- Home
- Entertainment
- Cine World
- ಕೆಟ್ಟ ಕಾಮೆಂಟ್ ಮಾಡ್ತಾರೆಂದು 30 ಲಕ್ಷ ಜನರನ್ನ ಬ್ಲಾಕ್ ಮಾಡಿದ ನಟಿ ಅನುಸೂಯ; ಫಾಲೋವರ್ಸ್ ಎಷ್ಟಿದ್ದಾರೆ?
ಕೆಟ್ಟ ಕಾಮೆಂಟ್ ಮಾಡ್ತಾರೆಂದು 30 ಲಕ್ಷ ಜನರನ್ನ ಬ್ಲಾಕ್ ಮಾಡಿದ ನಟಿ ಅನುಸೂಯ; ಫಾಲೋವರ್ಸ್ ಎಷ್ಟಿದ್ದಾರೆ?
ತೆಲುಗು ನಟಿ ಅನಸೂಯ ಒಂದು ಖಾಸಗಿ ವಾಹಿನಿ ಸಂದರ್ಶನವೊಂದರಲ್ಲಿ ತಾನು ಸೋಶಿಯಲ್ ಮೀಡಿಯಾದಲ್ಲಿ, ಕಾಮೆಂಟ್ ಮಾಡುತ್ತಿದ್ದ 30 ಲಕ್ಷ ಜನರನ್ನ ಬ್ಲಾಕ್ ಮಾಡಿದ್ದಾಗಿ ಹೇಳಿದ್ದಾರೆ. ಇದನ್ನ ಕೇಳಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
15

Image Credit : Instagram/ Anasuya Bharadwaj
ನಟಿ ಅನಸೂಯ
ನಟಿ ಅನಸೂಯ ಸೋಶಿಯಲ್ ಮೀಡಿಯಾ, ಟಿವಿ ಮತ್ತು ಸಿನಿಮಾಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಕ್ಷಣಂ, ರಂಗಸ್ಥಳಂ, ಸೋಗ್ಗದೆ ಚಿನ್ನಿ ನಾಯನ ಚಿತ್ರಗಳಲ್ಲಿ ನಟಿಸಿದ್ದಾರೆ. ಪುಷ್ಪ ಚಿತ್ರದಲ್ಲಿ ದಾಕ್ಷಾಯಿಣಿ ಪಾತ್ರದಲ್ಲಿ ಮಿಂಚಿದ್ರು. ಆಗಾಗ್ಗೆ ವಿವಾದಗಳಲ್ಲೂ ಸಿಲುಕಿಕೊಳ್ಳುತ್ತಾರೆ. ಈಗ 30 ಲಕ್ಷ ಜನರನ್ನ ಬ್ಲಾಕ್ ಮಾಡಿದ್ದಾಗಿ ಹೇಳಿ ಟ್ರೋಲ್ ಆಗಿದ್ದಾರೆ.
25
Image Credit : Instagram/Anasuya Bharadwaj
30 ಲಕ್ಷ ಜನರನ್ನ ಬ್ಲಾಕ್
ಹಿಂದೆ 'ಆಂಟಿ' ಅಂತ ಟ್ರೋಲ್ ಮಾಡಿದ್ದಕ್ಕೆ ಅನಸೂಯ ಅನೇಕರನ್ನ ಬ್ಲಾಕ್ ಮಾಡಿದ್ದರು. ಈಗ 30 ಲಕ್ಷ ಜನರನ್ನ ಬ್ಲಾಕ್ ಮಾಡಿದ್ದಾಗಿ ಹೇಳಿದ್ದಾರೆ. ಇದನ್ನ ಕೇಳಿ ನಿರೂಪಕಿ ಕೂಡ ಶಾಕ್ ಆಗಿದ್ದಾರೆ.
35
Image Credit : Instagram/Anasuya Bharadwaj
ಕೆಟ್ಟದಾಗಿ ಕಾಮೆಂಟ್ಸ್
ಯಾರಾದರೂ ಕೆಟ್ಟದಾಗಿ ಕಾಮೆಂಟ್ಸ್ ಮಾಡಿದರೆ ಅನಸೂಯ ಬ್ಲಾಕ್ ಮಾಡ್ತಾರಂತೆ. ಹೀಗೆ 30 ಲಕ್ಷ ಜನರನ್ನ ಬ್ಲಾಕ್ ಮಾಡಿದ್ದಾಗಿ ಹೇಳಿದ್ದಾರೆ. ನೆಟ್ಟಿಗರು ಇದನ್ನ ನಂಬೋಕೆ ಆಗ್ತಿಲ್ಲ. ಇಷ್ಟು ಫಾಲೋವರ್ಸ್ ನಮಗಿದ್ದರೆ ಜೀವನಕ್ಕೆ ದೊಡ್ಡ ದುಡಿಮೆ ಆಗಿರೋದು ಎಂದು ಕಾಲೆಳೆದಿದ್ದಾರೆ.
45
Image Credit : Youtube/ETV
ನಂಬೋಕೆ ಆಗ್ತಿಲ್ಲ
ದಿನಕ್ಕೆ 100 ಜನರನ್ನ ಬ್ಲಾಕ್ ಮಾಡಿದ್ರೂ 30 ಲಕ್ಷ ಜನರನ್ನ ಬ್ಲಾಕ್ ಮಾಡೋಕೆ ಆಗುತ್ತಾ ಅಂತ ನೆಟ್ಟಿಗರು ಪ್ರಶ್ನಿಸ್ತಿದ್ದಾರೆ. ಅನಸೂಯ ಹೇಳಿದ್ದು ಸುಳ್ಳು ಅಂತ ಟ್ರೋಲ್ ಮಾಡ್ತಿದ್ದಾರೆ.
ಇನ್ನು ನಟಿ ಅನುಸೂಯಾಗೆ ಇರೋದೆ 1.6 ಮಿಲಿಯನ್ (16 ಲಕ್ಷ) ಫಾಲೋವರ್ಸ್ ಇದ್ದಾರೆ. ಇವರು ಈಗಿರುವ ಫಾಲೋವರ್ಸ್‌ಗಿಂದ ದುಪ್ಪಟ್ಟು ಜನರನ್ನು ಬ್ಲಾಕ್ ಮಾಡಿದ್ದಾಗಿ ಹೇಳುತ್ತಿರುವುದಕ್ಕೆ ಕೆಲವರು ಟೀಕೆ ಮಾಡುತ್ತಿದ್ದಾರೆ.
55
Image Credit : Youtube/ETV
ಟ್ರೋಲ್ ಮಾಡದಂತೆ ಮನವಿ
ಅನಸೂಯ ನಿಜವಾಗ್ಲೂ ಅನೇಕ ಜನರನ್ನ ಬ್ಲಾಕ್ ಮಾಡಿರಬಹುದು. ಆದ್ರೆ 30 ಲಕ್ಷ ಜನ ಅನ್ನೋದು ಉತ್ಪ್ರೇಕ್ಷೆ ಇರಬಹುದು. ಟ್ರೋಲ್ ಮಾಡೋದು ತಪ್ಪು ಅಂತ ನಿರೂಪಕಿ ಹೇಳಿದ್ದಾರೆ.
Latest Videos