ಸೆಕ್ಸ್ ದಂಧೆ ಆರೋಪ ನಟಿಯ ಜೀವನದಲ್ಲಿ ಎಲ್ಲವನ್ನೂ ಬದಲಾಯಿಸಿತು!
ಪ್ರಸ್ತುತ ಸಿನಿಮಾಗಳಿಂದ ದೂರ ಉಳಿದಿರುವ ದೀಪ್ತಿ ನವಲ್ (Deepti Naval)ಅವರಿಗೆ 70 ವರ್ಷ ತುಂಬಿದೆ. ಅವರು 3 ಫೆಬ್ರವರಿ 1952 ರಂದು ಅಮೃತಸರದಲ್ಲಿ(Punjab) ಜನಿಸಿದ ದೀಪ್ತಿ ಕಮರ್ಷಿಯಲ್ ಚಿತ್ರಗಳು ಹಾಗೂ ಕಲಾತ್ಮಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಂದಹಾಗೆ, ನೋಡಿದರೆ ಬಾಲಿವುಡ್(Bollywood) ನಲ್ಲಿ ಕಲಾತ್ಮಕ ಚಿತ್ರಗಳ ನಾಯಕಿಯಾಗಿ ಛಾಪು ಮೂಡಿಸಿದ್ದರು. ಅವರು ಉತ್ತಮ ನಟಿ ಮಾತ್ರವಲ್ಲದೆ, ಅವರು ಉತ್ತಮ ಗೀತರಚನೆಕಾರರು, ಚಿತ್ರಕಾರರು ಮತ್ತು ಛಾಯಾಗ್ರಾಹಕರೂ ಹೌದು. ಅಂದಹಾಗೆ, ಅವರ ಜೀವನದಲ್ಲಿ ಒಂದು ಕೊಳಕು ಆರೋಪದಿಂದಾಗಿ ಎಲ್ಲವೂ ಮುರಿದು ಬಿದ್ದ ಸಮಯ ಬಂದಿತು. ದೀಪ್ತಿ ಜೀವನಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಕೆಳಗೆ ಓದಿ
ಬಾಲ್ಯದಿಂದಲೂ ದೀಪ್ತಿಗೆ ನಟನೆಯ ಕನಸು ಇತ್ತು. ಅದರ ಜೊತೆ ಅವರ ಅನೇಕ ಚಿತ್ರಕಲೆಯಲ್ಲಿಯೂ ಆಸಕ್ತಿ ಇತ್ತು. ಅವರು 1978 ರ ಜುನೂನ್ ಸಿನಿಮಾ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.ಈ ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನೂ ಗಳಿಸಿತು. ಇದಾದ ನಂತರ ದೀಪ್ತಿ ಹಿಂದಿ ಚಿತ್ರರಂಗದಲ್ಲಿ 1981 ರ ಚಶ್ಮೆ ಬದ್ದೂರ್ ಚಿತ್ರದಿಂದ ವಿಭಿನ್ನವಾದ ಗುರುತನ್ನು ಪಡೆದರು.
ದೀಪ್ತಿ ನವಲ್ ತಮ್ಮ ಸರಳತೆಯಿಂದ ಇಂಡಸ್ಟ್ರಿಯಲ್ಲಿ ಫೇಮಸ್ ಆಗಿದ್ದವರು. ಅವರು ಯಾವಾಗಲೂ ತಮ್ಮ ಜೀವನಶೈಲಿ ತುಂಬಾ ಸಿಂಪಲ್ ಆಗಿ ಇಟ್ಟುಕೊಂಡಿದ್ದರು. ಆದರೆ ಅವರ ಜೀವನದಲ್ಲಿ ಒಂದು ಘೋರವಾದ ಆರೋಪ ಬಂದಿತು.
ವಾಸ್ತವವಾಗಿ, ಜನರಿಗೆ ಅಪಾರ್ಟ್ಮೆಂಟ್ ಖರೀದಿಸಲು ಧೈರ್ಯವಿಲ್ಲದಿದ್ದಾಗ ನಾನು ಫ್ಲಾಟ್ ತೆಗೆದುಕೊಂಡಿದ್ದೇನೆ. ನಾನು ಅಲ್ಲಿ ಅನೇಕ ಪಾರ್ಟಿಗಳನ್ನು ನಡೆಸಿದ್ದೆ ಮತ್ತು ಪತ್ರಕರ್ತರು ಆಗಾಗ್ಗೆ ಭೇಟಿ ನೀಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆ ಬಿಲ್ಡಿಂಗ್‌ನ ಜನರು ನಾನು ಸೆಕ್ಸ್ ರಾಕೆಟ್ ನಡೆಸುತ್ತಿದ್ದೇನೆ ಎಂಬ ಅರೋಪ ಮಾಡಿದರು' ಎಂದು ಸಂದರ್ಶನವೊಂದರಲ್ಲಿ, ದೀಪ್ತಿ ಹೇಳಿದ್ದರು.
ನನ್ನ ಏಕೈಕ ತಪ್ಪು ಎಂದರೆ ನಾನು ಕಟ್ಟಡದ ಜನರಿಗೆ ಹೊಂದಿಕೆಯಾಗಲಿಲ್ಲ ಎಂದು ನಟಿ ಹೇಳಿದ್ದರು. ಅಷ್ಟೇ ಅಲ್ಲ ಈ ಸುದ್ದಿ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ಇದರಿಂದ ಆಕೆಗೆ ತುಂಬಾ ಬೇಸರವಾಯಿತು.ತಮ್ಮ ಸಿನಿಮಾ ವೃತ್ತಿಜೀವನದ ಹೊರತಾಗಿ, ತಮ್ಮ ವೈಯಕ್ತಿಕ ಜೀವನದ ಕಾರಣದಿಂದಲೂ ಇವರು ಸುದ್ದಿಯಲ್ಲಿದ್ದರು.
ದೀಪ್ತಿ ಮತ್ತು ಫಾರೂಕ್ ಶೇಖ್ 80 ರ ದಶಕದಲ್ಲಿ ಚಶ್ಮೆ ಬದ್ದೂರ್, ಕಿಸಿ ಸೆ ನಾ ಕೆಹನಾ, ಸಾಥ್ ಸಾಥ್ ಮುಂತಾದ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಜೋಡಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು.ಇಬ್ಬರ ನಡುವೆ ವಿಶೇಷವಾದ ಬಾಂಧವ್ಯವಿದೆ ಎನ್ನಲಾಗಿತ್ತು. ಇಬ್ಬರ ಆಪ್ತತೆಯ ಕತೆಗಳೂ ಬೆಳಕಿಗೆ ಬಂದವು.
90 ರ ದಶಕದಲ್ಲಿ, ಅವರಿಗೆ ಸಾಕಷ್ಟು ಕೆಲಸವಿರಲಿಲ್ಲ. ಅವರು ಖಿನ್ನತೆಗೆ ಒಳಗಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಶುರು ಮಾಡಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ತನ್ನ ಮೂರು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ, ದೀಪ್ತಿ ಏಕ್ ಫಿರ್, ಅಂಕಹಿ, ಬವಂದರ್, ಲೀಲಾ, ಫಿರಾಕ್, ಹಮ್ ಪಾಂಚ್, ಕಥಾ, ಹಿಪ್ ಹಿಪ್ ಹುರ್ರೆ, ದಾಮುಲ್, ಮಿರ್ಚ್ ಮಸಾಲಾ, ಸೌದಾಗರ್, ಇಂಕಾರ್, ಬ್ಯಾಂಗ್ ಬ್ಯಾಗ್, ತೇವರ್ ಮುಂತಾದ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರು.
ಅವರು 1985 ರಲ್ಲಿ ಚಲನಚಿತ್ರ ನಿರ್ದೇಶಕ ಪ್ರಕಾಶ್ ಝಾ ಅವರನ್ನು ವಿವಾಹವಾದರು ಆದರೆ ಅವರು 2002 ರಲ್ಲಿ ವಿಚ್ಛೇದನ ಪಡೆದರು. ಪ್ರಕಾಶ್ ಝಾ ಅವರಿಂದ ವಿಚ್ಛೇದನದ ನಂತರ, ಖ್ಯಾತ ಶಾಸ್ತ್ರೀಯ ಗಾಯಕ ಪಂಡಿತ್ ಜಸ್ರಾಜ್ ಅವರ ಪುತ್ರ ವಿನೋದ್ ಪಂಡಿತ್ ದೀಪ್ತಿ ಅವರ ಜೀವನದಲ್ಲಿ ಬಂದರು. ಅವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತದೆ. ಆದರೆ ವಿನೋದ್ ಪಂಡಿತ್ ಮದುವೆಗೆ ಮುಂಚೆಯೇ ನಿಧನರಾದರು ಮತ್ತು ದೀಪ್ತಿ ಮತ್ತೊಮ್ಮೆ ಒಂಟಿಯಾಗಿದ್ದರು.