ಪೋಟೋಗಳು - ಮಕ್ಕಳೊಂದಿಗೆ ಬಾಲಿವುಡ್‌ನ ಬೆಸ್ಟ್‌ ಅಪ್ಪಂದಿರು..

First Published 22, Jun 2020, 6:15 PM

ಪ್ರತಿ ವರ್ಷ ಜೂನ್ ಮೂರನೇ ಭಾನುವಾರದಂದು ಫಾದರ್ಸ್ ಡೇ ಆಚರಿಸಲಾಗುತ್ತದೆ. ಗಣ್ಯರಾದರೇನು, ಶ್ರೀ ಸಾಮಾನ್ಯರಾದರೇನು? ಅಪ್ಪ ಅಪ್ಪನೇ ಅಲ್ಲವೇ? ತಂದೆಯಾದ ಆ ಕ್ಷಣದ ಅನುಭವ ಪ್ರತಿಯೊಂದೂ ಗಂಡಿಗೂ ಒಂದೇ ರೀತಿ. ಅದನ್ನು ಅಭಿವ್ಯಕ್ತಗೊಳಿಸುವ ರೀತಿ ವಿಭಿನ್ನವಾಗಿರಬಹುದು ಅಷ್ಟೇ. ಚಿತ್ರರಂಗದಲ್ಲಿಯೂ ಜನಪ್ರಿಯವಾಗಿರುವ ಸ್ಟಾರ್ ಕಿಡ್‌ಗಳಲ್ಲಿದ್ದು, ಕೆಲವರು ಲೈಮ್‌ಲೈಟ್‌ನಿಂದ ದೂರವಿರಲು ಇಷ್ಟಪಟ್ಟರೆ, ಕೆಲವರು ಈಗಾಗಲೇ ಬಾಲಿವುಡ್‌ನಲ್ಲಿಯೇ ನೆರೆಯೂರುತ್ತಿದ್ದಾರೆ. ಉದಾಹರಣೆಗೆ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಬಚ್ಚನ್ ಹೆಚ್ಚು ಪ್ರಚಾರದಲ್ಲಿದ್ದರೆ, ಅಕ್ಷಯ್ ಕುಮಾರ್ ಪುತ್ರಿ ನಿತಾರಾ ಮನೆಯಿಂದ ಹೊರಗೆ ಹೋಗುವುದನ್ನೇ ಇಷ್ಟಪಡುವುದಿಲ್ಲ. ಸ್ಟಾರ್ ಮಕ್ಕಳು ತಮ್ಮ ತಂದೆಯೊಂದಿಗೆ ಹೇಗೆ ಸಂಬಂಧ ಹೊಂದಿದ್ದಾರೆ? ನೋಡಿ ಫೋಟೋಸ್...

ಅಭಿಷೇಕ್ ಬಚ್ಚನ್ ಮಗಳು ಆರಾಧ್ಯ ಫೇಮಸ್‌ ಸ್ಟಾರ್ ಕಿಡ್.  ಆದರೆ ಮಗಳನ್ನು ಸಾಮಾನ್ಯ ಮಕ್ಕಳಂತೆ ಬೆಳೆಸುತ್ತಿದ್ದಾರೆ ಐಶ್-ಅಭಿ. ಆರಾಧ್ಯ ತಂದೆಗೆ ತುಂಬಾ ಹತ್ತಿರವಾಗಿದ್ದಾಳೆ. ಇವರಿಬ್ಬರ ಬಾಂಡಿಂಗ್‌ ಚೆನ್ನಾಗಿದೆ. ಅದೇ ಸಮಯದಲ್ಲಿ, ಅಕ್ಷಯ್ ಕುಮಾರ್  ಮಗಳು ನಿತಾರಾ ಹೆಚ್ಚು ಪ್ರಚಾರದಲ್ಲಿರಲು ಇಷ್ಟಪಡುವುದಿಲ್ಲ. ಅಕ್ಷಯ್ ಎಷ್ಟೇ ಬ್ಯುಸಿಯಾಗಿದ್ದರೂ, ಮಗಳೊಂದಿಗೆ ಸಮಯ ಕಳೆಯಲು ಸಮಯ ಹೊಂದಿಸಿಕೊಳ್ಳುತ್ತಾರೆ. ಅವರು ಹೆಚ್ಚಾಗಿ ಮಗಳನ್ನು ಶಾಪಿಂಗ್‌ಗೆ ಕರೆದೊಯ್ಯುವುದನ್ನು ನೋಡಬಹುದು.

ಅಜಯ್ ದೇವಗನ್‌ಗೆ ಇಬ್ಬರು ಮಕ್ಕಳು, ಮಗಳು ನ್ಯಾಸಾ ಮತ್ತು ಯುಗ. ಇಬ್ಬರೂ ಮಕ್ಕಳು  ತಂದೆಗೆ ತುಂಬಾ ಅಪ್ತರಾಗಿದ್ದರೂ, ನ್ಯಾಸಾ ಹೆಚ್ಚು ಕ್ಲೋಸ್‌. ಪ್ರತಿಯೊಂದು ಸಣ್ಣ ವಿಷಯವನ್ನೂ  ತಂದೆಯೊಂದಿಗೆ ಹಂಚಿಕೊಳ್ಳುತ್ತಾಳಂತೆ ಇವಳು.

ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್ ಖಾನ್‌ಗೆ  ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಎಂಬ ಮೂವರು ಮಕ್ಕಳು. ಆರ್ಯನ್ ಮತ್ತು ಸುಹಾನಾ ಇನ್ನೂ ಓದುತ್ತಿದ್ದಾರೆ. ಅದೇ ಸಮಯದಲ್ಲಿ, ಪಪ್ಪಾರ ಮುದ್ದಿನ ಮಗ ಅಬ್ರಾಮ್ ಆಗಾಗ್ಗೆ ತಂದೆಯೊಂದಿಗೆ ಕಾಣಿಸಿಕೊಳ್ಳುತ್ತಾನೆ.ಚಿಕ್ಕ ಮಗನ ಮೇಲೆ ಶಾರುಖ್‌ಗೆ  ವಿಶೇಷ ಕಾಳಜಿ.

ಹೃತಿಕ್ ರೋಷನ್‌ ಹಾಗೂ 2 ಗಂಡು ಮಕ್ಕಳ ನಡುವೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ. ಹೆಂಡತಿಯಿಂದ ಬೇರೆಯಾದ ನಂತರವೂ ಮಕ್ಕಳನ್ನು ತಮ್ಮ ಜೊತೆಯಲ್ಲೇ ಇರಿಸಿಕೊಂಡಿದ್ದಾರೆ ಹೃತಿಕ್‌. ರಜಾದಿನಗಳಲ್ಲಿ  ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಲು ನಟ ಮರೆಯುವುದಿಲ್ಲ.

ಶಾಹಿದ್ ಕಪೂರ್‌ಗೆ ಮೀಶಾ ಮತ್ತು ಜೈನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಶೂಟಿಂಗ್‌ನಿಂದ ಫ್ರೀ ಇರುವಾಗ ಮಕ್ಕಳೊಂದಿಗೆ ಮನೆಯಲ್ಲಿ ಸಮಯ ಕಳೆಯಲು ಶಾಹಿದ್ ಹೆಚ್ಚಾಗಿ ಆದ್ಯತೆ ನೀಡುತ್ತಾರೆ.

ಆಮೀರ್ ಖಾನ್ ಮತ್ತು ಮಗ ಆಜಾದ್ ವಿಶೇಷ ಬಂಧವನ್ನು ಹೊಂದಿದ್ದಾರೆ.ಆಗಾಗ್ಗೆ ಮಗನ ಸಂತೋಷಕ್ಕಾಗಿ ಏನನ್ನಾದರೂ ಮಾಡುತ್ತಲೇ ಇರುತ್ತಾರೆ ಈ ಸೂಪರ್‌ಸ್ಟಾರ್‌. ಆಮೀರ್‌ ಹಾಗೂ ಕಿರಣ್‌ರಾವ್‌ ಬಾಡಿಗೆ ತಾಯಿ ಮೂಲಕ ಪಡೆದ ಮಗುವಿದು.

ಸಾರಾ, ಇಬ್ರಾಹಿಂ ಮತ್ತು ತೈಮೂರ್ ಸೈಫ್ ಅಲಿ ಖಾನ್‌ರ ಮೂವರು ಮಕ್ಕಳು. ಮೊದಲ ಹೆಂಡತಿಯ ಮಕ್ಕಳಾದ ಸಾರಾ ಸಿನಮಾದಲ್ಲಿ ಹಾಗೂ ಮತ್ತು ಇಬ್ರಾಹಿಂ ಓದಿನಲ್ಲಿ ನಿರತರಾಗಿದ್ದಾರೆ. ಸೈಫ್ ಹೆಚ್ಚಾಗಿ ತನ್ನ 3 ವರ್ಷದ ಮಗ ತೈಮೂರ್ ಜೊತೆ ಗುರುತಿಸಿಕೊಂಡಿದ್ದಾರೆ. ತೈಮೂರ್‌ನೊಂದಿಗೆ ಆಟವಾಡುವುದು, ನಡೆಯುವುದು ಅಥವಾ ಮೋಜು ಮಾಡುವುದು ಸೈಫ್‌ನ ದಿನಚರಿಯಲ್ಲಿ ಸೇರಿದೆ.

ನಟ ಕುನಾಲ್ ಖೇಮು ಮಗಳು ಇನಯಾ ಇಂಟರ್‌ನೆಟ್‌ನ ಕ್ಯುಟ್‌ ಕಿಡ್‌. ಮಗಳೊಂದಿಗೆ ಮೋಜು ಮಾಡುವ ತನ್ನ ಫೋಟೋಗಳನ್ನು ಕುನಾಲ್ ಆಗಾಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ.

loader