ಮಲೈಕಾ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ಅರ್ಜುನ್; ಪ್ಯಾರಿಸ್‌ನಲ್ಲಿ ಬರ್ತಡೇ ಸಂಭ್ರಮಿಸಿದ ಲವ್ ಬರ್ಡ್ಸ್
ಅರ್ಜುನ್ ಕಪೂರ್ ತನ್ನ ಪ್ರೇಯಸಿ ಮಲೈಕಾ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅರ್ಜುನ್ ಹಂಚಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಜೋಡಿ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ.
ಬಾಲಿವುಡ್ ಸ್ಟಾರ್ ಅರ್ಜುನ್ ಕಪೂರ್ ಅವರಿಗೆ ಇಂದು (ಜೂನ್ 26) ಹುಟ್ಟುಹಬ್ಬದ ಸಂಭ್ರಮ. ಅರ್ಜುನ್ ಕಪೂರ್ ತನ್ನ ಹುಟ್ಟುಹಬ್ಬವನ್ನು ಪ್ರೇಯಸಿ ಮಲೈಕಾ ಅರೋರಾ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಮಲೈಕಾ ಮತ್ತು ಅರ್ಜುನ್ ಜೋಡಿ ಎರಡು ದಿನಗಳ ಮುಂಚೆಯೇ ಪ್ಯಾರಿಸ್‌ಗೆ ಹಾರಿತ್ತು.
ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಪ್ರೀತಿಯ ಗುಟ್ಟಾಗಿ ಉಳಿದಿಲ್ಲ. ಮಲೈಕಾ ಪತಿ ಅರ್ಬಾಜ್ ಖಾನ್‌ಗೆ ವಿಚ್ಛೇದನ ನೀಡಿದ ಬಳಿಕ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ನಲ್ಲಿದ್ದಾರೆ. ಇಬ್ಬರು ಸದಾ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಮದುವೆ ಬಗ್ಗೆ ಕೇಳಿದರೇ ಯಾವುದೇ ಪ್ರತಿಕ್ರಿಯೆ ನೀಡದೆ ನುಣುಚಿಕೊಳ್ಳುತ್ತಾರೆ.
ಇದೀಗ ಹುಟ್ಟುಹಬ್ಬದ ದಿನ ಅರ್ಜುನ್ ಮತ್ತು ಮಲೈಕಾ ಇಬ್ಬರೂ ಫೋಟೋ ಶೇರ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ. ಅರ್ಜುನ್ ಕಪೂರ್ ತನ್ನ ಪ್ರೇಯಸಿ ಮಲೈಕಾ ಜೊತೆಗಿನ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಅರ್ಜುನ್ ಕಪೂರ್ ಜೊತೆ ಮಲೈಕಾ ಆಪ್ತವಾಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅರ್ಜುನ್ ಹಂಚಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಜೋಡಿ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ.
ಎರಡು ದಿನಗಳ ಮುಂಚೆಯೇಅರ್ಜುನ್-ಮಲೈಕಾ ಜೋಡಿ ವಿದೇಶಕ್ಕೆ ಹಾರಿದ್ದರು. ಏರ್ಪೋಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿಯ ಫೋಟೋಗಳು ವೈರಲ್ ಆಗಿತ್ತು.ಆದರೆ ಎಲ್ಲಿಗೆ ಹೋಗುತ್ತಿದ್ದಾರೆ ಎನ್ನುವ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಇದೀಗ ಫೋಟೋ ಶೇರ್ ಮಾಡಿ ಪ್ಯಾರಿಸ್‌ನಲ್ಲಿ ಇರುವುದಾಗಿ ಹೇಳಿದ್ದಾರೆ.
ಅರ್ಜುನ್ ಕಪೂರ್ 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬವನ್ನು ಪ್ರೇಯಸಿ ಜೊತೆ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಅರ್ಜುನ್ ಕಪೂರ್ ಜೊತೆ ವಿದೇಶಕ್ಕೆ ಬಂದು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಅದ್ದೂರಿ ಗಿಫ್ಟ್ ನೀಡಿದ್ದಾರೆ.
ಅರ್ಜುನ್ ಕಪೂರ್ ಬಾಲಿವುಡ್‌ನಲ್ಲಿ 10 ವರ್ಷ ಪೂರೈಸಿದ್ದಾರೆ. ಇಶಾಕ್ ಜಾದೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾಗೆ 10 ವರ್ಷದ ಸಂಭ್ರಮ. ಸದ್ಯ ಅರ್ಜುನ್ ಕಪೂರ್ ಏಕ್ ವಿಲನ್ ರಿಟರ್ನ್ ಸಿನಿಮಾದಲ್ಲಿ ನಟಿಸಿದ್ದು ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಜೊತೆಗೆ ಇನ್ನು ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.