Nayanthara Marriage: ರಹಸ್ಯವಾಗಿ ಮದುವೆಯಾದ್ರಾ ನಯನತಾರಾ-ವಿಘ್ನೇಶ್.. ಫ್ಯಾನ್ಸ್ ಕಂಡ ಡಿಫರೆನ್ಸ್!
ಚೆನ್ನೈ(ಮಾ 15) ದಕ್ಷಿಣ ಭಾರತದ ತಾರೆ ನಯನತಾರ( Nayanthara) ಕೊನೆಗೂ ಮದುವೆಯ ಸುದ್ದಿ ಕೊಟ್ಟಿದ್ದಾರೆ. ಬಾಯ್‍ಫ್ರೆಂಡ್ ವಿಘ್ನೇಶ್ ಶಿವನ್ (Vignesh Shivan) ಜತೆ ಕಾಣಿಸಿಕೊಳ್ಳುತ್ತಿದ್ದ ನಯನಾ ದಾಂಪತ್ಯ (Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದಾರೆ (Social Media) ಎನ್ನುವುದು ಹಾಟ್ ಟಾಪಿಕ್
ನಯನತಾರಾ ಮತ್ತು ವಿಘ್ನೇಶ್ ಚೆನ್ನೈನ ದೇವಾಲಯವೊಂದಜ್ಜೆ ಜತೆಯಾಗಿ ಭೇಟಿ ನೀಡಿರುವ ಪೋಟೋಗಳು ಮದುವೆ ಕತೆ ಹೇಳುತ್ತಿವೆ. ಕಾಳಿಗಂಬಾಳ್ ದೇವಸ್ಥಾನಕ್ಕೆ ಜೋಡಿ ಭೇಟಿ ನೀಡಿರುವ ಚಿತ್ರಗಳು ವೈರಲ್ ಆಗುತ್ತವೆ.
ಅಭಿಮಾನಿಗಳು ಈ ಚಿತ್ರವನ್ನು ಬಹಳ ಗಂಭೀರವಾಗಿ ಗಮನಿಸಿದ್ದಾರೆ. ನಯನತಾರಾ ಸಿಂಧೂರ ಧರಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಅಭಿಮಾನಿಗಳು ನಯನತಾರಾ ಮತ್ತು ವಿಘ್ನೇಶ್ ದಾಂಪತ್ಯ ಜೀವನದ ಶುಭ ಕೋರಿದ್ದಾರೆ.
ಜೋಡಿ ಭೇಟಿ ನೀಡಿದ ಸಂದರ್ಭ ಅಭಿಮಾನಿಗಳು ಮುತ್ತಿಗೆ ಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ನಟಿ ಹಣೆಯ ಮೇಲೆ ಸಿಂಧೂರ ಗಮನಿಸಿ "ಹ್ಯಾಪಿ ಮ್ಯಾರಿಡ್ ಲೈಫ್ ಟು ಯು ಡಿಯರ್." "ಸುಂದರ ಜೋಡಿ ದೇವರು ಆಶೀರ್ವದಿಸಲಿ", "ಮದುವೆಯಾದ್ರಾ ಹೀಗೆ ಹಾರೈಕೆಯೊಂದಿಗೆ ತರೇವಾರಿ ಕಮೆಂಟ್ ಗಳು ಹರಿದು ಬಂದಿವೆ.
ನಯನತಾರಾ ಮತ್ತು ವಿಘ್ನೇಶ್ ಶಿವನ್ ರಿಲೇಶನ್ ಶಿಪ್ ನಲ್ಲಿ ಇದ್ದು ಸರಿ ಸುಮಾರು ಏಳು ವರ್ಷಗಳೇ ಸಂದಿವೆ. ಕಾಲಿವುಡ್ ನ ಸ್ಟಾರ್ ಕಪಲ್ ಎಂದೇ ಜೋಡಿ ಫೆಮಸ್. ಈ ಹಿಂದೆ ಕೆಲವು ಬೀಚ್ ಚಿತ್ರಗಳನ್ನು ಹಂಚಿಕೊಂಡಿದ್ದರು.
ಹೊಸ ಸಿನಿಮಾ 'ಕಾತುವಾಕುಲ ರೆಂದು ಕಾದಲ್' ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದು ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ, ಇದರಲ್ಲಿ ವಿಜಯ್ ಸೇತುಪತಿ ಮತ್ತು ಸಮಂತಾ ಕೂಡ ಇದ್ದಾರೆ.
ಕೆಲ ವರ್ಷಗಳ ಹಿಂದೆ ನಯನಾತಾರಾ ಹೆಸರು, ನಟ, ನಿರ್ದೇಶಕ ಪ್ರಭುದೇವ ಜತೆ ಕೇಳಿಬಂದಿತ್ತು. ಇಬ್ಬರು ಮದುವೆಯಾಗುವ ಹಂತಕ್ಕೆ ಹೋಗಿದ್ದಾರೆ ಎನ್ನಲಾಗಿತ್ತು .