ನೂರಾರು ಗರ್ಲ್ ಫ್ರೆಂಡ್ಸ್ ಇದ್ದ ಸಂಜಯ್ ದತ್ ಹತ್ತು ಮುಖಗಳು!
ಬಾಲಿವುಡ್ನ ಕಂಟ್ರೋವರ್ಷಿಯಲ್ ನಟ ಸಂಜಯ್ ದತ್ ಅವರ 61ನೇ ಹುಟ್ಟುಹಬ್ಬ. ಜುಲೈ 29,1959 ರಂದು ಮುಂಬೈನಲ್ಲಿ ಜನಿಸಿದ ಸಂಜಯ್ ಅನೇಕ ಸೂಪರ್ಹಿಟ್ ಸಿನಿಮಾಗಳ ಜೊತೆ ಹಲವು ವಿವಾದಗಳಿಗೆ, ಆರೋಪಗಳಿಗೆ ಹೆಸರುವಾಸಿ. ಸುಮಾರು 308 ಗರ್ಲ್ಫ್ರೆಂಡ್ಸ್ ಇದ್ದರಂತೆ ಈ ನಟನಿಗೆ! ಅನೇಕ ಗೆಳತಿಯರಲ್ಲಿ ಒಬ್ಬರಾದ ರಿಚಾ ಶರ್ಮಾ, ಅವರ ಮೊದಲ ಹೆಂಡತಿಯಾಗಿದ್ದರು. ಸಂಜಯ್-ರಿಚಾ 1987ರಲ್ಲಿ ವಿವಾಹವಾದರು. ಮದುವೆಯಾದ ಸುಮಾರು ಒಂದೂವರೆ ವರ್ಷದ ನಂತರ, ರಿಚಾಗೆ ಮೆದುಳಿನ ಟ್ಯೂಮರ್ ಪತ್ತೆಯಾಯಿತು ರಿಚಾಗೆ ಯುಎಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು , ಸಂಜಯ್ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಈ ಸಮಯದಲ್ಲಿ ಸಂಜಯ್ - ಮಾಧುರಿ ದೀಕ್ಷಿತ್ ಸಂಬಂಧ ಮದುವೆ ಹಂತಕ್ಕೆ ತಲುಪಿತ್ತು. ಇದನ್ನು ತಿಳಿದ ರಿಚಾ ತಮ್ಮ ಮದುವೆಯನ್ನು ಉಳಿಸಲು ಚಿಕಿತ್ಸೆಯನ್ನು ಬಿಟ್ಟು ಮುಂಬೈಗೆ ಬಂದರು.
ಟ್ರೀಟ್ಮೆಂಟ್ಗಾಗಿ ರಿಚಾ ಯುಎಸ್ಗೆ ಹೋದಾಗ ಅವರ ಬಗ್ಗೆ ಸಂಜಯ್ ಯಾವುದೇ ಗಮನ ಹರಿಸಲಿಲ್ಲ. ಅಷ್ಟೇ ಅಲ್ಲ, ಅನಾರೋಗ್ಯ ಪೀಡಿತ ಪತ್ನಿ ಮತ್ತು ಮಗಳು ತ್ರಿಶಾಲಾಳನ್ನು ಕರೆದುಕೊಂಡು ಹೋಗಲು ಏರ್ಪೋರ್ಟ್ಗೂ ಹೋಗಲಿಲ್ಲವಂತೆ. ಯಾಸಿರ್ ಉಸ್ಮಾನ್ರ 'ದಿ ಕ್ರೇಜಿ ಅನ್ಟೋಲ್ಡ್ ಸ್ಟೋರಿ ಅಫ್ ಬಾಲಿವುಡ್ ಬ್ಯಾಡ್ ಬಾಯ್ ಸಂಜಯ್ ದತ್' ಪುಸ್ತಕದಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
'ಸಂಜಯ್ ಮತ್ತು ನನ್ನ ನಡುವೆ ಎಲ್ಲವೂ ಚೆನ್ನಾಗಿದೆ. ಸಂಜಯ್ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ನೀವು ನನಗೆ ವಿಚ್ಛೇದನ ಕೊಡುತ್ತೀರಾ ಎಂದು ನಾನು ಸಂಜಯ್ ಅವರನ್ನು ಕೇಳಿದೆ. ಇಲ್ಲ ಎಂದು ಸಂಜಯ್ ಉತ್ತರಿಸಿದರು,' ಎಂದು ರಿಚಾ ಸಂದರ್ಶನವೊಂದರಲ್ಲಿ ಹೇಳಿದ್ದನ್ನು ಪುಸ್ತಕದಲ್ಲಿ ನಮೂದಿಸಲಾಗಿದೆ.
'ನಾನು ಒಂದೇ ಸಮಯದಲ್ಲಿ ಮೂರು ಸಂಬಂಧಗಳನ್ನು ನಿಭಾಯಿಸಿದ್ದೇನೆ ಮತ್ತು ಎಂದಿಗೂ ಸಿಕ್ಕಿ ಬೀಳಲಿಲ್ಲ ನೀವು ಬಹಳ ಜಾಣತನದಿಂದ ನಿರ್ವಹಿಸಬೇಕು. ಪಾರ್ಟ್ನರ್ಗೆ ಯಾರೊಂದಿಗೆ ಏನಾಗುತ್ತಿದೆ ಎಂಬುದರ ಬಗ್ಗೆ ತಿಳಿದಿರಬಾರದು' ಎಂದು ಸಂದರ್ಶನವೊಂದರಲ್ಲಿ, ಸಂಜಯ್ ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡು ಹೇಳಿದ್ದರೊಮ್ಮೆ.
ಬಾಲ್ಯದ ಸ್ನೇಹಿತರಾಗಿದ್ದ ಸಂಜಯ್ ಮತ್ತು ಟೀನಾ ಶೀಘ್ರದಲ್ಲೇ ಈ ಸ್ನೇಹ ಪ್ರೀತಿಯಾಗಿ ಬದಲಾಯಿತು. ಸಂಜಯ್ ಡೆಬ್ಯು ಸಿನಿಮಾ ರಾಕಿ ಚಿತ್ರೀಕರಣದ ವೇಳೆ ಈ ಸಂಬಂಧವು ಬಲವಾಯಿತು, ಆದರೆ ಸಂಜಯ್ ಅವರ ಆಲ್ಕೊಹಾಲ್ ಹಾಗೂ ಡ್ರಗ್ಸ್ ಚಟ ಟೀನಾ ದೂರಾಗಲು ಕಾರಣವಾಯಿತು ಹಾಗೂ ರಾಜೇಶ್ ಖನ್ನಾ ಅವರೊಂದಿಗೆ ಬಾಂಧವ್ಯಕ್ಕೆ ದಾರಿಯಾಯಿತು.
ಒಂದು ಚಿತ್ರದ ಮೂಹರ್ತದ ಸಂದರ್ಭದಲ್ಲಿ ರಿಚಾ ಮತ್ತು ಸಂಜಯ್ ಭೇಟಿಯಾದರು. ಅವರ ಮೊದಲ ಭೇಟಿ ನಂತರ, ಸಂಜಯ್ ರಿಚಾ ಬಗ್ಗೆ ಹುಚ್ಚರಾದರು. ಅಂತಿಮವಾಗಿ, 1987 ರ ಚಲನಚಿತ್ರ 'ಆಗ್ ಹೈ ಆಗ್' ಚಿತ್ರದ ಶೂಟಿಂಗ್ ಸಮಯದಲ್ಲಿ, ರಿಚಾಗೆ ಸಂಜಯ್ ಪ್ರಪೋಸ್ ಮಾಡಿದರು. ತನ್ನ ಹೆತ್ತವರು ಮದುವೆಗೆ ಸಿದ್ಧರಿಲ್ಲ ಎಂದು ರಿಚಾಗೆ ತಿಳಿದಿತ್ತು. ರಿಚಾ ಅವರ ಪೋಷಕರನ್ನು ಭೇಟಿ ಮಾಡಲು ಸಂಜಯ್ ನ್ಯೂಯಾರ್ಕ್ಗೆ ಹೋಗಿದ್ದರು. 1987 ರಲ್ಲಿ, ಸಂಜಯ್- ರಿಚಾ ವಿವಾಹವಾದರು. ಒಂದು ವರ್ಷದ ನಂತರ, 1988 ರಲ್ಲಿ, ಮಗಳು ತ್ರಿಶಾಲಾ ಜನಿಸಿದರು.
ಸಂಜಯ್ ಮತ್ತು ಮಾಧುರಿ ಸಂಬಂಧ 90 ರ ದಶಕದಲ್ಲಿ ಬಾಲಿವುಡ್ನ ದೊಡ್ಡ ಸುದ್ದಿಯಾಗಿತ್ತು. 1991ರ ಸಾಜನ್ ಸಿನಿಮಾದ ಸಮಯದಲ್ಲಿ ಅವರಿಬ್ಬರೂ ಹತ್ತಿರವಾದರು. ಪರಸ್ಪರ ತುಂಬಾ ಪ್ರೀತಿಸುತ್ತಿದ್ದ ಇಬ್ಬರೂ ಹಸೆಮಣೆ ಏರಲೂ ಸಿದ್ಧರಾಗಿದ್ದರು.
ಆದರೆ ನಂತರ ಸಂಜಯ್ ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡರು. 1993 ರಲ್ಲಿ ಅವರನ್ನು ಬಂಧಿಸಿದಾಗ ಮಾಧುರಿ ದೂರವಾದ್ದರು. ಬ್ರೇಕಪ್ ನಂತರ, ಮಾಧುರಿ ಯುಎಸ್ ಮೂಲದ ವೈದ್ಯ ಶ್ರೀರಾಮ್ ನೆನೆಯನ್ನು ಮದುವೆಯಾದರು.
ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ಸುದೀರ್ಘ ಕಾನೂನು ಹೋರಾಟದ ನಂತರ ಸಂಜಯ್ ದತ್ಗೆ ಸ್ವಲ್ಪ ರಿಲೀಫ್ ಸಿಕ್ಕಾಗ, ಮಾಧುರಿ ಅವರಿಂದ ದೂರವಾದರು. ಅಂತಹ ಪರಿಸ್ಥಿತಿಯಲ್ಲಿ ರಿಯಾ ಪಿಳ್ಳೈ ಸಂಜಯ್ ಅವರಿಗೆ ಜೊತೆಯಾದರು.
ಇಬ್ಬರೂ 1998 ರಲ್ಲಿ ವಿವಾಹವಾದರು ಆದರೆ ಇಬ್ಬರೂ 2005 ರಲ್ಲಿ ವಿಚ್ಚೇದನ ಪಡೆದರು. ಮದುವೆಯಾದ ನಂತರ ಇಬ್ಬರೂ ಬೇರೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ.
ರಿಯಾಳನ್ನು ಮದುವೆಯಾದ ನಂತರ ಸಂಜಯ್ ಅವರು ನಾಡಿಯಾ ದುರ್ರಾನಿಯೊಂದಿಗೆ ರಿಲೆಷನ್ಶಿಪ್ ಹೊಂದಿದ್ದರು. ರಿಯಾಗೆ ಈ ಸಂಬಂಧದ ಬಗ್ಗೆ ಸುಳಿವು ಸಿಕ್ಕಿತು. ಶೂಟಿಂಗ್ ಸಮಯದಲ್ಲಿ ನಾಡಿಯಾ ಸೆಟ್ಗಳಲ್ಲಿ ಕಾಣಿಸಿಕೊಂಡಾಗ ವಿಷಯ ಹದಗೆಟ್ಟಿತು. ಈ ಕಾರಣದಿಂದಾಗಿ, ರಿಯಾ ಜೊತೆ ಸಂಬಂಧವೂ ಮುರಿದುಹೋಯಿತು. ಆದರೆ ಇದರ ನಂತರ ಸಂಜಯ್-ನಾಡಿಯಾ ರಿಲೆಷನ್ಶಿಪ್ ಸಹ ಮುರಿದು ಬಿತ್ತು.
ಇದೇ ಸಮಯದಲ್ಲಿ, ಸಂಜಯ್ ಮಾನ್ಯತಾ ಕಡೆಗೆ ಆಕರ್ಷಿತರಾದರು.ನಾಡಿಯಾ ಜೊತೆ ಬ್ರೇಕಪ್ ಆದ ನಂತರ ಸಂಜಯ್ ಮಾನ್ಯತಾಗೆ ಹತ್ತಿರವಾದರು.
ಎರಡು ವರ್ಷಗಳ ನಂತರ ಫೆಬ್ರವರಿ 7, 2008 ರಂದು ಮಾನ್ಯತಾ ಸಂಜಯ್ ವಿವಾಹವಾದರು. ಇದರ ನಂತರ, ಅಕ್ಟೋಬರ್ 21, 2010 ರಂದು, ದಂಪತಿಗೆ ಅವಳಿ ಮಕ್ಕಳಾದ ಶಹ್ರಾನ್ ಮತ್ತು ಇಕ್ರಾ ಜನಿಸಿದರು.