ಅನುಷ್ಕಾ ಶರ್ಮಾ - ವಿರಾಟ್ ಕೊಹ್ಲಿಯ 32 ಕೋಟೆಯ ಭವ್ಯ ಹಾಲಿಡೆ ಹೋಮ್… ಬಂಗಲೆಯ ವೈಭವ ನೋಡಿ
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ದಂಪತಿಗಳು ಆಲಿಬಾಗ್ ನಲ್ಲಿ ಭವ್ಯವಾದ ಹಾಲಿಡೇ ಹೋಮ್ ನಿರ್ಮಾಣ ಮಾಡಿದ್ದು, ಲಕ್ಸುರಿ ಬಂಗಲೆಯ ಭವ್ಯ ನೋಟ ಇಲ್ಲಿದೆ.
ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ಮಂಗಳವಾರ ಬೆಳಿಗ್ಗೆ ಅಲಿಬಾಗ್ನಲ್ಲಿರುವ ತಮ್ಮ ಹಾಲಿಡೇ ಹೋಂ ಗೆ ಲಂಡನ್ ನಿಂದ ಮರಳಿದ್ದಾರೆ. ಭಾರತದ ಮಾಜಿ ನಾಯಕ ಈ ಹಿಂದೆ ಮುಂಬೈನ ಗೇಟ್ ವೇ ಆಫ್ ಇಂಡಿಯಾ ಜೆಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ವಿರಾಟ್ ಕೊಹ್ಲಿ ಅವರೊಂದಿಗೆ ಪತ್ನಿ ಅನುಷ್ಕಾ ಶರ್ಮಾ ಕೂಡ ಇದ್ದರು. ಬೋಟಿಂಗ್ ಮಾಡುವ ಬೀಚ್ ನಲ್ಲಿ ಎಂಜಾಯ್ ಮಾಡಿದ ಬಳಿಕ ಇಬ್ಬರೂ ಅಲಿಬಾಗ್ನಲ್ಲಿರುವ ತಮ್ಮ ಹೊಸ ಐಷಾರಾಮಿ ಹಾಲಿಡೇ ಹೋಮ್ ಗೆ ಮರಳಿದ್ದಾರೆ.
ಹೌದು ಸದ್ಯ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ (Anushka Sharma) ಮುಂಬೈನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ. ಅದಕ್ಕಾಗಿಯೇ ಸಿಟಿಯಿಂದ ದೂರ ಇರುವ ಅಲಿಬಾಗ್ ನಲ್ಲಿ ಭವ್ಯ ಬಂಗಲೆ ನಿರ್ಮಿಸಿದ್ದಾರೆ. ಇದರ ಬೆಲೆ 34 ಕೋಟಿ ರೂ. ಕೊಹ್ಲಿ ಮತ್ತು ಅನುಷ್ಕಾ ಅವರ ಹಾಲಿಡೇ ಹೋಮ್ ಅನ್ನು 8 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ.
ಆರ್ಕಿಟೆಕ್ಚರಲ್ ಡೈಜೆಸ್ಟ್ ಪ್ರಕಾರ, ಕೊಹ್ಲಿ ಮತ್ತು ಅನುಷ್ಕಾ ಅವರ ಹಾಲಿಡೇ ಹೋಮ್ ಅನ್ನು ಫಿಲಿಪ್ ಫೌಚೆ ನೇತೃತ್ವದ ಸ್ಟೀಫನ್ ಆಂಟೋನಿ ಒಲ್ಮೆಸ್ಡಾಲ್ ಟ್ರುಯೆನ್ ಆರ್ಕಿಟೆಕ್ಟ್ಸ್ (SAOTA) ನಿರ್ಮಿಸಿದೆ. ಕೊಹ್ಲಿ ಮತ್ತು ಅನುಷ್ಕಾ ಅವರ ಹಾಲಿಡೇ ಹೋಮ್ ಅನ್ನು 8 ಎಕರೆ ಪ್ಲಾಟ್ನಲ್ಲಿ ನಿರ್ಮಿಸಲಾಗಿದೆ, ಇದನ್ನು ದಂಪತಿಗಳು 2022 ರಲ್ಲಿ ಸುಮಾರು 19 ಕೋಟಿ ರೂ.ಗೆ ಖರೀದಿಸಿದ್ದರು.
ಸುಮಾರು 10,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ವಿಲ್ಲಾದಲ್ಲಿ (Holiday Home) ತಾಪಮಾನ ನಿಯಂತ್ರಿತ ಕೊಳ, ವಿಶೇಷ ಅಡುಗೆಮನೆ, ನಾಲ್ಕು ಸ್ನಾನಗೃಹಗಳು, ವಿಶಾಲವಾದ ಉದ್ಯಾನ, ಕವರ್ಡ್ ಪಾರ್ಕಿಂಗ್, ಸಿಬ್ಬಂದಿ ವಸತಿಗೃಹಗಳು ಹಾಗೂ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಾಣಬಹುದು. ಇದೀಗ ವಿರಾಟ್ -ಅನುಷ್ಕಾರ ಹಾಲಿಡೇ ಹೋಮ್ ನ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ವಿಲ್ಲಾದ ಬೆಲೆ 34 ಕೋಟಿ ರೂ.
ಈ ಸುಂದರವಾದ ವಿಲ್ಲಾವನ್ನು ಇಟಾಲಿಯನ್ ಅಮೃತಶಿಲೆ, ಪ್ರಾಚೀನ ಕಲ್ಲು ಮತ್ತು ಟರ್ಕಿಶ್ ಸುಣ್ಣದ ಕಲ್ಲುಗಳಿಂದ ನಿರ್ಮಾಣ ಮಾಡಲಾಗಿದೆ. ವರದಿಗಳ ಪ್ರಕಾರ, ಕೊಹ್ಲಿ ವಿಲ್ಲಾ ನಿರ್ಮಾಣಕ್ಕಾಗಿ 10.5 ಕೋಟಿಯಿಂದ 13 ಕೋಟಿ ರೂ.ವರೆಗೆ ಖರ್ಚು ಮಾಡಿದ್ದಾರೆ. ಪ್ರಸ್ತುತ ವಿರಾಟ್ ಕೊಹ್ಲಿ ಮತ್ತು ಅವರ ಕುಟುಂಬ ಮುಂಬೈನಲ್ಲಿ 7,171 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಮನೆಯಲ್ಲಿ (luxury home) ವಾಸಿಸುತ್ತಿದ್ದಾರೆ. ಇದರ ಬೆಲೆ 34 ಕೋಟಿ ರೂ. ಇದಲ್ಲದೆ, ಕೊಹ್ಲಿ ಗುರುಗ್ರಾಮದಲ್ಲಿ 80 ಕೋಟಿ ರೂ.ಗಳ ಬಂಗಲೆಯನ್ನು ಸಹ ಹೊಂದಿದ್ದಾರೆ.
ವಿಲ್ಲಾ ಸ್ಪೆಷಾಲಿಟಿ ಏನು?
ಕೊಹ್ಲಿ ಮತ್ತು ಅನುಷ್ಕಾ ಅವರ ಹಾಲಿಡೇ ಹೋಮ್ ಅನ್ನು 8 ಎಕರೆ ಪ್ಲಾಟ್ನಲ್ಲಿ ನಿರ್ಮಿಸಲಾಗಿದೆ.
ಈ ವಿಲ್ಲಾ 10,000 ಚದರ ಅಡಿ ವಿಸ್ತೀರ್ಣದಲ್ಲಿದೆ.
ತಾಪಮಾನ ನಿಯಂತ್ರಿತ ಕೊಳ
ವಿಶೇಷ ಅಡುಗೆಮನೆ
ನಾಲ್ಕು ಸ್ನಾನಗೃಹಗಳು
ಜಕುಝಿ (Jacuzzi)
ವಿಶಾಲವಾದ ಉದ್ಯಾನವನ
ಕವರ್ಡ್ ಪಾರ್ಕಿಂಗ್
ಸಿಬ್ಬಂದಿ ವಸತಿಗೃಹಗಳು
ಲಂಡನ್ ಗೆ ಸ್ಥಳಾಂತರಗೊಳ್ಳಲಿರುವ ವಿರುಷ್ಕಾ
ಕೊಹ್ಲಿ ಮತ್ತು ಅನುಷ್ಕಾ ತಮ್ಮ ಕುಟುಂಬ ಸಮೇತ ಸಂಪೂರ್ಣವಾಗಿ ಲಂಡನ್ ಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂಬ ವರದಿಗಳು ಕೇಳಿ ಬರುತ್ತಿವೆ. ಏಕೆಂದರೆ ವಿರಾಟ್ ಕ್ರಿಕೆಟ್ನಿಂದ ನಿವೃತ್ತರಾಗಲು ನಿರ್ಧರಿಸಿದ್ದಾರೆ. ಕೊಹ್ಲಿ ಬಗ್ಗೆ ಹೇಳೊದಾದರೆ, ಸ್ಟಾರ್ ಬ್ಯಾಟ್ಸ್ಮನ್ (Star Batsman) ಆಸ್ಟ್ರೇಲಿಯಾ ಪ್ರವಾಸದಲ್ಲಿ ತುಂಬಾ ಕಳಪೆ ಪ್ರದರ್ಶನ ನೀಡಿದ್ದರು, ಒಂಬತ್ತು ಇನ್ನಿಂಗ್ಸ್ಗಳಲ್ಲಿ ಕೇವಲ 190 ರನ್ ಗಳಿಸಿದರು. ನವೆಂಬರ್ ನಲ್ಲಿ ಪರ್ತ್ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಅವರು ಏಕೈಕ ಶತಕವನ್ನು ಗಳಿಸಿದರು. ಐದು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಆಫ್-ಸ್ಟಂಪ್ನ ಹೊರಗೆ ಎಸೆತಗಳಲ್ಲಿ ಔಟಾಗುತ್ತಿರುವುದು ಕಂಡುಬಂದಿದೆ.
ಡೆಲ್ಲಿ ಪರ ರಣಜಿ ಪಂದ್ಯ ಆಡಬಹುದು
ಏತನ್ಮಧ್ಯೆ, ರಣಜಿ ಟ್ರೋಫಿಯ (Ranaji Trophy) ಕೊನೆಯ ಎರಡು ಪಂದ್ಯಗಳಿಗೆ ಕೊಹ್ಲಿಯನ್ನು ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಸಂಭಾವ್ಯರ ಪಟ್ಟಿಯಲ್ಲಿ ಸೇರಿಸಿದೆ. ಆದಾಗ್ಯೂ, ಅವರು ಎರಡೂ ಪಂದ್ಯಗಳಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ. ಟೆಸ್ಟ್ ಆಟಗಾರರಿಗೆ ಸಾಧ್ಯವಾದಾಗಲೆಲ್ಲಾ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಭಾಗವಹಿಸುವ ಮಹತ್ವವನ್ನು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಒತ್ತಿ ಹೇಳಿದ ನಂತರ ಈ ಬೆಳವಣಿಗೆ ನಡೆದಿದೆ.