ಶೂಟಿಂಗ್ ಸೆಟ್‌ಗೆ ಮೊದಲು ನಟಿಯರು ಬಂದು ಬಿಟ್ಟರೆ ಅಷ್ಟೇ.... ಛೀ ಕೊಳಕು ಮನಸ್ಥಿತಿ: ಅದಾ ಶರ್ಮಾ
ಬೋಲ್ಡ್ ನಟಿ ಅದಾ ಶರ್ಮಾ ಸಿನಿಮಾ ರಂಗದಲ್ಲಿ ಇರುವ ಕರಾಳ ಪದ್ಧತಿಯನ್ನು ರಿವೀಲ್ ಮಾಡಿದ್ದಾರೆ.
ಅದಾ ಶರ್ಮಾ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂಗಳಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗಾಗಿ 'ಒಳ್ಳೆಯ, ಕೆಟ್ಟ ಮತ್ತು ಕೊಳಕು' ಜನರನ್ನು ಎದುರಿಸುವ ನಾಯಕಿಯರ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚಿನ ಮಾಧ್ಯಮ ಸಂವಾದದಲ್ಲಿ, ಅದಾ ಶರ್ಮಾ ಅವರು ಫಿಲ್ಮ್ ಇಂಡಸ್ಟ್ರಿಯಲ್ಲಿ ಅದರಲ್ಲಿಯೂ ಬಾಲಿವುಡ್ನಲ್ಲಿ ಲಿಂಗ ತಾರತಮ್ಯವನ್ನು ಇಷ್ಟಪಡುವುದಿಲ್ಲ ಎಂದು ಬಹಿರಂಗಪಡಿಸಿದರು.
ನಿರ್ದೇಶಕರ ಮನೋಭಾವಗಳು ಯಾವುದೇ ಉದ್ಯಮದಲ್ಲಿ ನಟಿಯರನ್ನು ನೆಮ್ಮದಿಯಿಂದ ಕೆಲಸ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಯಾವುದೇ ಭಾಷೆ ಇರಲಿ, ನಟರನ್ನು ಮತ್ತು ಸಿಬ್ಬಂದಿಯನ್ನು ಗೌರವಿಸುವ ನಿರ್ದೇಶಕರು ನಟರ ಕೆಲಸದ ಜೀವನವನ್ನು ಸುಲಭಗೊಳಿಸಲು ಸಾಧ್ಯ. ಆದರೆ ಗೌರವಯುತವಾಗಿ ವರ್ತಿಸದ ವ್ಯಕ್ತಿಯು ನಟರ ಶಕ್ತಿಯನ್ನು ಹಾಳುಮಾಡುತ್ತಾರೆ ಎಂದಿದ್ದಾರೆ ಅದಾ.
ಸೆಟ್‌ಗೆ ಮೊದಲು ನಟಿಯರು ಬಂದರೆ ಅವರು ನಾಯಕ ನಟ ಬರುವವರೆಗೆ ಕಾಯಲೇಬೇಕು. ಆದರೆ ನಟರಿಗೆ ಈ ರೀತಿ ಇರುವುದಿಲ್ಲ. ಅವರು ಬಂದ ತಕ್ಷಣ ಶೂಟಿಂಗ್ ಶುರುವಾಗುತ್ತದೆ. ಇದೊಂದು ಕೊಳಕು ಮನಸ್ಥಿತಿ.
ಇದು ಲಿಂಗ ತಾರತಮ್ಯದ ಒಂದು ರೂಪ ಎಂದಿದ್ದಾರೆ. ಈ ಹಿಂದೆ ಕೂಡ ಹಲವು ನಟಿಯರು ಲಿಂಗ ತಾರತಮ್ಯದ ಕುರಿತು ಮಾತನಾಡಿದ್ದು ಇದೆ ಎಂದು ಸಂಬಳ ವಿಚಾರ ತೆಗೆದಿದ್ದಾರೆ.
ಸಂಬಳದ ವಿಷಯದಲ್ಲಿ ಬಂದಾಗ ನಾಯಕಿ-ನಾಯಕನ ಪಾತ್ರಕ್ಕೆ ಒಂದೇ ರೀತಿ ಮಹತ್ವ ಇದ್ದರೂ ನಾಯಕನಿಗೆ ಹೆಚ್ಚು ಸಂಭಾವನೆಯ ಕುರಿತು ಹಲವು ನಟಿಯರು ದನಿ ಎತ್ತಿದ್ದಾರೆ, ಎತ್ತುತ್ತಲೂ ಇದ್ದಾರೆ.