ಮಲೈಕಾ ಯೋಗ ಕಂಡು ಮನೆಯೊಳಗಿನ ಸ್ನೇಹಿತ ದಿಗ್ಭ್ರಾಂತ!
ಮುಂಬೈ(ಆ. 15) ಬಾಲಿವುಡ್ ಸದಾಚೆಲುವೆ ಮಲೈಕಾ ಅರೋರಾ ಸೋಶಿಯಲ್ ಮೀಡಿಯಾದಲ್ಲಿ ತನ್ನ ಸ್ನೇಹಿತರೊಂದಿಗೆ ಯೋಗ ಮಾಡುತ್ತಲೇ ಹಾಜರಾಗಿದ್ದಾರೆ. ಏನಿದು ಕತೆ ಅಂತೀರಾ?
ಸೋಶಿಯಲ್ ಮೀಡಿಯಾದಲ್ಲಿ ಮಲೈಕಾಗೆ ಮಿಲಿಯನ್ ಗಟ್ಟಲೆ ಫಾಲೋವರ್ಸ್ ಇದ್ದಾರೆ.
ಮಲೈಕಾ ಪುತ್ರ ಅರಾನ್ ಮತ್ತು ಪ್ರೀತಿಯ ಶ್ವಾನ ಕಾಸ್ಪರ್ ಜತೆ ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ.
ಕೊರೋನಾ ಕಾರಣಕ್ಕೆ ಸಕಲ ಮುಂಜಾಗೃತಾ ಕ್ರಮ ತೆಗೆದುಕೊಂಡಿದ್ದಾರೆ.
ಮಲೈಕಾ ಯೋಗ ಮಾಡುತ್ತಿರುವ ಸಂದರ್ಭವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಮನೆಯಲ್ಲಿ ಮಲೈಕಾ ಯೋಗ ಮಾಡುತ್ತಿದ್ದರೆ ಮುದ್ದು ಶ್ವಾನ ಕಾಸ್ಪರ್ ಕತ್ತು ತಿರುಗಿಸಿ ನೋಡುತ್ತಿದೆ.
ಮಲೈಕಾ ಈ ಕ್ಷಣಕ್ಕೆ ಒಂದು ಟೈಟಲ್ ಕೊಟ್ಟು ಹಂಚಿಕೊಂಡಿದ್ದಾರೆ.
ಕಾಸ್ಪರ್ ನನ್ನ ನೋಡಿ ಹೇಳುತ್ತೆ,.. ಹೇಯ್.. ಯೋಗ ರಿಲಾಕ್ಸ್ ನೀಡುತ್ತದೆ ಎಂದು ಹೇಳಿದ್ದೆ ಆದರೆ ಹೀಗೇಕೆ ಮಾಡಿದ್ದೀಯಾ? ಎಂದು ನನ್ನ ನೋಡಿ ಪ್ರಶ್ನೆ ಮಾಡುತ್ತಿದೆ ಎಂದಿದ್ದಾರೆ.
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಡೇಟಿಂಗ್ ನಲ್ಲಿ ಇದ್ದರು ಎಂಬ ಗಾಸಿಪ್ ಹರಿದಾಡುತ್ತಲೆ ಇದೆ.