23 ವರ್ಷಕ್ಕೆ 3-4 ಬಾಯ್‌ಫ್ರೆಂಡ್ಸ್ ಇರ್ಬೇಕು ಎಂದ ಆಲಿಯಾ..!
ಬಾಲಿವುಡ್ ನಟಿ ಆಲಿಯಾ ಭಟ್ ಡೇಟ್ ಮಾಡೋದರ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ..? 3/4 ಬಾಯ್‌ಫ್ರೆಂಡ್ಸ್‌ನ ಇಡ್ಕೋಬೋದಂತೆ. ಏನೇನ್ ಹೇಳಿದ್ದಾರೆ.. ಇಲ್ಲಿ ನೋಡಿ
ಪ್ರಸಿದ್ಧ ಟಾಕ್ ಶೋ ಕಾಫಿ ವಿತ್ ಕರಣ್‌ನಲ್ಲಿ ಸೆಲೆಬ್ರಿಟಿಗಳು ಫನ್ನಿಯಾಗಿರೋ ಅಚ್ಚರಿ ಎನಿಸೋ ಸಾಕಷ್ಟು ವಿಚಾರಗಳನ್ನು ಶೇರ್ ಮಾಡಿಕೊಳ್ತಾರೆ.
ಆಲಿಯಾ ಭಟ್ ಮತ್ತು ಶಾರೂಖ್ ಖಾನ್ ಶೋನಲ್ಲಿ ಭಾಗಿಯಾಗಿದ್ದ ಸಂದರ್ಭ ಆಲಿಯಾ ಭಟ್ ಡೇಟಿಂಗ್ ವಿಚಾರವಾಗಿ ಪ್ರಶ್ನೆ ಮಾಡಿದ್ದರು ಕರಣ್ ಜೋಹರ್.
ಈ ಸಂದರ್ಭ ಆಲಿಯಾ ಎಲ್ರನ್ನೂ ಡೇಟ್ ಮಾಡಿದ್ದಾಳೆ ಎಂದು ಶಾರೂಖ್ ಉತ್ತರಿಸಿದಾಗ ಆಲಿಯಾ ರಿಯಾಕ್ಷನ್ ಹೇಗಿತ್ತು ಗೊತ್ತಾ..?
ನನಗೀಗ 23 ವರ್ಷ. 23 ವರ್ಷದಲ್ಲಿ 3/4 ಜನ ಬಾಯ್‌ಫ್ರೆಂಡ್ಸ್‌ನ ಇಡ್ಕೋಬಹುದು ಎಂದಿದ್ದಾರೆ ಆಲಿಯಾ
ಸದ್ಯ ರಣಬೀರ್ ಕಪೂರ್ ಜೊತೆ ಡೇಟ್ ಮಾಡ್ತಿರೋ ಆಲಿಯಾ ಭಟ್ ಅವರನ್ನೇ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.
ಇಬ್ಬರೂ ರಿಲೇಷನ್‌ಶಿಪ್‌ನಲ್ಲಿದ್ದು, ಶೀಘ್ರ ಮದುವೆ ನಡೆಯುವ ಸಾಧ್ಯತೆ ಇದೆ
ಲಾಕ್‌ಡೌನ್ ಸಂದರ್ಭ ರಣಬೀರ್ ಕಪೂರ್ ಮನೆಯಲ್ಲಿಯೇ ಉಳಿದುಕೊಂಡಿದ್ದರು ಆಲಿಯಾ ಭಟ್.
ಇನ್ನು ಹೊಸ ಆಲಿಯಾ ರಣಬೀರ್ ಕಪೂರ್ ಮನೆಯ ಸಮೀಪವೇ ಹೊಸ ಪ್ರಾಪರ್ಟಿ ಕೂಡಾ ಖರೀದಿಸಿದ್ದಾರೆ,
ವರುಣ್ ನಂತರ ಶೀಘ್ರ ಈ ಬಾಲಿವುಡ್ ಜೋಡಿ ಹಸೆಮಣೆ ಏರುವ ಸಾಧ್ಯತೆ ಇದೆ
ಇತ್ತೀಚೆಗಷ್ಟೇ ರಣಬೀರ್ ಮತ್ತು ಆಲಿಯಾ ಗೋವಾದಲ್ಲಿ ವೇಕೇಷನ್ ಎಂಜಾಯ್ ಮಾಡಿ ಬಂದಿದ್ದಾರೆ.