ಬಿಪಾಶಾ ಬಸುಯಿಂದ ಸೋನಾಲಿ ಬೇಂದ್ರೆವರೆಗೆ; ರಾಜಕಾರಣಿಗಳ ಜೊತೆ ಲಿಂಕಪ್ ಆದ ನಟಿಯ ಹೆಸರು
ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದ ಶಿಕ್ಷಕರ ನೇಮಕಾತಿ ಹಗರಣದಿಂದಾಗಿ ಬಂಗಾಳಿ ನಟಿ ಅರ್ಪಿತಾ ಮುಖರ್ಜಿ ವಿವಾದಕ್ಕೊಳಗಾಗಿದ್ದಾರೆ. ಅವರು ಪ್ರಕರಣದ ಪ್ರಮುಖ ಆರೋಪಿ ಮತ್ತು ತೃಣಮೂಲ ಕಾಂಗ್ರೆಸ್ ಸರ್ಕಾರದ ಮಾಜಿ ಸಚಿವ ಪಾರ್ಥ ಚಟರ್ಜಿಗೆ ನಿಕಟವಾಗಿದ್ದಾರೆ. ಇತ್ತೀಚೆಗೆ ಸಂಭಾಷಣೆಯೊಂದರಲ್ಲಿ, ಅರ್ಪಿತಾ ಮುಖರ್ಜಿ ಅವರ ಚಾಲಕ ಪ್ರಣಬ್ ಭಟ್ಟಾಚಾರ್ಯ ಅವರು ನಟಿ ಪಾರ್ಥನನ್ನು ಭೇಟಿಯಾಗಲು ಹೋಗುತ್ತಿದ್ದರು ಕೆಲವೊಮ್ಮೆ ರಾತ್ರಿಯೂ ಅಲ್ಲೇ ಇರುತ್ತಿದ್ದರು ಎಂದು ಎಂದು ಬಹಿರಂಗಪಡಿಸಿದರು. ಅಂದಹಾಗೆ, ರಾಜಕಾರಣಿಗೆ ಸಂಬಂಧ ಹೊಂದಿದ ನಟಿಯರಲ್ಲಿ ಅರ್ಪಿತಾ ಮೊದಲನೇ ಅವರೇನು ಅಲ್ಲ. ಇನ್ನೂ ಅನೇಕ ಮಹಿಳಾ ಸೆಲೆಬ್ರಿಟಿಗಳು ರಾಜಕಾರಣಿಗಳ ಜೊತೆ ಅಫೇರ್ ಕಾರಣದಿಂದ ಸುದ್ದಿಯಲ್ಲಿದ್ದಾರೆ. ನಟಿಯೊಬ್ಬರ ಸೆಕ್ಸ್ ಚಾಟ್ ಕೂಡ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಬಿಪಾಶಾ ಬಸು ಅವರ ಹೆಸರು ಅವರಿಗಿಂತ ಸುಮಾರು 23 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ ಅಮರ್ ಸಿಂಗ್ ಜೊತೆ ಕೇಳಿಬಂದಿದೆ. ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸಂಸದ ದಿವಂಗತ ಅಮರ್ ಸಿಂಗ್ ಮತ್ತು ಬಿಪಾಶಾ ನಡುವಿನ ಆಡಿಯೋ ಸೆಕ್ಸ್ ಚಾಟ್ ಕೂಡ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆದರೆ, ಬಿಪಾಶಾ ಅದನ್ನು ಫೇಕ್ ಎಂದು ಕರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ಅವರು, 'ದಯವಿಟ್ಟು ಮೊದಲು ಸಂಭಾಷಣೆಯನ್ನು ಆಲಿಸುವಂತೆ ವಿನಂತಿಸಲಾಗಿದೆ. ಈಗಲೂ ಅದು ನಾನು ಎಂದು ನೀವು ಭಾವಿಸಿದರೆ ಅದನ್ನು ಸಾಬೀತುಪಡಿಸುವುದು ನನ್ನ ಮುಕ್ತ ಸವಾಲು' ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ ಅಮರ್ ಸಿಂಗ್ ಕೂಡ ಸಂಭಾಷಣೆಯಲ್ಲಿ 'ಇದು ನನ್ನ ಧ್ವನಿ ಎಂದು ನಾನು ನಿರಾಕರಿಸುವುದಿಲ್ಲ. ಆದರೆ ನಾನು ಮಹಿಳೆಯೊಂದಿಗೆ ಹಾಗೆ ಮಾತನಾಡುವುದಿಲ್ಲ. ನನಗೆ ವಯಸ್ಸಾಗಿದೆ. ನನಗೆ ಹುಡುಗಿಯರೊಂದಿಗೆ ಮಾತನಾಡಲು ಆಸಕ್ತಿ ಇಲ್ಲ. ಅವಳು ಬಿಪಾಶಾ ಅಲ್ಲ ಎಂದು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ' ಹೇಳಿದ್ದರು. ಈ ವಿವಾದ 2006ರಲ್ಲಿ ಬೆಳಕಿಗೆ ಬಂದಿತ್ತು.
90ರ ದಶಕದಲ್ಲಿ, ಸೋನಾಲಿ ಬೇಂದ್ರೆ ಅವರ ಹೆಸರು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅವರೊಂದಿಗೆ ಕೇಳಿಬಂದಿತ್ತು. ಇಬ್ಬರೂ ಒಟ್ಟಿಗೆ ನಗುವುದು ಮತ್ತು ಮಾತನಾಡುವ ಫೋಟೋ ವೈರಲ್ ಆಗಿತ್ತು. ಇಬ್ಬರೂ ಮದುವೆಯಾಗಬಹುದು ಎಂಬ ಚರ್ಚೆಯೂ ನಡೆದಿದೆ. ಆದರೆ ಸಾಧ್ಯವಾಗಲಿಲ್ಲ. ಈ ಸಂಬಂಧವನ್ನು ಇಬ್ಬರೂ ಅಧಿಕೃತವಾಗಿ ದೃಢಪಡಿಸಿರಲಿಲ್ಲ. ರಾಜ್ ಠಾಕ್ರೆ ರಾಜಕಾರಣಿಯಾಗುವ ಗೀಳನ್ನು ಹೊಂದಿದ್ದರು ಹಾಗಾಗಿಯೇ ಸೋನಾಲಿ ಜತೆಗಿನ ಸಂಬಂಧವನ್ನು ಅಲ್ಲಿಗೆ ನಿಲ್ಲಿಸುವುದು ಅಗತ್ಯ ಎಂದು ಅವರು ಭಾವಿಸಿದ್ದರು ಎನ್ನಲಾಗಿದೆ.
ದಿಗ್ವಿಜಯ್ ಸಿಂಗ್ ಮತ್ತು ಟಿವಿ ಪತ್ರಕರ್ತೆ ಅಮೃತಾ ರೈ ಅವರ ಸಂಬಂಧ ಸಾಕಷ್ಟು ಸುದ್ದಿ ಮಾಡಿತ್ತು. ದಿಗ್ವಿಜಯ್ ಸಿಂಗ್ ಅವರಿ ಗಿಂತ ಸುಮಾರು 25 ವರ್ಷ ಚಿಕ್ಕವರಾಗಿದ್ದ ಅಮೃತಾ ಅವರ ಜೊತೆ ಅತ್ಯಂತ ಆತ್ಮೀಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವಿಶೇಷವೆಂದರೆ ಈ ಸಂಬಂಧದ ಬಗ್ಗೆ ದಿಗ್ವಿಜಯ್ ಸಿಂಗ್ ಅಲ್ಲಗಳೆಯದೇ, ಅಮೃತಾ ಅವರನ್ನು ಎರಡನೇ ಮದುವೆಯಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರೆು.
ಕನ್ನಡ ಮತ್ತು ತೆಲುಗು ಚಿತ್ರರಂಗದ ನಟಿ ರಾಧಿಕಾ ಅವರು 2006 ರಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಮದುವೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. 35ರ ಹರೆಯದ ರಾಧಿಕಾ ಎಚ್‌ಡಿ ಕುಮಾರಸ್ವಾಮಿಗಿಂತ ಸುಮಾರು 27 ವರ್ಷ ಚಿಕ್ಕವರು. ಆರಂಭದಲ್ಲಿ ತಮ್ಮ ಮದುವೆಯನ್ನು ಗೌಪ್ಯವಾಗಿಟ್ಟಿದ್ದರು. ಆದರೆ ನಂತರ ಸಂದರ್ಶನವೊಂದರಲ್ಲಿ ಅವರು ಮದುವೆ ಮಾತ್ರವಲ್ಲದೆ, ಕುಮಾರಸ್ವಾಮಿಯವರಿಂದ ತನಗೆ ಮಗಳಿದ್ದಾಳೆ ಎಂದು ಬಹಿರಂಗಪಡಿಸಿದರು. ಕುಮಾರಸ್ವಾಮಿ ಆಗಾಗಲೇ ಮದುವೆಯಾಗಿ ಮಕ್ಕಳನ್ನು ಹೊಂದಿದ್ದರು.
14 ವರ್ಷಗಳಿಗೂ ಹೆಚ್ಚು ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಜಯಲಲಿತಾ ಅವರು ರಾಜಕೀಯ ಪ್ರವೇಶಿಸುವ ಮುನ್ನ ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ನಟಿಯಾಗಿದ್ದರು. ಅವರು ರಾಜಕಾರಣಿ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಮರುಧರ್ ಗೋಪಾಲಂ ರಾಮಚಂದ್ರನ್ (ಎಂಜಿಆರ್) ಅವರೊಂದಿಗೆ ಸಂಬಂಧ ಹೊಂದಿದ್ದ ಸಮಯದಲ್ಲಿ ಇಬ್ಬರ ಸಂಬಂಧವು ಬಹಳಷ್ಟು ಮುಖ್ಯಾಂಶಗಳನ್ನು ಮಾಡಿತು ಮತ್ತು ಎಂಜಿಆರ್ ಅವರ ಮರಣದ ನಂತರ, ಜಯಲಲಿತಾ ತಮಿಳುನಾಡಿನಲ್ಲಿ ಅವರ ಉತ್ತರಾಧಿಕಾರಿಯಾಗಿ ಹೊರಹೊಮ್ಮಿದರು. ಜಯಲಲಿತಾ ಎಂಜಿಆರ್‌ಗಿಂತ ಸುಮಾರು 31 ವರ್ಷ ಚಿಕ್ಕವರಾಗಿದ್ದರು. ಜಯಲಲಿತಾ ಅವರು ಎಂಜಿಆರ್ ಅವರೊಂದಿಗೆ ಹಲವಾರು ಚಿತ್ರಗಳನ್ನು ಮಾಡಿದ್ದು ಮಾತ್ರವಲ್ಲದೆ, ಎಂಜಿಆರ್ ಅವರ ರಾಜಕೀಯ ಮಾರ್ಗದರ್ಶಕರೂ ಆಗಿದ್ದರು.