- Home
- Entertainment
- Cine World
- ನಟನೆಯನ್ನು ಬದಿಗಿಟ್ಟು ದೇಶಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಬಾಲಿವುಡ್ ಜನಪ್ರಿಯ ನಟ ಇವರು
ನಟನೆಯನ್ನು ಬದಿಗಿಟ್ಟು ದೇಶಕ್ಕಾಗಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಬಾಲಿವುಡ್ ಜನಪ್ರಿಯ ನಟ ಇವರು
ತಮ್ಮ ನಟನಾ ವೃತ್ತಿಜೀವನವನ್ನು ತೊರೆದು ಕಾರ್ಗಿಲ್ ಯುದ್ಧದಲ್ಲಿ ಭಾರತದ ಸೇನೆಯ ಭಾಗವಾದ ಬಾಲಿವುಡ್ ನ ಜನಪ್ರಿಯ ನಟರೊಬ್ಬರ ಬಗ್ಗೆ ಇಲ್ಲಿದೆ ಮಾಹಿತಿ. ಯಾರು ಆ ಮಹಾನ್ ನಟ ಗೊತ್ತಾ?

ಬಾಲಿವುಡ್ ನ ಪ್ರಸಿದ್ಧ ನಟ ನಾನಾ ಪಾಟೇಕರ್ (Nana Patekar) ಅವರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ, ಅವರು 40 ವರ್ಷಗಳಿಗಿಂತ ಹೆಚ್ಚು ಕಾಲ ತಮ್ಮ ಕೆಲಸದಿಂದ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ, ನಾನಾ ಪರದೆಯ ಮೇಲೆ ಬಂದಾಗಲೆಲ್ಲಾ ಅವರ ವಿಭಿನ್ನ ನಟನೆಗೆ ಜನ ಮನಸೋತಿದ್ದಾರೆ. ಆದರೆ, ನಾನಾ ಕೇವಲ ಸಿನಿಮಾ ನಟ ಮಾತ್ರವಲ್ಲ, ಅವರು ಸೇನೆಯಲ್ಲೂ ಸಹ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿದರೆ ನಿಮಗೆ ಅಚ್ಚರಿಯಾಗೋದು ಖಚಿತಾ.
ಹೌದು, ಕಾರ್ಗಿಲ್ ಯುದ್ಧದ (Kargil War)ಸಮಯದಲ್ಲಿ, ಭಾರತಕ್ಕೆ ಹೆಚ್ಚಿನ ಸೈನಿಕರ ಅಗತ್ಯವಿದ್ದಾಗ, ನಾನಾ ತಮ್ಮ ನಟನೆಯನ್ನು ಬದಿಗಿಟ್ಟು ದೇಶದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಮಹಾನ್ ನಾಯಕ ಕೂಡ ಹೌದು. ಅವರು ನಟನೆಯ ಜೊತೆ ಕೆಲವು ವರ್ಷಗಳ ಕಾಲ ದೇಶ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ನಮ್ಮ ಯುವಕರು ನಮ್ಮ ಶಕ್ತಿ
1991 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ನಾನಾ ಪಾಟೇಕರ್ ಅವರು ನಿರ್ವಹಿಸಿದ ಕರ್ತವ್ಯದ ಬಗ್ಗೆ ಇತ್ತೀಚೆಗೆ 'ದಿ ಲಾಲಾಂಟಾಪ್' ಗೆ ನೀಡಿದ ಸಂದರ್ಶನದಲ್ಲಿ ಕೇಳಲಾಯಿತು. ಆ ಸಂದರ್ಭದಲ್ಲಿ ಉತ್ತರಿಸಿದ ನಾನಾ ಪಾಟೇಕರ್ ಅವರು ಕ್ವಿಕ್ ರಿಯಾಕ್ಷನ್ ತಂಡದ ಸದಸ್ಯನಾಗಿದ್ದರು ಅನ್ನೋದನ್ನು ತಿಳಿಸಿದ್ದಾರೆ, ಇದು ಅತ್ಯಂತ ವಿಶೇಷ ಪಡೆಗಳಲ್ಲಿ ಒಂದಾಗಿದೆ. ನಮ್ಮ ಯುವಕರು ನಮ್ಮ ದೇಶದ ಶಕ್ತಿ. ದೇಶಕ್ಕಾಗಿ ಹೋರಾಡುವುದೇ ಒಂದು ಪುಣ್ಯದ ಕೆಲಸ ಎಂದಿದ್ದಾರೆ.
ನಾನಾ ಸೈನ್ಯಕ್ಕೆ ಸೇರಲು ಕಾರಣವೇನು?
'ಪ್ರಹಾರ್' ಚಿತ್ರಕ್ಕಾಗಿ ನಾನಾ ಪಾಟೇಕರ್ ಮರಾಠಾ ಲೈಟ್ ಇನ್ಫೆಂಟ್ರಿಯೊಂದಿಗೆ ತರಬೇತಿ ಪಡೆದಿದ್ದರು, ಅದಕ್ಕಾಗಿ ಅವರಿಗೆ ಕ್ಯಾಪ್ಟನ್ ಗೌರವ ಶ್ರೇಣಿಯನ್ನು ಸಹ ನೀಡಲಾಗಿತ್ತು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದ ನಂತರ, ನಾನಾ ಪಾಟೇಕರ್ ಹದಿನೈದು ದಿನಗಳ ಕಾಲ ಸೈನಿಕರೊಂದಿಗೆ ಇದ್ದರು. ಇದಲ್ಲದೆ, ಅವರು ಶೂಟರ್ ಆಗಿ ಅನೇಕ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ.
ಸೇನೆಗೆ ಸೇರುವುದು ಅಷ್ಟೊಂದು ಸುಲಭದ ಕೆಲಸ ಆಗಿರಲಿಲ್ಲ. ರಕ್ಷಣಾ ಇಲಾಖೆಗೆ ಸೇರಲು ಪಾಟೇಕರ್ ಸೇನೆಯ ಮರಾಠಾ ಲೈಟ್ ಇನ್ಫೆಂಟ್ರಿಯಲ್ಲಿ ತರಬೇತಿ ಪಡೆದಿದ್ದರು. ಆ ಸಮಯದಲ್ಲಿ, ಅವರು ತಮ್ಮ ಚಿತ್ರ ಪ್ರಹಾರ್ ನಲ್ಲಿ ನಟಿಸುತ್ತಿದ್ದರು. ಆ ಸಮಯದಲ್ಲಿ, ಅವರು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರು ಮತ್ತು ಸೇನೆಗೆ ಸೇರಲು ಆಸಕ್ತಿ ತೋರಿಸಿದರು. ಆದರೆ ಆರಂಭದಲ್ಲಿ, ಅವರ ಮನವಿಯನ್ನು ಸ್ವೀಕರಿಸಲಾಗಲಿಲ್ಲ ಮತ್ತು ರಕ್ಷಣಾ ಸಚಿವರು ಮಾತ್ರ ಅನುಮತಿ ನೀಡಬಹುದು ಎಂದು ಅವರಿಗೆ ತಿಳಿಸಲಾಯಿತು.
ಕೌನ್ ಬನೇಗಾ ಕರೋಡ್ ಪತಿ 16 ರಲ್ಲಿ ಈ ಕುರಿತು ಮಾತನಾಡಿದ ನಾನಾ ಪಾಟೇಕರ್, "ನಮ್ಮ ರಕ್ಷಣಾ ಸಚಿವ (defence minister)ಜಾರ್ಜ್ ಫರ್ನಾಂಡಿಸ್ ನನಗೆ ತಿಳಿದಿದ್ದರು, ಆದ್ದರಿಂದ ನಾನು ಅವರಿಗೆ ಕರೆ ಮಾಡಿ ಈ ಕುರಿತು ಹೇಳಿದಾಗ ಅದು ಅಸಾಧ್ಯ ಎಂದು ಅವರು ಕೇಳಿದ್ದರಂತೆ. ಅದಕ್ಕೆ ಉತ್ತರಿಸಿದ ನಾನಾ ಕಮಿಷನ್ ಗಾಗಿ ತರಬೇತಿ ಆರು ತಿಂಗಳಾದರೂ, ನಾನು ಮೂರು ವರ್ಷಗಳ ಕಾಲ ತರಬೇತಿ ಪಡೆದಿರೋದಾಗಿ ತಿಳಿಸಿದ್ದರಂತೆ. ಮರಾಠಾ ಲೈಟ್ ಇನ್ಫೆಂಟ್ರಿಯಲ್ಲಿ ಪಾಟೇಕಾರ್ ಅನುಭವವನ್ನು ತಿಳಿದ ನಂತರ,ಅಚ್ಚರಿಗೊಂಡ ಫೆರ್ನಾಂಡೀಸ್ ರಕ್ಷಣಾ ತಂಡ ಸೇರಿಕೊಳ್ಳಲು ಅನುಮತಿ ನೀಡಿದರಂತೆ.
ಇದಾದ ಬಳಿಕ ನಾನಾ ಪಾಟೇಕರ್ ಹದಿನೈದು ದಿನಗಳಿಗಿಂತ ಹೆಚ್ಚು ಕಾಲ ಎಲ್ಒಸಿಯಲ್ಲಿ ಕಳೆದರು ಮತ್ತು ಸೈನಿಕರಿಗೆ ಸಹಾಯ ಮಾಡಿದರು. ಈ ಸಮಯದಲ್ಲಿ, ಅವರು ಬೇಸ್ನಲ್ಲಿರುವ ಆಸ್ಪತ್ರೆಯಲ್ಲೂ ಸಹ ಸಹಾಯಕರಾಗಿ ಕೆಲಸ ಮಾಡಿದರು. ನಾನಾ ಅವರು ಕ್ವಿಕ್ ರೆಸ್ಪಾನ್ಸ್ ಟೀಮ್ (QRT) ನ ಭಾಗ ಕೂಡ ಆಗಿದ್ದರು. ಪಾಟೇಕರ್ ಶ್ರೀನಗರವನ್ನು ತಲುಪಿದಾಗ, ಅವರ ತೂಕ 76 ಕೆಜಿ ಇತ್ತಂತೆ, ಅಲ್ಲಿಂದ ಹಿಂದಿರುಗುವಾಗ ಅವರ ತೂಕ 56 ಕೆಜಿಗೆ ಇಳಿದಿದ್ದಂತೆ. ಅಷ್ಟು ಕಠಿಣವಾಗಿದ್ದು ಅಂದಿನ ಕೆಲಸ ಎಂದು ವಿವರಿಸಿದ್ದಾರೆ ಪಾಟೇಕರ್.