ಮುದ್ದಾದ 'ರಾಧೆ-ಕೃಷ್ಣ' ಜೊತೆ ಅರ್ಜುನ್ ಸರ್ಜಾ ಕುಟುಂಬ; ಫೋಟೋ ವೈರಲ್
ಅರ್ಜುನ್ ಸರ್ಜಾ ಅವರಿಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿ. ಹಸುಗಳನ್ನು ಸಾಕುವುದೆಂದರೆ ಪ್ರಾಣ. ಅವರ ಮನೆಯಲ್ಲಿ ಗೋವುಗಳನ್ನು ಸಾಕಿದ್ದಾರೆ. ಅಲ್ಲದೇ, ನಿತ್ಯವೂ ಅವುಗಳ ಜೊತೆ ಒಂದಷ್ಟು ಹೊತ್ತು ಕಳೆಯುತ್ತಾರೆ.
ಬಹುಭಾಷಾ ನಟ ಅರ್ಜುನ್ ಸರ್ಜಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಫಿಟ್ ಅಂಡ್ ಫೈನ್ ನಟ ಅರ್ಜುನ್ ಸರ್ಜಾ ಫಿಟ್ನೆಸ್ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿರುತ್ತಾರೆ. ಸಿನಿಮಾ, ಕುಟುಂಬ ಅಂತ ಬ್ಯುಸಿಯಾಗಿರುವ ಸರ್ಜಾ ಇದೀಗ ತಮ್ಮ ಮನೆಯ ರಾಧೆ ಕೃಷ್ಣರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಅರ್ಜುನ್ ಸರ್ಜಾ ಅವರಿಗೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿ. ಹಸುಗಳನ್ನು ಸಾಕುವುದೆಂದರೆ ಪ್ರಾಣ. ಅವರ ಮನೆಯಲ್ಲಿ ಗೋವುಗಳನ್ನು ಸಾಕಿದ್ದಾರೆ. ಅಲ್ಲದೇ, ನಿತ್ಯವೂ ಅವುಗಳ ಜೊತೆ ಒಂದಷ್ಟು ಹೊತ್ತು ಕಳೆಯುತ್ತಾರೆ.
ಅರ್ಜುನ್ ಸರ್ಜಾ ಜೊತೆ ಅವರ ಮಕ್ಕಳು ಸಹ ಪ್ರಾಣಿ ಪ್ರೀಯರು. ಆಗಾಗ ಪ್ರಾಣಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಇತ್ತೀಚಿಗಷ್ಟೆ ಅರ್ಜುನ್ ಸರ್ಜಾ ಕುಟುಂಬ ನಾಯಿಯ ಜೊತೆ ಕುಳಿತು ಸಮಯ ಕಳೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.
ಇದೀಗ ಸರ್ಜಾ ಕುಟುಂಬ ಎರಡು ಪುಟ್ಟ ಕರುಗಳ ಫೋಟೋ ಹಂಚಿಕೊಂಡಿದೆ. ಅರ್ಜುನ್ ಸರ್ಜಾ ಮನೆಯಲ್ಲಿ ಎರಡು ಪುಟಾಣಿ ಕರುಗಳಿವೆ. ಆ ಕರುಗಳಿಗೆ ರಾಧೆ ಮತ್ತು ಕೃಷ್ಣ ಎಂದು ಹೆಸರಿಟ್ಟಿದ್ದಾರೆ. ರಾಧೆ ಮತ್ತು ಕೃಷ್ಣನನ್ನು ಮುದ್ದು ಮಾಡುತ್ತಿರುವ ಫೋಟೋವನ್ನು ನಟಿ ಐಶ್ವರ್ಯಾ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅರ್ಜುನ್ ಸರ್ಜಾ ಇಬ್ಬರು ಹೆಣ್ಣು ಮಕ್ಕಳು ಮುದ್ದಾದ ಕರುಗಳ ಜೊತೆ ಕುಳಿತು ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗಳೀಗ ಅಭಿಮಾನಿಗಳ ಗಮನ ಸೆೆಳೆಯುತ್ತಿವೆ.
ನಟಿ ಐಶ್ವರ್ಯಾ ಸರ್ಜಾ ಸಿನಿಮಾ ವಿಚಾರಗಳ ಬಗ್ಗೆ ಹೇಳುವುದಾದರೆ ಕೇವಲ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಎರಡು ಸಿನಿಮಾ ಮತ್ತು ಕನ್ನಡದಲ್ಲಿ ಒಂದು ಸಿನಿಮಾ ಮಾಡಿದ್ದಾರೆ. ಕನ್ನಡದಲ್ಲಿ ಪ್ರೇಮ ಬರಹ ಸಿನಿಮಾದಲ್ಲಿ ನಟಿಸಿದ್ದರು.
ಅರ್ಜುನ್ ಸರ್ಜಾ ಕುರುಕ್ಷೇತ್ರ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದರು. ಬಳಿಕ ಮತ್ತೆ ಅರ್ಜುನ್ ಅವರನ್ನು ಕನ್ನಡದಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯ ಒಂದು ತಮಿಳು ಮತ್ತು ಒಂದು ಮಲಯಾಳಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.