ಮುತ್ತಿನ ಸೀರೆಯಲ್ಲಿ ಮತ್ತೇರಿಸಿದ ಶ್ರೀದೇವಿ ಪುತ್ರಿ: ಏನಮ್ಮಾ ಜಾನ್ವಿ ನಿನ್ನ ಹಾಟ್ನೆಸ್ಸೂ ಎಂದ ನೆಟ್ಟಿಗರು!
ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ಗೆ ಬಾಲಿವುಡ್ನಲ್ಲಿ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಹಾಗಂತ ಅವರಿಗೆ ಅವಕಾಶಗಳ ಕೊರತೆಯೇನು ಇಲ್ಲ. ಸದ್ಯ ತೆಲುಗಿನಲ್ಲಿ ಬ್ಯುಸಿಯಿರುವ ಜಾನ್ವಿ ಇದೀಗ ಪರ್ಲ್ ಸೀರೆಯಲ್ಲಿ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ.
ಜಾನ್ವಿ ಕಪೂರ್ ತಮ್ಮ ಫ್ಯಾಷನ್ಸೆನ್ಸ್ನಿಂದ ತಮ್ಮ ಅಭಿಮಾನಿಗಳನ್ನು ಯಾವಾಗಲೂ ಆಶ್ಚರ್ಯಕ್ಕೆ ನೂಕುತ್ತಾರೆ. ಯಾವುದೇ ಬಟ್ಟೆ ತೊಟ್ಟರೂ ಕೂಡ ಆಕೆಯ ಅಂದಕ್ಕೆ ಒಪ್ಪುತ್ತದೆ. ಸೀರೆಗಳು, ಬಾಡಿಕಾನ್ ಗೌನ್ಗಳು, ಗೌನ್, ಸ್ಕರ್ಟ್ ಯಾವುದೇ ಇರಲಿ ಆಕೆಯ ಅಂದಕ್ಕೆ ಮೆರುಗು ನೀಡುತ್ತವೆ.
ಬಾಲಿವುಡ್ ಬ್ಯೂಟಿ, ಜೂನಿಯರ್ ಎನ್ಟಿಆರ್ ಸಿನಿಮಾದ ನಾಯಕಿ ಜಾನ್ವಿ ಕಪೂರ್ ಇದೀಗ ಸಖತ್ ಸೀರೆಯಲ್ಲೂ ಬೋಲ್ಡ್ ಆಗಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾವನ್ನು ಶ್ರೀದೇವಿ ಪುತ್ರಿ ಶೇಕ್ ಮಾಡಿದ್ದಾರೆ.
ದೇವಸ್ಥಾನಗಳಲ್ಲಿ ಸೀರೆ ಮತ್ತು ಲಂಗ ದಾವಣಿಯಲ್ಲಿ ಕಾಣಿಸಿಕೊಳ್ಳುವಾಗ ನಟಿ ಜಾನ್ವಿ ಕಪೂರ್, ಫ್ಯಾಷನ್ ಸೆನ್ಸ್ಗೆ ಬಂದರೆ ಆಕೆಯನ್ನು ಯಾರು ಹಿಂದೆ ತಳ್ಳಲಾರರು. ಸದ್ಯ ವೈಟ್ ಕಲರ್ ಪರ್ಲ್ ಸೀರೆಯುಟ್ಟು ಜಾನ್ವಿ ಮಿಂಚುತ್ತಿದ್ದಾರೆ.
ಸದ್ಯ ಜಾನ್ವಿ ಕಪೂರ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಫೋಟೋ ನೋಡಿದ ಫ್ಯಾನ್ಸ್ ಲೈಕ್ಗಳ ಸುರಿಮಳೆಗೈದಿದ್ದಾರೆ. ಅನೇಕರು ಹಾಟ್ ಬ್ಯೂಟಿ ಎಂದು ಕಮೆಂಟ್ ಮಾಡ್ತಿದ್ದಾರೆ.
ಪ್ಯಾನ್ ಇಂಡಿಯಾ ಸ್ಟಾರ್ ಜೂನಿಯರ್ ಎನ್ಟಿಆರ್ಗೆ ಜಾನ್ವಿ ಕಪೂರ್ ಹೀರೋಯಿನ್ ಆಗಿದ್ದು, ದೇವರ ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗಿದೆ. ದೇವರ ಸಿನಿಮಾದಲ್ಲಿ ನಟಿಯ ಫಸ್ಟ್ ಲುಕ್ ರಿಲೀಸ್ ಆಗಿದೆ. ಜಾನ್ವಿ ತಂಗಂ ಎನ್ನುವ ಪಾತ್ರದಲ್ಲಿ ನಟಿಸಲಿದ್ದಾರೆ.
ಜಾನ್ವಿ ಕಪೂರ್ ಅವರ ತಂದೆ ಬೋನಿ ಕಪೂರ್ ಅವರು ಬಾಲಿವುಡ್ನಲ್ಲಿ ಖ್ಯಾತ ನಿರ್ಮಾಪಕ. ಬಾಲಿವುಡ್ ಟಾಪ್ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ಬೋನಿ ಕಪೂರ್ ಅವರಿಗಿದೆ. ಈಗಲೂ ಅವರು ಕಾಲಿವುಡ್ ಸಿನಿಮಾಗಳನ್ನು ನಿರ್ಮಿಸುತ್ತಾರೆ.
ಜಾನ್ವಿ ಸಾಮಾನ್ಯವಾಗಿ ಹಿಂದಿ ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ತೆಲುಗಿನಲ್ಲಿ ನಟಿಸಲು ಶ್ರೀದೇವಿ ಮಗಳು 5 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.