- Home
- Entertainment
- Cine World
- Hina Khan: ಕ್ಯಾನ್ಸರ್ ಬಂದ್ರೂ ಪ್ರಿಯತಮೆಯನ್ನು ಬಿಡ್ಲಿಲ್ಲ! 13 ವರ್ಷ ಪ್ರೀತಿಸಿ ಮದುವೆಯಾದ ಖ್ಯಾತ ಕಿರುತೆರೆ ನಟಿ!
Hina Khan: ಕ್ಯಾನ್ಸರ್ ಬಂದ್ರೂ ಪ್ರಿಯತಮೆಯನ್ನು ಬಿಡ್ಲಿಲ್ಲ! 13 ವರ್ಷ ಪ್ರೀತಿಸಿ ಮದುವೆಯಾದ ಖ್ಯಾತ ಕಿರುತೆರೆ ನಟಿ!
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹೀನಾ ಖಾನ್ ತಮ್ಮ ಗೆಳೆಯ ರಾಕಿ ಜೈಸ್ವಾಲ್‌ರನ್ನು ಮದುವೆಯಾಗಿದ್ದಾರೆ. 37 ವರ್ಷದ ಹೀನಾ ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮದುವೆಯ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

“ಎರಡು ಭಿನ್ನ ಲೋಕಗಳಿಂದ ಬಂದು ಪ್ರೀತಿಯ ವಿಶ್ವವನ್ನು ಸೃಷ್ಟಿಸಿದ್ದೇವೆ” ಎಂದು ನಟಿ ಹೀನಾ ಬರೆದಿದ್ದಾರೆ.
13 ವರ್ಷಗಳಿಂದ ಹೀನಾ ಖಾನ್, ರಾಕಿ ಅವರು ಪ್ರೀತಿ ಮಾಡುತ್ತಿದ್ದರು.
ʼಯೇ ರಿಶ್ತಾ ಕ್ಯಾ ಕೆಹಲಾತಾ ಹೈʼ ಧಾರಾವಾಹಿಯಲ್ಲಿ ಹೀನಾ ಖಾನ್ ಅವರು ನಟಿಯಾಗಿದ್ದರೆ, ರಾಕಿ ಅವರು ಸೂಪರ್‌ವೈಸರ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದರು.
ಆರಂಭದಲ್ಲಿ ಸ್ನೇಹಿತರಾಗಿದ್ದ ಈ ಜೋಡಿ ಆಮೇಲೆ ಪ್ರೀತಿಯಲ್ಲಿ ಬಿದ್ದಿತ್ತು.
ಹೀನಾ ಖಾನ್, ರಾಕಿ ಅವರು 2017ರಲ್ಲಿ ತಮ್ಮ ಪ್ರೀತಿಯನ್ನು ಜಗತ್ತಿನ ಎದುರು ಹೇಳಿಕೊಂಡಿತ್ತು.
ಹೀನಾ ಖಾನ್ ಅವರು ಈಗ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ರಾಕಿ ಅವರೇ ಇವರ ಆರೈಕೆ ಮಾಡಿದ್ದರು.
ಹೀನಾ ಖಾನ್ ಅವರು ಮದುವೆಯಲ್ಲಿ ಡಿಸೈನರ್ ಮನೀಷ್ ಮಲ್ಹೋತ್ರ ಅವರ ಡಿಸೈನರ್ ಬಟ್ಟೆಗಳನ್ನು ಧರಿಸಿದ್ದರು.
ಹೀನಾ ಖಾನ್ ಅವರ ಬಳೆಗಳು, ಹಾರ, ಕಾಲ್ಗೆಜ್ಜೆ ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

