- Home
- Entertainment
- Cine World
- ಸೂಪರ್ ಹಿಟ್ 'ಪ್ರೇಮಂ' ಸಿನಿಮಾದ ನೆನಪಲ್ಲಿ ನಟಸಾರ್ವಭೌಮ ನಟಿ; ಫೋಟೋ ಹಂಚಿಕೊಂಡ ಅನುಪಮಾ
ಸೂಪರ್ ಹಿಟ್ 'ಪ್ರೇಮಂ' ಸಿನಿಮಾದ ನೆನಪಲ್ಲಿ ನಟಸಾರ್ವಭೌಮ ನಟಿ; ಫೋಟೋ ಹಂಚಿಕೊಂಡ ಅನುಪಮಾ
ಮಲಯಾಳಂ ಖ್ಯಾತ ನಟಿ ಅನುಪಮಾ ಪರಮೇಶ್ವರ್ ಪ್ರೇಮಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅಂದಹಾಗೆ ಈ ಸಿನಿಮಾ ಬಿಡುಗಡೆಯಾಗೆ 7 ವರ್ಷಗಳ ಕಳೆದಿವೆ. ಸೂಪರ್ ಹಿಟ್ ಸಿನಿಮಾದ ನೆನಪನ್ನು ನಟಿ ಅನು ಪಮಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಮಲಯಾಳಂ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಪ್ರೇಮಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅಂದಹಾಗೆ ಈ ಸಿನಿಮಾ ಬಿಡುಗಡೆಯಾಗೆ 7 ವರ್ಷಗಳ ಕಳೆದಿವೆ. ಸೂಪರ್ ಹಿಟ್ ಸಿನಿಮಾದ ನೆನಪನ್ನು ನಟಿ ಅನುಪಮಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
2015, ಮೇ 29ರಂದು ತೆರೆಗೆ ಬಂದ ಪ್ರೇಮ್ ಸಿನಿಮಾ ಮಲಯಾಳಂ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಿಂದನೂ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಸಿನಿಮಾ ಮೂಲಕ ನಟಿ ಸಾಯಿ ಪಲ್ಲವಿ ಕೂಡ ಚಿತ್ರಾಭಿಮಾನಿಗಳ ಮುಂದೆ ಬಂದರು. ನಿವಿನ್ ಪೌಲಿ ನಾಯಕನಾಗಿ ಕಾಣಿಸಿಕೊಂಡಿದ್ದರು.
ಚೊಚ್ಚಲ ಸಿನಿಮಾದ ನೆನಪನ್ನು ನಟಿ ಅನುಪಮಾ ಪರಮೇಶ್ವರನ್ ಹಂಚಿಕೊಂಡಿದ್ದಾರೆ. ಸಿನಿಮಾದ ಫೋಟೋಗಳನ್ನು ಶೇರ್ ಮಾಡುವ ಮೂಲಕ ಅನುಪಮಾ ಹಳೆಯ ನೆನಪಿಗೆ ಜಾರಿದ್ದಾರೆ. ಸುಂದರ ಫೋಟೋಗಳ ಜೊತೆಗೆ 7 ವರ್ಷಗಳ ಪ್ರೇಮಂ ಸಿನಿಮಾ ಎಂದು ಹೇಳಿದ್ದಾರೆ.
ಈ ಸಿನಿಮಾ ಮೂಲಕ ನಟಿ ಸಾಯಿ ಪಲ್ಲವಿ ಮತ್ತು ಅನುಪಮಾ ಪರಮೇಶ್ವರನ್, ಮಡೋನಾ ಸ್ಟಾರ್ ನಟಿಯರಾಗಿ ಹೊರಹೊಮ್ಮಿದರು. ಸಿನಿಮಾದ ಕಥೆ, ನಿರ್ದೇಶನ, ಹಾಡುಗಳು ಅಭಿಮಾನಿಗಳ ಹೃದಯ ಗೆದ್ದಿತ್ತು.
ನಟಿ ಅನುಪಮಾ ಪರಮೇಶ್ವರನ್ ಮಲಯಾಳಂ ಸಿನಿಮಾ ಬಳಿಕ ಬೇರೆ ಬೇರೆ ಭಾಷೆಗಳಲ್ಲೂ ಮಿಂಚಿದರು. ಅಂದಹಾಗೆ ಕನ್ನಡದಲ್ಲೂ ಅನುಪಮಾ ಬಣ್ಣ ಹಚ್ಚುವ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾದಲ್ಲಿ ನಾಯಕಿಯಾಗಿ ಅನುಪಮಾ ಕಾಣಿಸಿಕೊಂಡಿದ್ದರು. ಈ ಮೂಲಕ ಅನುಪಮಾ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಅನುಪಮಾ ಪರಮೇಶ್ವರನ್ ಪ್ರೇಮಂ ಸಿನಿಮಾದ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಅಭಿಮಾನಿಗಳಿಂದ ಈ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ.
ಅನುಪಮಾ ಸದ್ಯ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 18ಪೇಜ್, ಕಾರ್ತಿಕೇಯ 2, ಬಟರ್ ಫ್ಲೈ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.