ಇಂಡಸ್ಟ್ರಿಗೆ ಬಂದು 16 ವರ್ಷ: ಹೇಗಿದ್ದೋರು ಹೇಗಾದ್ರು ನೋಡಿ
ಬಾಹುಬಲಿ ನಟಿ ಅನುಷ್ಕಾ ಶೆಟ್ಟಿಯ ಮೊದಲ ಸಿನಿಮಾ ನೋಡಿದವರು ಅವ್ರೇ ಇವರಾ ಎಂದುಕೊಳ್ಳುವಷ್ಟು ಬದಲಾಗಿದ್ದಾರೆ.
ಟಾಲಿವುಡ್ ಮತ್ತು ತಮಿಳು ಚಿತ್ರರಂಗದಲ್ಲಿ ಹೆಚ್ಚು ಬೇಡಿಕೆಯಿರುವ ನಟಿಯರಲ್ಲಿ ಅನುಷ್ಕಾ ಶೆಟ್ಟಿ ಒಬ್ಬರು.
ಬಾಹುಬಲಿ ನಟಿ 2005 ರ ತೆಲುಗು ಚಿತ್ರ ಸೂಪರ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.
ಚಿತ್ರರಂಗದಲ್ಲಿ 16 ವರ್ಷಗಳನ್ನು ಪೂರೈಸಿದ್ದಾರೆ ಈಕೆ.
ಬಾಹುಬಲಿಯ ದೇವಸೇನ ಪಾತ್ರಕ್ಕೆ ಹೆಸರುವಾಸಿಯಾದ ಅನುಷ್ಕಾ ಶೆಟ್ಟಿ ಅವರು ಸ್ಟ್ರಾಂಗ್ ಮತ್ತು ಭಿನ್ನ ಪಾತ್ರಗಳನ್ನು ತೆಗೆದುಕೊಳ್ಳುವ ಮೂಲಕ ತನಗೆ ಒಂದು ಮಾನದಂಡವನ್ನು ಹಾಕಿಕೊಂಡಿದ್ದಾರೆ.
ತನ್ನ ವೃತ್ತಿಜೀವನದ 16 ವರ್ಷಗಳಲ್ಲಿ ನಟಿ ವಿವಿಧ ಪಾತ್ರ ಮತ್ತು ವಿಭಿನ್ನ ಪ್ರಕಾರದ ಸಿನಿಮಾ ಆರಿಸುವ ಮೂಲಕ ತನ್ನನ್ನು ತಾನು ಪ್ರೂವ್ ಮಾಡಿದ್ದಾರೆ.
ಅಭಿಮಾನಿಗಳ ಸ್ವೀಟಿ ಎಂದು ಪ್ರೀತಿಯಿಂದ ಕರೆಯಲ್ಪಡುವ ಅನುಷ್ಕಾ ಅವರು 16 ವರ್ಷಗಳಲ್ಲಿ ಅಭಿಮಾನಿಗಳಿಂದ ಎಲ್ಲ ಪ್ರೀತಿ ಮತ್ತು ಬೆಂಬಲವನ್ನು ಪಡೆದಿದ್ದಾರೆ.
ಸಿಂಗಂ ಸೀಕ್ವೆಲ್ಸ್ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಅನುಷ್ಕಾ
ನಟಿ ನಿಶ್ಯಬ್ದಂ ನಂತರ ಬೇರೆ ಸಿನಿಮಾ ಮಾಡಿಲ್ಲ