ಬಿಗ್‌ಬಾಸ್ ಮನೆಯಲ್ಲಿ ಹುಟ್ಟಿದ ಪ್ರೀತಿ..! ಡಿಸೆಂಬರ್‌ನಲ್ಲಿ ನಡೆಯಲಿತ್ತು ಸಿದ್ಧಾರ್ಥ್ ಮದುವೆ
- ಬಿಗ್‌ಬಾಸ್ ಮನೆಯಲ್ಲೇ ಶುರುವಾಯ್ತು ಪ್ರೀತಿ
- ಸಿದ್ಧಾರ್ಥ್-ಶೆಹನಾಝ್ ಜೋಡಿ ಸಖತ್ ಫೇಮಸ್
- ಡಿಸೆಂಬರ್‌ನಲ್ಲಿ ಮದುವೆಯಾಗಿ ಹೊಸ ಮನೆಗೆ ಶಿಫ್ಟ್ ಆಗಲಿದ್ದ ಜೋಡಿ
ಜನಪ್ರಿಯ ಟಿವಿ ಸ್ಟಾರ್ ಮತ್ತು ಬಿಗ್ ಬಾಸ್ 13 ವಿಜೇತ ಸಿದ್ಧಾರ್ಥ್ ಶುಕ್ಲಾ ಅವರ ಅಕಾಲಿಕ ಸಾವು ಅವರ ಆಪ್ತರನ್ನು ಶೋಕದಲ್ಲಿ ಮುಳುಗಿಸಿದೆ. ಅಭಿಮಾನಿಗಳು, ಸಹುದ್ಯೋಗಿಗಳೂ, ಕುಟಂಬಸ್ಥರು ನೋವಿನಲ್ಲಿದ್ದಾರೆ. ಹಸೆಮನೆ ಏರಬೇಕಾಗಿದ್ದ ನಟ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.
ಸಿದ್ಧಾರ್ಥ್ ಬಾಲಿಕಾ ವಧು, ದಿಲ್ ಸೆ ದಿಲ್ ತಕ್ ಮತ್ತು ಬಿಗ್ ಬಾಸ್ ಸೇರಿದಂತೆ ಹಲವಾರು ಜನಪ್ರಿಯ ಟಿವಿ ಸೀರಿಯಲ್ ಮತ್ತು ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ.
ವರುಣ್ ಧವನ್ ಮತ್ತು ಆಲಿಯಾ ಭಟ್ ನಟಿಸಿದ ಕರಣ್ ಜೋಹರ್ ನಿರ್ಮಾಣದ ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಸಹನಟನನ್ನು ಸ್ಮರಿಸುತ್ತಾ, ವರುಣ್ ಧವನ್ ಗುರುವಾರ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಜೊತೆಗೆ ಚಿತ್ರದ ಪ್ರಚಾರದ ಒಂದು ಫೋಟೋ ಕೂಡಾ ಇದೆ. ವರುಣ್ ಅವರನ್ನು 'ಸಹೋದರ' ಎಂದು ಕರೆದ ವರುಣ್ ಧವನ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಸ್ವರ್ಗವು ಒಂದು ನಕ್ಷತ್ರವನ್ನು ಪಡೆದುಕೊಂಡಿದೆ, ಆದರೆ ಪ್ರಪಂಚ ನಕ್ಷತ್ರವೊಂದನ್ನು ಕಳೆದುಕೊಂಡಿದೆ ಎಂದಿದ್ದಾರೆ.
ಸಿದ್ಧಾರ್ಥ್ ಶುಕ್ಲಾ ಮತ್ತು ಶೆಹ್ನಾಜ್ ಗಿಲ್ ಡಿಸೆಂಬರ್ 2021 ರಲ್ಲಿ ಮದುವೆಯಾಗಲು ಯೋಜಿಸಿದ್ದರು ಎಂದು ವರದಿಯಾಗಿದೆ. ಸಿದ್ದಾರ್ಥ್ ಗುರುವಾರ (ಸೆಪ್ಟೆಂಬರ್ 2) ಹೃದಯಾಘಾತದಿಂದ ನಿಧನರಾದರು. ಆಸ್ಪತ್ರೆಗೆ ಬರುವಷ್ಟರಲ್ಲಿ ನಟ ಮೃತಪಟ್ಟಿದ್ದಾನೆ ಎಂದು ವೈದ್ಯರುಎನೌನ್ಸ್ ಮಾಡಿದ್ದಾರೆ.
ಅವರು ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಸಿದ್ಧಾರ್ಥ್ ಶುಕ್ಲಾರ ಅಂತ್ಯಕ್ರಿಯೆಗಾಗಿ ಶೆಹನಾಝ್ ಸಹೋದರ ಶೆಹಬಾಜ್ ಬದೇಶಾ ಜೊತೆ ಆಗಮಿಸಿದ ಶೆಹ್ನಾಜ್ ಸಂಪೂರ್ಣ ಬ್ರೋಕನ್ ಸ್ಥಿತಿಯಲ್ಲಿ ಕಾಣಿಸಿಕೊಂಡರು.
ಇಬ್ಬರ ಕುಟುಂಬಗಳೂ ಮದುವೆಯ ಸಿದ್ಧತೆಗಳಲ್ಲಿದ್ದರು. ಇಷ್ಟೇ ಅಲ್ಲದೆ ಮೂರು ದಿನಗಳ ಅವಧಿಗೆ ಯೋಜಿಸಲಾಗಿದ್ದ ಮದುವೆ ಸಂಭ್ರಮಕ್ಕಾಗಿ ಕೊಠಡಿಗಳು, ಔತಣಕೂಟ ಮತ್ತು ಇತರ ಸೇವೆಗಳನ್ನು ಕಾಯ್ದಿರಿಸಲು ಅವರು ದುಬಾರಿ ಮುಂಬೈ ಹೋಟೆಲ್‌ನೊಂದಿಗೆ ಮಾತುಕತೆ ನಡೆಸುತ್ತಿದ್ದರು.