- Home
- Entertainment
- Cine World
- ಸೀರೆಯುಟ್ಟು ಮಲ್ಲಿಗೆ ಮುಡಿದು ಪೋಸ್ ಕೊಟ್ಟ ಆಥಿಯಾ ಶೆಟ್ಟಿ…ಪತಿ ರಾಹುಲ್ ರನ್ ಮಾಡದ್ದಕ್ಕೆ ಇದೇ ಕಾರಣವಂತೆ!
ಸೀರೆಯುಟ್ಟು ಮಲ್ಲಿಗೆ ಮುಡಿದು ಪೋಸ್ ಕೊಟ್ಟ ಆಥಿಯಾ ಶೆಟ್ಟಿ…ಪತಿ ರಾಹುಲ್ ರನ್ ಮಾಡದ್ದಕ್ಕೆ ಇದೇ ಕಾರಣವಂತೆ!
ಬಾಲಿವುಡ್ ಬೆಡಗಿ, ಕ್ರಿಕೆಟಿಗ ಕೆ.ಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಮುದ್ದಾಗಿ ಸೀರೆಯುಟ್ಟು, ಜಡೆ ಹಾಕಿ, ಮಲ್ಲಿಗೆ ಹೂವು ಮುಡಿದು ತುಂಬಾನೆ ಟ್ರೆಡಿಶನಲ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ನ ಸ್ಟಾರ್ ನಟ ಸುನೀಲ್ ಶೆಟ್ಟಿ ಪುತ್ರಿ ಹಾಗೂ ಟೀಮ್ ಇಂಡಿಯಾದ ಕ್ರಿಕೆಟ್ ಆಟಗಾರ ಕೆ. ಎಲ್. ರಾಹುಲ್ (K L Rahul) ಪತ್ನಿ ಆಥಿಯಾ ಶೆಟ್ಟಿ. ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಫ್ಯಾಷನ್, ಸ್ಟೈಲ್ ನಿಂದಾನೆ ಸದಾ ಸುದ್ದಿಯಲ್ಲಿರೋ ನಟಿ. ಹಲವು ವರ್ಷಗಳಿಂದ ನಟನೆಯಿಂದ ದೂರ ಉಳಿದಿರುವ ಆಥಿಯಾ, ಟ್ರಾವೆಲ್ ಮಾಡ್ತಾ, ಫ್ಯಾಮಿಲಿ ಫ್ರೆಂಡ್ಸ್ ಜೊತೆ ಜೀವನ ಎಂಜಾಯ್ ಮಾಡ್ತಿದ್ದಾರೆ.
ಆಥಿಯಾ ಶೆಟ್ಟಿ (Athiya Shetty) ಹೀರೊ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ನಂತರ ಮುಬಾರಕನ್, ಮೋತಿ ಚೂರ್ ಚಕ್ನಾ ಚೋರ್ ಸಿನಿಮಾದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲ ನವಾಬ್ ಝಾದೆ ಸಿನಿಮಾದಲ್ಲಿ ವಿಶೇಷ ಹಾಡೊಂದರಲ್ಲಿ ನಟಿ ಕಾಣಿಸಿಕೊಂಡಿದ್ದರು. ಅದಾದ ನಂತರ ನಟಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಹೆಚ್ಚಾಗಿ ಫ್ಯಾಷನ್ ಶೋಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು.
ನಟಿಸಿದೆ ಸಿನಿಮಾಗಳು ಹಿಟ್ ಆಗಲೇ ಇಲ್ಲ. ಹಾಗಾಗಿ ಸಿನಿಮಾದಿಂದ ದೂರ ಉಳಿದಿರುವ ಆಥಿಯಾ ಮಾಡೆಲಿಂಗ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಇದರ ಜೊತೆಗೆ ಸದ್ಯಕ್ಕಂತೂ ತಮ್ಮ ಜೀವನವನ್ನ ಎಂಜಾಯ್ ಮಾಡ್ತಿದ್ದಾರೆ. ಹಲವು ವರ್ಷಗಳಿಂದ ಲವ್ ಮಾಡುತ್ತಿದ್ದ ಆಥಿಯಾ 2023ರ ಜನವರಿಯಲ್ಲಿ ಕ್ರಿಕೆಟಿಗ ರಾಹುಲ್ ಜೊತೆಗೆ ಖಾಸಗಿ ಸಮಾರಂಭದಲ್ಲಿ ಬಂಧುಗಳ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಥಿಯಾ ನಂತರ ಸಿನಿಮಾಗಳಿಂದ ದೂರವೇ ಉಳಿದಿದ್ದರು.
ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಥಿಯಾ ಒಂದಿಷ್ಟು ಫೋಟೊಗಳನ್ನು ಹಾಕಿದ್ದು, ಸೀರೆಯುಟ್ಟು ಸಾಂಪ್ರದಾಯಿಕ ಅವತಾರದಲ್ಲಿ ಅಥಿಯಾ ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಸುಂದರವಾದ ಸೀರೆಯುಟ್ಟು, ಕೂದಲನ್ನು ಹೆಣೆದು ಜಡೆ ಹಾಕಿದ್ದು, ಮಲ್ಲಿಗೆ ಕೂಡ ಮುಡಿದಿದ್ದಾರೆ. ಇವರ ಈ ಲುಕ್ ನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ತುಂಬಾನೆ ಸುಂದರವಾಗಿ ಕಾಣಿಸ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. ಸ್ಟನ್ನರ್, ಬ್ಯೂಟಿ, ಡಿವೈನ್ ಎಂದು ಸಹ ಹೇಳಿದ್ದಾರೆ ಸೆಲೆಬ್ರಿಟಿಗಳು.
ಟ್ರೆಡೀಶನಲ್ ಅವತಾರದಲ್ಲಿ (Traditional look) ಆಥಿಯಾ ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದು, ಕೆಲವರಂತೂ ಕೆ. ಎಲ್. ರಾಹುಲ್ ಕ್ರಿಕೆಟ್ ನಲ್ಲಿ ಕಡಿಮೆ ಸ್ಕೋರ್ ಮಾಡ್ತಿರೋದಕ್ಕೆ ಇದೇ ಕಾರಣ ಅಂತಿದ್ದಾರೆ. ಅಂದ್ರೆ ಇಷ್ಟೊಂದು ಸುಂದರವಾಗಿ ರೆಡಿಯಾಗಿರುವ ಹೆಂಡ್ತಿ ಪಕ್ಕದಲ್ಲಿರೋವಾಗ ಆಟದ ಕಡೆಗೆ ಗಮನ ಹರಿಸೋಕೆ ಸಾಧ್ಯ ಆಗೋದಿಲ್ಲ. ಹಾಗಾಗಿ ರಾಹುಲ್ ಚೆನ್ನಾಗಿ ಆಡ್ತಾ ಇಲ್ಲ ಎಂದಿದ್ದಾರೆ ಜನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.