ಶಾರುಖ್ ಖಾನ್ ನಿಂದ ಅಮಿತಾಬ್ ಬಚ್ಚನ್ ವರೆಗೆ: ಸಾವಿನ ವದಂತಿಗೆ ಒಳಗಾದ ಸೆಲೆಬ್ರಿಟಿಗಳು
ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಸುಳ್ಳು ಸಾವಿನ ವದಂತಿಗಳನ್ನು ಎದುರಿಸಿದ್ದಾರೆ, ಈ ವದಂತಿಗಳು ನಿರಾಧಾರವೆಂದು ಸಾಬೀತಾಗುವ ಮೊದಲು ಅಭಿಮಾನಿಗಳಲ್ಲಿ ವ್ಯಾಪಕ ಕಳವಳ ಉಂಟುಮಾಡಿದವು.
ಲತಾ ಮಂಗೇಶ್ಕರ್ ಅವರಿಂದ ಪರೇಶ್ ರಾವಲ್ ವರೆಗೆ, ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಸುಳ್ಳು ಸಾವಿನ ವರದಿಗಳನ್ನು ಎದುರಿಸಿದ್ದಾರೆ. ಈ ಸಾವಿನ ವದಂತಿಗಳು ನಿರಾಧಾರವೆಂದು ಸಾಬೀತಾಗುವ ಮೊದಲು ಅಭಿಮಾನಿಗಳಲ್ಲಿ ವ್ಯಾಪಕ ಕಳವಳವನ್ನು ಉಂಟು ಮಾಡಿದವು,
ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಾವಿನ ವದಂತಿಗಳು ಅವರ ಅಭಿಮಾನಿಗಳನ್ನು ಆತಂಕಕ್ಕೀಡು ಮಾಡಿದವು. ಅವರ PR ತಂಡವು ಪರಿಸ್ಥಿತಿಯನ್ನು ಅರಿತು ಶೀಘ್ರವಾಗಿ ರಜನಿಕಾಂತ್ ಜೀವಂತವಾಗಿದ್ದಾರೆ, ಉತ್ತಮ ಆರೋಗ್ಯದಿಂದ ಇದ್ದಾರೆ ಮತ್ತು USA ನಲ್ಲಿ ರಜೆಯಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿತು.
ಅಮಿತಾಬ್ ಬಚ್ಚನ್
ಯುಎಎಸ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಅಮಿತಾಬ್ ಬಚ್ಚನ್ ಅವರು ಸಾವಿನಪ್ಪಿದ್ದಾರೆ ಎಂದು ಸುದ್ದಿಯಾಗಿತ್ತು. ಇದು ಸಾಕಷ್ಟು ಭೀತಿ ಹುಟ್ಟು ಹಾಕಿದವು. ಈ ಸುಳ್ಳು ಸುದ್ದಿಗಳಿಂದ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಬಳಿಕ ಇದೊಂದು ಫೇಕ್ ಸುದ್ದಿ ಎಂಬುದು ತಿಳಿಯಿತು.
ಲತಾ ಮಂಗೇಶ್ಕರ್
2012 ರಲ್ಲಿ ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವದಂತಿಗಳು ಹರಿದಾಡಿದವು. ಸುಳ್ಳು ಸುದ್ದಿಗಳು ನಿರಾಧಾರವಾದ ಊಹಾಪೋಹಗಳೆಂದು ಸಾಬೀತಾಗುವ ಮೊದಲು ವ್ಯಾಪಕ ಕಳವಳವನ್ನು ಉಂಟುಮಾಡಿದವು. 2022ರಲ್ಲಿ ಮುಂಬೈನಲ್ಲಿ ಲತಾ ಮಂಗೇಶ್ಕರ್ ನಿಧನರಾದರು.
ಮಾಧುರಿ ದೀಕ್ಷಿತ್
ಮಾಧುರಿ ದೀಕ್ಷಿತ್ ಅವರ ಸಾವಿನ ವದಂತಿಗಳು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದವು. ನಟಿ ಶೀಘ್ರವೇ ಪ್ರತಿಕ್ರಿಯಿಸಿ ನಾನು ಜೀವಂತವಿದ್ದೇನೆ. ಚೆನ್ನಾಗಿ ಮತ್ತು ಅತ್ಯುತ್ತಮ ಆರೋಗ್ಯದಲ್ಲಿದ್ದೇನೆ ಎಂದು ಎಲ್ಲರಿಗೂ ತಿಳಿಸಿದರು.
ಪರೇಶ್ ರಾವಲ್
ಮೇ 14, 2021 ರಂದು, ಪರೇಶ್ ರಾವಲ್ ನಿಧನರಾಗಿದ್ದಾರೆ ಎಂದು ಸುಳ್ಳು ವರದಿಯಾಗಿತ್ತು. ಅವರು ವದಂತಿಗಳನ್ನು ಶೀಘ್ರವಾಗಿ ನಿರಾಕರಿಸಿದರು ಮತ್ತು ಯೋಗಕ್ಷೇಮದ ಬಗ್ಗೆ ತಮ್ಮ ಅಭಿಮಾನಿಗಳಿಗೆ ತಿಳಿಸಿದರು.
ಬಾದ್ ಶಾ
ನಟ ಶಾರುಖ್ ಖಾನ್ ಅವರು ಮಗಳು ಸುಹಾನಾ ಅವರ ಹುಟ್ಟುಹಬ್ಬದ ನಂತರ ವಿಮಾನ ದುರ್ಘಟನೆಯಲ್ಲಿ ಮೃತಪಟ್ಟರು ಎನ್ನು ಸುಳ್ಳು ವರದಿ ಸೇರಿದಂತೆ ಹಲವಾರು ಬಾರಿ ಸಾವಿನ ವದಂತಿಗಳನ್ನು ಎದುರಿಸಿದ್ದಾರೆ. ಈ ವದಂತಿಗಳು ಸುಳ್ಳು ಎಂದು ದೃಢೀಕರಿಸುವ ಮೊದಲು ಅಭಿಮಾನಿಗಳಲ್ಲಿ ಆತಂಕ ಎದುರಾಯ್ತು.