ಪತಿ ಅಗಲಿ ತಿಂಗಳಾಗೋ ಮುನ್ನ ಆಸ್ಪತ್ರೆ ಸೇರಿದ ಹಿರಿಯ ನಟಿ
- ದಿವಂಗತ ನಟ ದಿಲೀಪ್ ಕುಮಾರ್ ಪತ್ನಿಗೆ ಅನಾರೋಗ್ಯ
- ಪತಿ ಅಗಲಿ ತಿಂಗಳಾಗೋ ಮುನ್ನ ಆಸ್ಪತ್ರೆ ಸೇರಿದ ನಟಿ
ಇತ್ತೀಚೆಗೆ ತನ್ನ ಪತಿ ಹಿರಿಯ ನಟ ದಿಲೀಪ್ ಕುಮಾರ್ ಅವರನ್ನು ಕಳೆದುಕೊಂಡ ಬಾಲಿವುಡ್ ಹಿರಿಯ ನಟಿ ಸೈರಾ ಬಾನು ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿಯನ್ನು ಆಗಸ್ಟ್ 29 ರಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರನ್ನು ಬುಧವಾರ (ಸೆಪ್ಟೆಂಬರ್ 1) ರಂದು ಮುಂಬೈನ ಹಿಂದುಜಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ಶಿಫ್ಟ್ ಮಾಡಲಾಗಿದೆ.
ನಟಿ ತನ್ನ ಆರೋಗ್ಯ ಹಠಾತ್ ಹದಗೆಡುವ ಮುನ್ನ ಕಳೆದ ಮೂರು ದಿನಗಳಿಂದ ರಕ್ತದೊತ್ತಡ ಸಮಸ್ಯೆಗಳನ್ನು ಅನುಭವಿಸಿದ್ದರು. ಸೈರಾ ಬಾನು ಅವರ ಪತಿ ದಿಲೀಪ್ ಕುಮಾರ್ ಜುಲೈ 2, 2021 ರಂದು ನಿಧನರಾದರು.
ವಯೋ ಸಹಜ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳಿಂದಾಗಿ ನಟ 89 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ದಿಲೀಪ್ ಕುಮಾರ್ ಸಾವಿಗೆ ಇಡೀ ದೇಶವೇ ಸಂತಾಪ ಸೂಚಿಸಿತ್ತು.
ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ನಟನ ನಿಧನಕ್ಕೆ ತಮ್ಮ ದುಃಖವನ್ನು ವ್ಯಕ್ತಪಡಿಸಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಸೋಷಿಯಲ್ ಮಿಡಿಯಾದಲ್ಲಿ ಸಂತಾಪ ಸಂದೇಶಗಳು ಮತ್ತು ಪೋಸ್ಟ್‌ಗಳು ಹರಿದುಬಂದಿತ್ತು
ಅನೇಕರು ನಟನ ಅಗಲಿಕೆಯನ್ನು 'ಒಂದು ಯುಗದ ಅಂತ್ಯ' ಎಂದು ಕರೆದಿದ್ದಾರೆ. ಸೈರಾ ಬಾನು 1961 ರಲ್ಲಿ ದಿಲೀಪ್ ಕುಮಾರ್ ಜೊತೆ ಜಂಗ್ಲೀ ಸಿನಿಮಾದಲ್ಲಿ ನಟಿಸಿದ್ದರು.