರ್‌. ಈಕೆ ಬಿಗ್‌ಬಾಸ್‌ನಲ್ಲೂ ಭಾಗವಹಿಸಿದ್ದರು. ಅದೇ ರೀತಿ ಈ ಹಿಂದೆ 'ಹೂಮಳೆ' ಅನ್ನೋ ಸೀರಿಯಲ್ಲಿನಲ್ಲಿ (serial) ಗರ್ಭಿಣಿಯ ಪಾತ್ರದಲ್ಲಿ ನಟಿಸಿದ್ದರು. ವರುನಿಧಿ ಪರಿಣಯಂ ಅನ್ನೋದು ಈಕೆಯ ನಟನೆಯ ಜನಪ್ರಿಯ ತೆಲುಗು ಸೀರಿಯಲ್‌. ಮೂಲತಃ ತುಮಕೂರಿನವರಾದ ಈಕೆ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios