ವಿಮಾನ ದುರಂತದಲ್ಲಿ ಆಪ್ತ ಸಂಬಂಧಿ ಪೈಲೆಟ್ ಕುಂದರ್‌ನ ಕಳೆದುಕೊಂಡ ಬಾಲಿವುಡ್ ನಟ
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಇಬ್ಬರು ಪೈಲೆಟ್, ಸಿಬ್ಬಂದಿಗಳು ಪ್ರಯಾಣಿಕರು ಸೇರಿದಂತೆ 241 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಕೋ ಪೈಲೆಟ್ ಕ್ಲೈವ್ ಕುಂದರ್ ಬಾಲಿವುಡ್ ನಟ ವಿಕ್ರಾಂತಿ ಮಾಸ್ಸೆ ಸಂಬಂಧಿ. ಘಟನೆ ನನೆದು ವಿಕ್ರಾಂತ ಮಾಸ್ಸೆ ಕಣ್ಣೀರಿಟ್ಟಿದ್ದಾರೆ.

ಏರ್ ಇಂಡಿಯಾ ಎ171 ವಿಮಾನ ಅಹಮ್ಮದಾಬಾದ್‌ನಲ್ಲಿ ಪತನಗೊಂಡು 241 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಪೈಲೆಟ್, ಕ್ಯಾಬಿನ್ ಕ್ರೂ ಸೇರಿ 241 ಮಂದಿ ಮೃತಪಟ್ಟಿದ್ದಾರೆ. ಈ ವಿಮಾನ ದುರಂತದಲ್ಲಿ ಏಕೈಕ ಪ್ರಯಾಣಿಕ ಬದುಕುಳಿದಿದ್ದಾನೆ. ಇಬ್ಬರು ಪೈಲೆಟ್ ಅಪಾರ ಅನುಭವಿಗಳಾಗಿದ್ದು, ಉತ್ತಮ ಸೇವೆ ಸಲ್ಲಿಸಿದ ಟ್ರಾಕ್ ರೆಕಾರ್ಡ್ ಹೊಂದಿದ್ದಾರೆ. ವಿಮಾನದಲ್ಲಿನ ತಾಂತ್ರಿಕ ದೋಷ ಈ ಪತನಕ್ಕೆ ಕಾರಣ ಎನ್ನಲಾಗುತ್ತಿದೆ. ಈ ದುರಂತ ವಿಮಾನದಲ್ಲಿದ್ದ ಕೋ ಪೈಲೆಟ್ ಕ್ಲೈವ್ ಕುಂದರ್, ಬಾಲಿವುಡ್ ನಟ ವಿಕ್ರಾಂತ್ ಮಾಸ್ಸೆ ಸಂಬಂಧಿಯಾಗಿದ್ದಾರೆ.
12th ಫೈಲ್ ಸಿನಿಮಾ ಮೂಲಕ ಭಾರಿ ಜನಮನ್ನಣೆ ಗಳಿಸಿರುವ ವಿಕ್ರಾಂತ್ ಮಾಸ್ಸೆ ಏರ್ ಇಂಡಿಯಾ ವಿಮಾನ ದುರಂತಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಈ ಘಟನೆಯಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ. ಈ ಘಟನೆ ತನ್ನನ್ನು ಮತ್ತಷ್ಟು ದುಃಖಿತನಾಗುವಂತೆ ಮಾಡಿದೆ ಎಂದು ವಿಕ್ರಾಂತ್ ಮಾಸ್ಸೆ ಹೇಳಿದ್ದಾರೆ. ಕಾರಣ ಈ ದುರಂತಲ್ಲಿ ಮಡಿದ ಕೋ ಪೈಲೆಟ್ ಕ್ಲೈವ್ ಕುಂದರ್ ತನ್ನ ಕಸಿನ್ ಎಂದು ಕಣ್ಣೀರಿಟ್ಟಿದ್ದಾರೆ.
ಏರ್ ಇಂಡಿಯಾ ವಿಮಾನ ದುರಂತ ಹಾಗೂ ತನ್ನ ಆತ್ಮೀಯ ಸಂಬಂಧಿಯನ್ನು ಕಳೆದುಕೊಂಡು ನೋವನ್ನು ವಿಕ್ರಾಂತ್ ಮಾಸ್ಸೆ ತೋಡಿಕೊಂಡಿದ್ದಾರೆ. ಅಹಮ್ಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ದುರಂತದಲ್ಲಿ ಆತ್ಮೀಯರನ್ನು ಕಳೆದುಕೊಂಡ ಕುಟುಂಬಕ್ಕೆ ನೋವು ನನ್ನನ್ನು ಘಾಸಿಗೊಳಿಸಿದೆ ಎಂದು ವಿಕ್ರಾಂತ್ ನೋವು ತೋಡಿಕೊಂಡಿದ್ದಾರೆ. ಆದರೆ ಈ ಘಟನೆ ನನಗೆ ಮತ್ತಷ್ಟು ನೋವು ತಂದಿದೆ. ಕಾರಣ ನನ್ನ ಆತ್ಮೀಯ ಸಂಬಂಧಿ ಈ ಘಟನೆಯಲ್ಲಿ ಮೃತಪಟ್ಟಿರುವುದಾಗಿ ವಿಕ್ರಾಂತ್ ಹೇಳಿದ್ದಾರೆ.
ಈ ದುರ್ಘಟನೆಯಲ್ಲಿ ನೋವು ನನಗೆ ಮತ್ತಷ್ಟು ಹೆಚ್ಚಾಗಿದೆ. ಕಾರಣ ನನ್ನ ಅಂಕಲ್ ಕ್ಲಿಫೋರ್ಡ್ ಕುಂದರ್ ತನ್ನ ಮಗನನ್ನು ಕಳೆದುಕೊಂಡಿದ್ದಾರೆ. ಕ್ಲಿಫೋರ್ಡ್ ಕುಂದರ್ ಪುತ್ರ ಕ್ಲೈವ್ ಕುಂದರ್ ಈ ಏರ್ ಇಂಡಿಯಾ ವಿಮಾನದಲ್ಲಿ ಕೋ ಪೈಲೆಟ್ ಆಗಿದ್ದರು. ಕ್ಲೈವ್ ಕುಂದರ್ ಈ ವಿಮಾನದ ಫಸ್ಟ್ ಆಪರೇಟಿಂಗ್ ಆಫೀಸರ್ ಆಗಿದ್ದರು. ದೇವರು ಅಂಕಲ್ ಕುಟುಂಬಕ್ಕೆ ಹಾಗೂ ಈ ಘಟನೆಯಲ್ಲಿ ನೋವುಂಡ ಕುಟುಂಬಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ವಿಕ್ರಾಂತ್ ಮಾಸ್ಸೆ ಹೇಳಿದ್ದಾರೆ.
ಅಹಮ್ಮದಾಬಾದ್ ಲಂಡನ್ ಏರ್ ಇಂಡಿಯಾ ವಿಮಾನ ಎ171 ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಪತನಗೊಂಡಿದೆ. ಕೆಲವೇ ಕಿಲೋಮೀಟರ್ ದೂರ ಪ್ರಯಾಣಿಸುತ್ತಿದ್ದಂತೆ ವಿಮಾನ ಪತನಗೊಂಡಿದೆ. ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡದ ಮೇಲೆ ವಿಮಾನ ಪತನಗೊಂಡಿದೆ. ಇದರಿಂದ ಹಾಸ್ಟೆಲ್‌ನ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 45 ಮಂದಿಗೆ ಗಾಯಗೊಂಡಿದ್ದಾರೆ.