ಮೊದಲ ಮಗುವಿನ ನಿರೀಕ್ಷೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹೀರೋಯಿನ್!
ಬಾಲಿವುಡ್ ಕಿರುತೆರೆಯ ಮೋಸ್ಟ್ ಕ್ಯೂಟೆಸ್ಟ್ ಜೋಡಿಗಳಲ್ಲಿ ಪ್ರಿನ್ಸ್ ನರುಲಾ ಮತ್ತು ಯುವಿಕಾ ಚೌಧರಿ ಕೂಡ ಒಂದು. ಮದುವೆಯಾಗಿ 6 ವರ್ಷಗಳ ಬಳಿಕ ಜೋಡಿ ಈಗ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದೆ.

ಆರು ವರ್ಷಗಳ ಹಿಂದೆ ಅಕ್ಟೋಬರ್ 12, 2018 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಮಿಡಿ ವಿಡಿಯೋವನ್ನು ಹಾಕುತ್ತಿರುತ್ತಾರೆ.
ಇತ್ತೀಚೆಗೆ ಭಾರ್ತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಿನ್ಸ್ ಕಾಣಿಸಿಕೊಂಡರು. ಅಲ್ಲಿ ಯುವಿಕಾ ಮತ್ತು ನೀವು ಯಾವಾಗ ಸಿಹಿ ಸುದ್ದಿ ಕೊಡುತ್ತೀರಿ ಎಂದು ಪ್ರಶ್ನೆ ಕೇಳಲಾಯ್ತು. ಇದಕ್ಕೆ ಯೋಚಿಸಿ ಉತ್ತರಿಸಿದ ಪ್ರಿನ್ಸ್ "ಬಹುಬೇಗನೆ" ಅಂದ ಉತ್ತರಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು.
ಕೂಡಲೇ ಹರ್ಷ್ ತುಂಬಾ ಯೋಚಿಸಿ ಉತ್ತರ ಕೊಟ್ಟಿರುವುದ್ಯಾಕೆ ಎಂದು ಪ್ರಿನ್ಸ್ ಬಳಿ ಕೇಳಿದಾಗ ನಾನು ಮತ್ತು ಯುವಿಕಾ ಬಹಳ ಸಮಯದಿಂದ ಮಗು ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇವೆ. ಮುಂಬೈನಲ್ಲಿ ಸ್ವಂತ ಮನೆ ಹೊಂದಿದ ಬಳಿಕವೇ ಮಗು ಮಾಡಿಕೊಳ್ಳುವುದು ನಮ್ಮ ಯೋಚನೆಯಾಗಿತ್ತು ಎಂದರು.
ಪ್ರಿನ್ಸ್ ನರುಲಾ ಮತ್ತು ಯುವಿಕಾ ಚೌಧರಿ ಜನವರಿ 2024ರಲ್ಲಿ ಮುಂಬೈನಲ್ಲಿ ತಮ್ಮ ಮೊದಲ ಮನೆಯನ್ನು ಖರೀದಿಸಿದರು. ಈ ಬಗ್ಗೆ ಫೋಟೋವನ್ನು ಹಂಚಿಕೊಂಡಿದ್ದರು.
ಈ ಹಿಂದೆ ಸಂದರ್ಶನವೊಂದರಲ್ಲಿ ಯುವಿಕಾ, ನಾವು ಮದುವೆಯಾದಾಗಿನಿಂದ ಪ್ರಿನ್ಸ್ ಮಕ್ಕಳನ್ನು ಹೊಂದಲು ಯೋಜಿಸುತ್ತಿದ್ದಾರೆ. ಆದರೆ ಈ ರೀತಿಯ ವಿಷಯಗಳು ದೇವರ ಕೈಯಲ್ಲಿವೆ ಮತ್ತು ನಾವು ಅದರ ಬಗ್ಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಮಗುವನ್ನು ಹೊಂದುವ ಸಾಮಾಜಿಕ ಒತ್ತಡವೂ ಹೆಚ್ಚಾಗಿರುತ್ತದೆ ಎಂದು ಬಹಿರಂಗಪಡಿಸಿದ್ದರು.
ಪ್ರಿನ್ಸ್ ನರುಲಾ ಮತ್ತು ಯುವಿಕಾ ಚೌಧರಿ ತಂದೆ - ತಾಯಿಯಾಗುತ್ತಿರುವ ಬಗ್ಗೆ ಅಧಿಕೃತ ಘೊಷಣೆ ಮಾಡುವ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಪ್ರಿನ್ಸ್ ನರುಲಾ ಮತ್ತು ಯುವಿಕಾ ಚೌಧರಿ ಹೆಚ್ಚು ಇಷ್ಟಪಡುವ ಟಿವಿ ಜೋಡಿಗಳಲ್ಲಿ ಒಬ್ಬರು. ಇಬ್ಬರೂ ಬಿಗ್ ಬಾಸ್ 9 ಸೀಸನ್‌ನಲ್ಲಿ ಭೇಟಿಯಾಗಿ ಪರಸ್ಪರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಬಿಗ್‌ಬಾಸ್ ನಿಂದ ಹೊರಬಂದ ನಂತರ ವರ್ಷಗಳ ಡೇಟಿಂಗ್ ನಲ್ಲಿದ್ದು, ಬಳಿಕ ಮದುವೆಯಾದರು.
ಪ್ರಿನ್ಸ್ ನರುಲಾ MTV ರೋಡೀಸ್ X2 ವಿಜೇತ, ಬಿಗ್‌ಬಾಸ್ 9 ವಿಜೇತ, ಸ್ಲಿಟ್ಸ್‌ವಿಲ್ಲಾ 8ರ ವಿಜೇತ. ಹೀಗಾಗಿ ಅವರನ್ನು ರಿಯಾಲಿಟಿ ಶೋಗಳ ಕಿಂಗ್ ಎಂದೂ ಕರೆಯುತ್ತಾರೆ. ಇನ್ನು ನಟಿ ಯುವಿಕಾ ಚೌಧರಿ ಅವರು ಶಾರುಖ್ ಖಾನ್ ಅಭಿನಯದ ಓಂ ಶಾಂತಿ ಓಂ ಚಿತ್ರದಲ್ಲಿ ಜನಪ್ರಿಯರಾಗಿದ್ದಾರೆ. ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರ ತಮ್ಮ ಪತಿ ಪ್ರಿನ್ಸ್ ನರುಲಾ ಅವರೊಂದಿಗೆ ನೃತ್ಯ ರಿಯಾಲಿಟಿ ಶೋ ನಚ್ ಬಲಿಯೆ 9 ನಲ್ಲಿ ಭಾಗವಹಿಸಿ ವಿಜೇತರಾಗಿ ಹೊರಹೊಮ್ಮಿದರು. ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ನಟ ಗಣೇಶ್ ಮಳೆಯಲಿ ಜೊತೆಯಲಿ ಸಿನೆಮಾದಲ್ಲಿ ನಾಯಕಿಯಾಗದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.