ಅಂದು ಬಾಲನಟರಾಗಿ ಮಿಂಚಿದ ಇವರು, ಇಂದು ಬಾಲಿವುಡ್ ಸ್ಟಾರ್ ನಟರಾಗಿ ಮೆರಿತಿದಾರೆ!
ಬಾಲಿವುಡ್ ನಲ್ಲಿ ಅದೆಷ್ಟೋ ಬಾಲನಟರು ಮಿಂಚಿದ್ದಾರೆ. ಹಿಂದೆ ಬಾಲನಟರಾಗಿ ಮಿಂಚಿದ ಕೆಲವರು ಇಂದು ಇಂಡಸ್ಟ್ರಿಯನ್ನೇ ಆಳುವ ಕಿಂಗ್ ಆಗಿದ್ದಾರೆ. ಬಾಲನಟರು ಈವಾಗ ಹೇಗಿದ್ದಾರೆ ನೋಡೋಣ.

ಹನ್ಸಿಕಾ ಮೋಟ್ವಾನಿ (Hansika Motwani): ಶಕಲಕ ಭೂಂ ಭೂಂ, ಕೊಯಿ ಮಿಲ್ ಗಯಾ ಮೊದಲಾದ ಸಿನಿಮಾಗಳಲ್ಲಿ ಬಾಲನಟಿಯಾಗಿ ಮೋಡಿ ಮಾಡಿದ್ದ ಹನ್ಸಿಕಾ ಮೋಟ್ವಾನಿ ಇದೀಗ ತಮಿಳು , ತೆಲುಗು ಚಿತ್ರರಂದಲ್ಲಿನ ಬಹುಬೇಡಿಕೆಯ ನಟಿಯಾಗಿದ್ದಾರೆ.
ಆಲಿಯಾ ಭಟ್ (Alia Bhatt): ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ಆಲಿಯಾ ಭಟ್ ಆರನೇ ವಯಸ್ಸಿನಲ್ಲಿ ಸಂಘರ್ಷ್ ಸಿನಿಮಾದ ಮೂಲಕ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ 2012 ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ಸಿನಿಮಾ ಮೂಲಕ ನಾಯಕಿ ಪಟ್ಟ ಪಡೆದರು.
ಶಾಹೀದ್ ಕಪೂರ್ (Shahid Kapoor): ಬಾಲ್ಯದಲ್ಲಿ ಐ ಯಾಮ್ ಕಾಂಪ್ಲೇನ್ ಬಾಯ್ ಎನ್ನುತಾ ಜಾಹೀರಾತಿನ ಮೂಲಕ ಮುಗುಳ್ನಗೆ ಮೀರಿದ ನಟ ಶಾಹೀದ್ ಕಪೂರ್. ಬಾಲಿವುಡ್ ನಲ್ಲಿ ಹಿಟ್ ಚಿತ್ರಗಳನ್ನು ನೀಡುತ್ತಾ, ಚಾಕಲೇಟ್ ಬಾಯ್ ಲುಕ್ ನಿಂದ ಇದೀಗ ಪವರ್ ಫುಲ್ ಲುಕ್ ಪಡೆದುಕೊಂಡಿದ್ದಾರೆ.
ಸಂಜಯ್ ದತ್ (Sanjay Dutt): ನೀವು ಸಂಜಯ್ ದತ್ ಅವರನ್ನು ಆಕ್ಷನ್ ಹೀರೋ ಮತ್ತು ಕಾಮಿಡಿ ಪಾತ್ರಗಳಲ್ಲಿ ಮಾತ್ರ ನೋಡಿರಬಹುದು. ಆದರೆ ಇವರು ಬಾಲ ನಟರಾಗಿ ರೇಶ್ಮಾ ಔರ್ ಹೀರಾ ಸಿನಿಮಾದಲ್ಲಿ ತಮ್ಮ ತಂದೆಯ ಜೊತೆಗೆ ತೆರೆ ಹಂಚಿಕೊಂಡಿದ್ದರು.
ಸನಾ ಸಯ್ಯದ್ (Sana Saeed): ಕುಚ್ ಕುಚ್ ಹೋತಾ ಹೆ ಸಿನಿಮಾದಲ್ಲಿ ಛೋಟಿ ಅಂಜಲಿಯ ಪಾತ್ರ ಸದಾ ಕಾಲ ನೆನಪಿಟ್ಟುಕೊಳ್ಳುವಂತಹ ಪಾತ್ರ. ಈಗ ಸ್ಟೈಲಿಶ್ ಹುಡುಗಿಯಾಗಿರುವ ಸನಾ ಸಯ್ಯದ್ ಸ್ಟುಡೆಂಟ್ ಆಫ್ ದಿ ಇಯರ್ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಹಲವಾರು ರಿಯಾಲಿಟಿ ಶೋಗಳ ಮೂಲಕವೂ ಸದ್ದು ಮಾಡುತ್ತಿದ್ದಾರೆ.
ಎಹಸಾಸ್ ಚನ್ನ (Ahsaas Channa): ವಾಸ್ತು ಶಾಸ್ತ್ರ, ಫೂಂಕ್, ಮೈ ಫ್ರೆಂಡ್ ಗಣೇಶ, ಕಭಿ ಅಲ್ವಿದ ನಾ ಕೆಹ್ನಾ ಸಿನಿಮಾಗಳಲ್ಲಿ ಪುಟಾಣಿ ಮುದ್ದಾದ ಹುಡುಗನಾಗಿ ನಟಿಸಿ, ತನ್ನ ಪಾತ್ರದ ಮೂಲಕ ಮೋಡಿ ಮಾಡಿದ ನಟಿ ಎಹಸಾಸ್ ಚನ್ನ. ಸದ್ಯ ನಟಿ ಸಿನಿಮಾ, ವೆಬ್ ಸಿರೀಸ್, ಶಾರ್ಟ್ಸ್ ಸಿನಿಮಾಗಳ ಮೂಲಕ ಮಿಂಚುತ್ತಿದ್ದಾರೆ.
ಹೃತಿಕ್ ರೋಷನ್ (Hrithik Roshan): ಹೃತಿಕ್ ರೋಷನ್ ಮೊದಲ ಸಿನಿಮಾ ಎಂದರೆ ನೆನಪಾಗೋದು ಕಹೋ ನಾ ಪ್ಯಾರ್ ಹೇ ಅಲ್ವಾ? ಆದರೆ ಈ ಸಿನಿಮಾಗೂ ಮುನ್ನ ಹೃತಿಕ್ ಬಾಲ ನಟರಾಗಿ ಆರನೇ ವಯಸ್ಸಿನಲ್ಲಿ ಆಶಾ ಚಿತ್ರದಲ್ಲಿ, ನಂತರ ಭಗ್ವಾನ್ ದಾದ ಸೀನಿಮಾದಲ್ಲಿ ರಜನಿ ಕಾಂತ್ ಜೊತೆ ನಟಿಸಿದ್ದರು.
ಆಮೀರ್ ಖಾನ್ (Aamir Khan): ಬಾಲಿವುಡ್ ನಲ್ಲಿ ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತರಾಗಿರುವ ಆಮೀರ್ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟದ್ದು 8ನೇ ವಯಸ್ಸಿನಲ್ಲಿ ಯಾದೋ ಕಿ ಭಾರಾತ್ ಸಿನಿಮಾದ ಮೂಲಕ. ಸದ್ಯ ಬಾಲಿವುಡ್ ಸಿನಿರಂಗವನ್ನೇ ಆಳುತ್ತಿದ್ದಾರೆ.
ಊರ್ಮಿಳಾ ಮಾತೊಂಡ್ಕರ್ (Urmila Matondkar): ತನ್ನ ನಟನೆ, ಗ್ಲಾಮರ್ ಮೂಲಕ ಹಿಂದಿ, ತಮಿಳು, ತೆಲುಗು, ಮಲಯಾಲಂ, ಮರಾಠಿ ಸಿನಿಮಾಗಳಲ್ಲಿ ಬಹು ದೊಡ್ಡ ಹೆಸರು ಮಾಡಿದ ನಟಿ ಊರ್ಮಿಳಾ ಮಾತೊಂಡ್ಕರ್ ಬಾಲನಟಿಯಾಗಿ ಮೂರನೇ ವಯಸ್ಸಿನಲ್ಲಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು. ಮಾಸೂಮ್, ಕರ್ಮ್, ಡಕಾಯಿತ್ ಹೀಗೆ ಹಲವಾರು ಸಿನಿಮಾಗಳಲ್ಲಿ ಇವರು ಬಾಲನಟಿಯಾಗಿ ನಟಿಸಿದ್ದಾರೆ.
ದರ್ಶೀಲ್ ಸಫಾರಿ (Darsheel Safary): ತಾರೆ ಜಮೀನ್ ಪರ್ ಚಿತ್ರದ ಇಶಾನ್ ಅವಸ್ತಿ ಕ್ಯಾರೆಕ್ಟರನ್ನು ಮರೆಯೋದಕ್ಕೆ ಹೇಗೆ ಸಾಧ್ಯವಾಗುತ್ತೆ ಅಲ್ವಾ? ತನ್ನ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಕಣ್ಣಂಚು ಒದ್ದೆ ಮಾಡಿದ್ದ ನಟ ದರ್ಶೀಲ್ ಸಫಾರಿಗೆ ಈಗ 23 ವರ್ಷ. ಸದ್ಯ ಶಾರ್ಟ್ ಫಿಲಂ, ಸೀರೀಸ್ ಗಳಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.