- Home
- Entertainment
- Cine World
- ಬೆಡ್ ರೂಂನಲ್ಲಿ ಬರ್ತ್‌ಡೇ ಆಚರಿಸಿಕೊಂಡ ಪುಷ್ಪಾ ನಟಿ: ಇದ್ಯಾವ ಸೀಮೆ ಸೆಲೆಬ್ರೇಷನ್ ಎಂದ ಫ್ಯಾನ್ಸ್!
ಬೆಡ್ ರೂಂನಲ್ಲಿ ಬರ್ತ್‌ಡೇ ಆಚರಿಸಿಕೊಂಡ ಪುಷ್ಪಾ ನಟಿ: ಇದ್ಯಾವ ಸೀಮೆ ಸೆಲೆಬ್ರೇಷನ್ ಎಂದ ಫ್ಯಾನ್ಸ್!
ಟಾಲಿವುಡ್ ಫೇಮಸ್ ನಟಿ, ನಿರೂಪಕಿ ಅನಸೂಯಾ ಭಾರದ್ವಾಜ್ ತಮ್ಮ 39ನೇ ಹುಟ್ಟುಹಬ್ಬವನ್ನು ನಿನ್ನೆಯಷ್ಟೇ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಕತಾಣದಲ್ಲಿ ವೈರಲ್ ಆಗುತ್ತಿವೆ.

ತೆಲುಗು ಪುಷ್ಪಾ ಸಿನಿಮಾ ಖ್ಯಾತಿಯ ನಟಿ ಅನಸೂಯಾ ಭಾರದ್ವಾಜ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಸೌಂದರ್ಯ ಪ್ರದರ್ಶಿಸುವ ಮೂಲಕ ಸಾಕಷ್ಟು ಫ್ಯಾನ್ ಪಾಲೋಯಿಂಗ್ ಹೊಂದಿದ್ದಾರೆ. ಆಗಾಗ ಹೊಸ ಫೋಟೋಶೂಟ್ ಮೂಲಕ ನೆಟ್ಟಿಗರ ಗಮನಸೆಳೆಯುತ್ತಿರುತ್ತಾರೆ.
ಜಬರ್ದಸ್ತ್ ಖ್ಯಾತಿಯ ನಿರೂಪಿಕಿ ಅನಸೂಯಾ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಟ್ರೆಂಡ್ ಮುಂದುವರೆಸಿದ್ದಾರೆ. ಸ್ಮಾಲ್ ಸ್ಕ್ರೀನ್‌ನಲ್ಲಿ ಹಲವು ಶೋಗಳನ್ನು ಮಾಡುವ ಮೂಲಕ ವಿಶೇಷ ಮನ್ನಣೆ ಗಳಿಸಿರುವ ಈ ಚೆಲುವೆ ಇದೀಗ ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ.
ಸದ್ಯ 39ನೇ ಹುಟ್ಟುಹಬ್ಬವನ್ನು ಅನಸೂಯಾ ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಬೆಡ್ ರೂಂನಲ್ಲಿ ತೆಗೆದ ಫೋಟೋಗಳ ಜೊತೆಗೆ, ತಮ್ಮ ಪತಿ ಜೊತೆಗಿರುವ ರೊಮ್ಯಾಂಟಿಕ್ ಚಿತ್ರಗಳನ್ನು ಸಹ ನಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಅನಸೂಯ ಹುಟ್ಟು ಹಬ್ಬದ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಸುಂದರಿ ಅನಸೂಯಾ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಹುಟ್ಟು ಹಬ್ಬದ ವಿಶ್ ಜೊತೆ ಹಾಟ್ ಅಂತ ಕಾಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಪುಷ್ಪಾ 2 ಚಿತ್ರದಲ್ಲಿರುವ ನಟಿಯ ಫಸ್ಟ್ ಲುಕ್ ಸಹ ಬಿಡುಗೆಯಾಗಿದೆ. ದಾಕ್ಷಾಯಿಣಿ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು, ಅಭಿಮಾನಿಗಳು ಫಸ್ಟ್ ಲುಕ್‌ಗೆ ಫಿದಾ ಆಗಿದ್ದಾರೆ. ಜಬರ್ದಸ್ತ್ ಲುಕ್‌ನಲ್ಲಿ ಮಾಸ್ ಆಗಿ ಕಂಡಿದ್ದಾರೆ. ಅನಸೂಯಾ ಸೀರೆಯುಟ್ಟು ಮೈ ತುಂಬಾ ಆಭರಣ ಧರಿಸಿ ಖಡಕ್ ಆಗಿ ಪೋಸ್ ಕೊಟ್ಟಿದ್ದಾರೆ.
ಕಾಲಕಾಲಕ್ಕೆ ತಮ್ಮ ಕುಟುಂಬದೊಂದಿಗೆ ಟ್ರಿಪ್ ಹೋಗುವ ನಟಿ ಈ ಕುರಿತ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ಅವರು ತಮ್ಮ ಪತಿ ಸುಶಾಂಕ್ ಭಾರದ್ವಾಜ್ ಅವರೊಂದಿಗೆ ಆನಂದಿಸಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಆ್ಯಂಕರ್ ಆಗಿ ಕೆರಿಯರ್ ಶುರುಮಾಡಿದ ಅನಸೂಯಾ ಸಧ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸಿನಿನಿಮಾಗಳಲ್ಲಿ ಅನಸೂಯ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.